Farmers Protest in Delhi: ಡ್ರೋನ್ ಮೇಲೆ ಟೆನಿಸ್ ಬಾಲ್ ದಾಳಿ: ಪೊಲೀಸರ ತಂತ್ರಗಳಿಗೆ ಅನ್ನದಾತರ ಪ್ರತಿತಂತ್ರ..!

ಬ್ಯಾರಿಕೇಡ್ಗಳನ್ನ ತೆರವು ಮಾಡೋಕೆ ಕ್ರೇನ್..!
ಟ್ರಾಕ್ಟರ್ ಟೈರ್ಗಳನ್ನ ಸೀಳಿದ ಮೊಳೆ ವ್ಯೂಹ..!
ದಿನೇ ದಿನೇ ಹೆಚ್ಚುತ್ತಿದೆ ರೈರ ಹೋರಾಟದ ಕಿಚ್ಚು..!

First Published Feb 16, 2024, 4:48 PM IST | Last Updated Feb 16, 2024, 4:49 PM IST

ರೈತರ ಹೋರಾಟದ ಕಿಚ್ಚು ದಿನೇ ದಿನೇ ಹೆಚ್ಚಾಗ್ತಾ ಇದೆ. 10 ಬೇಡಿಕೆಗಳನ್ನ ಈಡೇರಿಸಬೇಕು ಅನ್ನೋ ನಿಟ್ಟಿನಲ್ಲಿ ಶುರುವಾಗಿರೋ ಈ ಹೋರಾಟ ಪೊಲೀಸ್(Police) ವರ್ಸಸ್ ರೈತ(Farmers) ಎಂಬಂತಾಗಿದೆ. ಆದ್ರೆ ಪೊಲೀಸರ ವ್ಯೂಹ ಬೇಧಿಸೋಕೆ ರೈತರು ಚಿತ್ರ ವಿಚಿತ್ರ ಪ್ಲಾನ್ಗಳನ್ನ ಮಾಡ್ತಾ ಇದಾರೆ. ಈ ಮಧ್ಯ ಕರ್ನಾಟಕದಿಂದ(Karnataka) ಪ್ರತಿಭಟನೆಗೆ ಹೊರಟಿದ್ದ ಸುಮಾರು 70 ರೈತರನ್ನ ಮಧ್ಯ ಪ್ರದೇಶದಲ್ಲಿ ಬಂಧಿಸಲಾಗಿದೆ. ರೈತರ ಕಿಚ್ಚು ದಿನೇ ದಿನೇ ಹೆಚ್ಚಾಗ್ತಾ ಇದೆ, ಜ್ವಾಲಾಮುಖಿ ಧಗಧಗಿಸ್ತಾ ಇದೆ. ದೆಹಲಿ ಚಲೋ ಹೋರಾಟವನ್ನ ಹತ್ತಿಕ್ಕೋಕೆ ಪೊಲೀಸರು ಹರಸಾಹಸ ಪಡ್ತಾ ಇದಾರೆ. ಪೊಲೀಸರು ಹೂಡುವ ಪ್ರತಿಯೊಂದು ಅಸ್ತ್ರಗಳಿಗೆ ರೈತರು ತಮ್ಮದೇ ಶೈಲಿಯಲ್ಲಿ ಪ್ರತ್ಯಾಸ್ತ್ರವನ್ನ ಪ್ರಯೋಗಿಸ್ತಾ ಇದಾರೆ.ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರನ್ನ ಚದುರಿಸೋಕೆ ಪೊಲೀಸರು ಅಶ್ರವಾಯು ಅಥವಾ ಟಿಯರ್ ಗ್ಯಾಸ್  ಪ್ರಯೋಗ ಮಾಡಿದ್ದರು. ಡ್ರೋನ್ (Drone) ಮೂಲಕ ರೈತರ ಮೇಲೆ ಗ್ಯಾಸ್ ದಾಳಿ ಮಾಡಿದ್ದರು. ಆ ಘಾಟಿಗೆ ರೈತರು ಚದುರಿಹೋಗಿದ್ದರು. ಪ್ರತಿಭಟನಾಕಾರರು ಶಂಭು ಗಡಿಯನ್ನು ತಲುಪಿ ಸ್ಥಳದಿಂದ ಬ್ಯಾರಿಕೇಡ್‌ಗಳನ್ನು ಎತ್ತಿದಾಗ, ಪೊಲೀಸರು ಪ್ರತಿದಾಳಿ ನಡೆಸಿದರು. ಪೊಲೀಸರು ಡ್ರೋನ್‌ಗಳ ಮೂಲಕ ಗಡಿಯ ಇನ್ನೊಂದು ಬದಿಯ ಮೇಲೆ ಕಣ್ಣಿಟ್ಟಿದ್ದರು. ಅದೇ ಸಮಯದಲ್ಲಿ, ಡ್ರೋನ್‌ಗಳಿಂದ ಅಶ್ರುವಾಯು ಶೆಲ್‌ಗಳನ್ನು ಸಹ ಬಿಡುಗಡೆ ಮಾಡಲಾಗಿತ್ತು.

ಇದನ್ನೂ ವೀಕ್ಷಿಸಿ:  Rajya Sabha Election: ನಡೆಯಲಿದ್ಯಾ ಅಡ್ಡ ಮತದಾನ..? ಏನಿದು ಮತ ಸಮೀಕರಣ..?

Video Top Stories