Today Horoscope: ಇಂದು ಬಿದಿಗೆ ಚಂದ್ರನ ದರ್ಶನ ಏಕೆ ಮಾಡಬೇಕು ? ಇದರಿಂದ ದೊರೆಯುವ ಫಲವೇನು ?

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

First Published Apr 10, 2024, 9:24 AM IST | Last Updated Apr 10, 2024, 9:24 AM IST

ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ,ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ಬುಧವಾರ, ದ್ವಿತೀಯ ತಿಥಿ, ಅಶ್ವಿನಿ-ಭರಣಿ ನಕ್ಷತ್ರ.

ಯುಗಾದಿ ಮಾರನೇ ದಿನ ಬಿದಿಗೆ ಚಂದ್ರನ ದರ್ಶನ ಮಾಡುವುದು ಒಳ್ಳೆಯದು. ಇದರಿಂದ ಮಾನಸಿಕ ತೊಡಕುಗಳು ದೂರವಾಗುತ್ತವೆ ಎನ್ನಲಾಗುತ್ತದೆ. ಕನ್ಯಾ ರಾಶಿಯವರಿಗೆ ಗಜಕೇಸರಿ ಯೋಗವಿದ್ದು, ನಿರೀಕ್ಷಿತ ಫಲ ಸಿಗಲಿದೆ. ಮಕ್ಕಳ ಸಮಾಧಾನದ ದಿನ. ಕಣ್ಣಿನ ಬಾಧೆ ಇರಲಿದೆ. ದುರ್ಗಾ ಕವಚ ಪಠಿಸಿ. ಸಿಂಹ ರಾಶಿಯವರಿಗೆ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ಲಾಭದ ದಿನ. ತಂದೆ-ಮಕ್ಕಳಲ್ಲಿ ಉತ್ತಮ ಬಾಂಧವ್ಯ. ಶುಭಕಾರ್ಯಗಳಲ್ಲಿ ಭಾಗಿಯಾಗುವಿರಿ. ಆದಿತ್ಯ ಹೃದಯ ಪಠಿಸಿ.

ಇದನ್ನೂ ವೀಕ್ಷಿಸಿ:  ಕುರುಬರ ಮಠದಲ್ಲಿ ದಲಿತ ಸ್ವಾಮೀಜಿಯ ಪ್ರತಿಮೆ ಇಟ್ಟಿದ್ದೇ ತಪ್ಪಾಯ್ತಾ?: ಬಳ್ಳಾರಿಯಲ್ಲಿ ಶುರುವಾಯ್ತು ಪ್ರತಿಮೆ ಪಾಲಿಟಿಕ್ಸ್​​..!

Video Top Stories