ಕುರುಬರ ಮಠದಲ್ಲಿ ದಲಿತ ಸ್ವಾಮೀಜಿಯ ಪ್ರತಿಮೆ ಇಟ್ಟಿದ್ದೇ ತಪ್ಪಾಯ್ತಾ?: ಬಳ್ಳಾರಿಯಲ್ಲಿ ಶುರುವಾಯ್ತು ಪ್ರತಿಮೆ ಪಾಲಿಟಿಕ್ಸ್​​..!

ಗ್ರಾಮ ಇವತ್ತು ಅಕ್ಷರಶಃ ಬೆಂಕಿ ಉಂಡೆಯಾಗಿದೆ. ಸಹೋದರರಂತಿದ್ದ ಜನರ ಮಧ್ಯೆ ಜಾತಿ ಬೀಜ ಮೊಳಕೆ ಹೊಡೆದಿದೆ. ಒಂದೇ ಒಂದು ಪ್ರತಿಮೆಗಾಗಿ ಕೈಯಲ್ಲಿ ಕಲ್ಲು ಹಿಡಿದುಕೊಂಡು ಒಬ್ಬರ ಮೇಲೆ ಒಬ್ಬರು ಎಸೆಯುತ್ತಿದ್ದಾರೆ. 
 

First Published Apr 9, 2024, 11:56 AM IST | Last Updated Apr 9, 2024, 11:56 AM IST

ಬಳ್ಳಾರಿ(ಏ.09):  ಅದೊಂದು ಪುಟ್ಟ ಹಳ್ಳಿ... ಅಲ್ಲಿ ಜನ ಅಣ್ಣ ತಮ್ಮಂದಿರಂತೆ ಇದ್ರು... ಜಾತಿ ಬೇಧವಿಲ್ಲದೇ ಆ ಮಠಕ್ಕೆ ಹೋಗ್ತಿದ್ರು... ಕುರುಬರ ಮಠವಾದ್ರೂ ಪೂಜೆ ಮಾಡ್ತಿದ್ದಿದ್ದು ದಲಿತ ಸ್ವಾಮೀಜಿ.. ಒಂದೇ ಮಾತಿನಲ್ಲಿ ಹೆಳಬೇಕಂದ್ರೆ ಅದೊಂದು ಮಾದರಿ ಗ್ರಾಮವಾಗಿತ್ತು.. ಆದ್ರೆ ಇದೇ ಗ್ರಾಮ ಇವತ್ತು ಅಕ್ಷರಶಃ ಬೆಂಕಿ ಉಂಡೆಯಾಗಿದೆ. ಸಹೋದರರಂತಿದ್ದ ಜನರ ಮಧ್ಯೆ ಜಾತಿ ಬೀಜ ಮೊಳಕೆ ಹೊಡೆದಿದೆ. ಒಂದೇ ಒಂದು ಪ್ರತಿಮೆಗಾಗಿ ಕೈಯಲ್ಲಿ ಕಲ್ಲು ಹಿಡಿದುಕೊಂಡು ಒಬ್ಬರ ಮೇಲೆ ಒಬ್ಬರು ಎಸೆಯುತ್ತಿದ್ದಾರೆ. 

ಯಸ್.. ಎರ್ರಿತಾತ ರವರ ಮಠದಲ್ಲಿ ಅವರ ಶಿಷ್ಯ ಎರ್ರಪ್ಪ ತಾತನ ಪ್ರತಿಮೆ ಎಂಟ್ರಿ ಕೊಡುತ್ತೆ.. ಬಳಿಕ ಒಂದು ಸಮುದಾಯ ಕೋರ್ಟ್ ಮೆಟ್ಟಿಲನ್ನೂ ಹತ್ತುತ್ತೆ.. ಕೋರ್ಟ್ ಪ್ರತಿಮೆಯನ್ನ ತೆರವುಗಳಿಸುವಂತೆಯೂ ತೀರ್ಪು ಕೊಡುತ್ತೆ.. ಆದ್ರೆ ಯಾವಾಗ ತಮ್ಮ ಸ್ವಾಮೀಜಿಯ ಪ್ರತಿಮೆ ತೆರವು ಆಯ್ತೋ ದಲಿತ ಸಮುದಾಯದ ಸಹನೆ ಕಟ್ಟೆ ಹೊಡೆಯಿತು. ಬೀದಿಗೆ ಬರುವ ನಿರ್ಧಾರ ಮಾಡ್ತು ಪರಿಣಾಮವೇ ಈ ಕಲ್ಲು ತೂರಾಟ.

ದಿಂಗಾಲೇಶ್ವರ ಶ್ರೀ ಏನೇ ಮಾತಾಡಿದ್ರು ಅದು ನನಗೆ ಆಶೀರ್ವಾದ: ಪ್ರಲ್ಹಾದ್ ಜೋಶಿ

ಎರ್ರಪ್ಪ ತಾತನ ಪ್ರತಿಮೆ ತೆರವಾಗ್ತಿದ್ದಂತೆ ಆ ಗ್ರಾಮ ಅಕ್ಷರಶಹಃ ಬೆಂಕಿ ಉಂಡೆಯಾಗಿಬಿಡ್ತು. ಎರಡು ಸಮುದಾಯದವರ ನಡುವೆ ಕಲ್ಲು ತೂರಾಟ ನಡೆದಿತ್ತು.. ಇನ್ನೂ ಆ ಕಲ್ಲು ತೂರಾಟದಲ್ಲಿ ಪೊಲೀಸರಿಗೂ ಪೆಟ್ಟು ಬಿದ್ದಿತ್ತು. ಆದ್ರೆ ಘಟನೆ ನಡೆದಿ 24 ಗಂಟೆಯಾದ್ರೂ ಒಂದೇ ಒಂದು ಪ್ರಕರಣ ದಾಖಲಾಗಿರಲಿಲ್ಲ. ಇನ್ನೂ ಇದಕ್ಕೆ ಸರ್ಕಾರ ಕೂಡ ಕಾರಣ ಅಂತಲೂ ಮಾತುಗಳು ಬರೋದಕ್ಕೆ ಶುರುವಾಯ್ತು. ಆದ್ರೆ ಯಾವಾಗ ಸರ್ಕಾರ ವಿರುದ್ಧವೇ ಮಾತುಗಳು ಕೇಳಿಬಂದ್ವೋ ಪೊಲೀಸರು ಕೇಸ್ ದಾಖಲಿಸಿಕೊಂಡು 24 ಮಂದಿಯನ್ನ ವಶಕ್ಕೆ ಪಡೆದುಕೊಂಡ್ರು.

ಪವಾಡ ಪುರುಷರಿಗೆ ಇರದ ಜಾತಿ ಬೇದ ಈಗೀನ ಜನ್ರಿಗೆ ಯಾಕೆ ಬಂತು..? ಅನ್ನದು ದೇವರೇ ಬಲ್ಲ.. ಆದಷ್ಟು ಬೇಗ ಈ ಪ್ರಕರಣ ಸುಖಾಂತ್ಯ ಕಾಣಲಿ ಜಾತಿ ಬೇದ ಮರೆತು ಈ ಹಿಂದಿನಂತೆ ಅಲ್ಲಿನ ಜನ ಸಂತೋಷದಿಂದ ಬದುಕಲಿ ಅನ್ನೋದೆ ನಮ್ಮೆಲ್ಲ ಆಶಯ. 

Video Top Stories