
Mysuru Crime News: ತಲೆ ಕೂದಲು ಉದುರುವ ಸಮಸ್ಯೆ: ಬೇಸತ್ತ ಯುವತಿ ಆತ್ಮಹತ್ಯೆ
Mysuru Crime News: ಕೂದಲು ಸಂಪೂರ್ಣವಾಗಿ ಕಳೆದುಕೊಂಡ ಹಿನ್ನಲೆ ಬೇಸತ್ತ ಕಾವ್ಯಶ್ರೀ ತನ್ನ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ.
ಮೈಸೂರು (ಜು. 02): ತಲೆ ಕೂದಲು ಉದುರುವ ಸಮಸ್ಯೆಯಿಂದ ಬೇಸರಗೊಂಡ ಯುವತಿ ನೇಣಿಗೆ ಶರಣಾಗಿರುವಂತಹ ಘಟನೆ ಮೈಸೂರಿನ ರಾಘವೇಂದ್ರ ನಗರ ಬಡಾವಣೆಯಲ್ಲಿ ನಡೆದಿದೆ. ಕಾವ್ಯಶ್ರೀ (22) ಆತ್ಮಹತ್ಯೆ ಮಾಡಿಕೊಂಡ ಯುವತಿ. ಕಳೆದ ಹಲವು ದಿನಗಳಿಂದ ಪತ್ಮಂಡೆ ಸಮಸ್ಯೆಯಿಂದ ಬಳಲುತ್ತಿದ್ದ ಕಾವ್ಯಶ್ರೀಗೆ ನಿರಂತರವಾಗಿ ಕೂದಲು ಉದುರುತ್ತಿತ್ತು. ಸಾಕಷ್ಟು ಚಿಕಿತ್ಸೆ ಪಡೆದರೂ ಪರಿಹಾರ ದೊರೆತಿರಲಿಲ್ಲ. ಕೂದಲು ಸಂಪೂರ್ಣವಾಗಿ ಕಳೆದುಕೊಂಡ ಹಿನ್ನಲೆ ಬೇಸತ್ತ ಕಾವ್ಯಶ್ರೀ ತನ್ನ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ. ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ನೋಡಿ:ಮಗಳ ಸಂಸಾರ ಸರಿ ಮಾಡಲು ಬಂದವರು ಹೆಣವಾದ್ರು, ಅದೊಂದು ಮನೆಗಾಗಿ ನಾಲ್ವರನ್ನ ಕೊಂದುಬಿಟ್ಟ