ಮಗಳ ಸಂಸಾರ ಸರಿ ಮಾಡಲು ಬಂದವರು ಹೆಣವಾದ್ರು, ಅದೊಂದು ಮನೆಗಾಗಿ ನಾಲ್ವರನ್ನ ಕೊಂದುಬಿಟ್ಟ

ರಾಜಿಗೆ ಬಂದ ನಾಲ್ವರು ಬೆಂದು ಹೋದ್ರು..! ಪೆಟ್ರೋಲ್ ರೆಡಿ ಮಾಡಿಟ್ಟುಕೊಂಡಿದ್ದ ಕ್ರೂರಿ ಅಳಿಯ..! ಮಗಳ ಸಂಸಾರದ ಗಲಾಟೆ ಹೆಣ ಹಾಕಿತ್ತಲ್ಲೋ..! ಅದೊಂದು ಮನೆಗಾಗಿ ನಾಲ್ವರನ್ನ ಕೊಂದುಬಿಟ್ಟ..!

Share this Video
  • FB
  • Linkdin
  • Whatsapp

ಯಾದಗಿರಿ, (ಜುಲೈ.02): ಆ ಗಂಡ ಹೆಂಡತಿ ಸಂಸಾರಕ್ಕೆ 17 ವರ್ಷ... ಗಂಡ ಆಟೋ ಡ್ರೈವರ್ ಆದ್ರೆ ಹಂಡತಿ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋನ ಮೆಕಾನಿಕ್. ಇವರ ದಾಂಪತ್ಯಕ್ಕೆ ಇಬ್ಬರು ಮುದ್ದಾದ ಮಕ್ಕಳು. ಅಬ್ಬಾ ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಿತ್ತು ಇವರ ಸಂಸಾರ. ಆದ್ರೆ ಅದೊಂದು ಸಿಲ್ಲಿ ರೀಸನ್ ಇವರ ದಾಂಪತ್ಯ ಜೀವನಕ್ಕೆ ಫುಲ್ ಸ್ಟಾಪ್ ಇಟ್ಟುಬಿಟ್ಟಿತ್ತು. ಅದಯಾರ ಕಣ್ಣು ಬಿತ್ತೋ ಏನೋ ಇವರ ಮೇಲೆ. ಇಬ್ಬರೂ ಮತ್ತೆ ಒಂದಾಗಲಾರದಷ್ಟು ದೂರ ಆಗಿಬಿಟ್ರು. 

Yadgir: ವಿಚ್ಛೇದನ ಕೊಡಲು ಒಪ್ಪದ ಪತ್ನಿ ವಿರುದ್ಧ ಸಂಚು ರೂಪಿಸಿದ ಪತಿ!

ಆದ್ರೆ ಹೆಣ್ಣು ಹೆತ್ತವರು ಮಗಳ ಸಂಸಾರ ಸರಿ ಮಾಡಲು ಮುಂದಾಗಿದ್ರು. ರಾಜಿ ಪಂಚಾಯ್ತಿ ಮಾಡಲು ಅಳಿಯನ ಮನೆಗೆ ಹೋದ್ರು. ಆದ್ರೆ ರಾಜಿ ಪಂಚಾಯ್ತಿಗೆ ಎಂದು ಕರೆಸಿಕೊಂಡ ಅಳಿಯ ಕರ್ನಾಟಕವೇ ಬೆಚ್ಚಿ ಬೀಳಿಸೋ ಕೆಲಸ ಮಾಡಿದ್ದ. ಹೀಗೆ ಅಳಿಯ ಮಗಳನ್ನ ಒಂದು ಮಾಡಲು ಹೋದವರಿಗೆ ಶಾಕ್ ಕೊಟ್ಟ ರೌಡಿ ಅಳಿಯನ ಕಥೆಯೇ ಇವತ್ತಿನ ಎಫ್.ಐ.ಆರ್.......

Related Video