ಹುಡುಗಿ ಹೆಸರಲ್ಲಿ ಬಂದಿತ್ತು ಇನ್ಸ್ಟಾಗ್ರಾಂ ಮೆಸೇಜ್: 2 ದಿನ ಚಾಟ್‌ ಮಾಡಿದವನು ಸತ್ತೇ ಹೋದ..!

ಪ್ರಜ್ವಲ್ನನ್ನ ಆತ ಇದ್ದ ಓಣಿಯವರೇ ಕೊಂದು ಮುಗಿಸಿದ್ದಾರೆ. ಒಟ್ಟಿಗೆ ಆಡಿ ಬೆಳದವರೇ ಮಚ್ಚು ಬೀಸಿದ್ದಾರೆ. ಅಷ್ಟಕ್ಕೂ ಜೊತೆಗಿದ್ದವರೇ ಅವನ ಕಥೆ ಮುಗಿಸಿದ್ದೇಕೆ ಅನ್ನೋದನ್ನ ಕೆದುಕಿದಾಗ ಗೊತ್ತಾಗಿದ್ದು ಒಂದು ಇನ್ಸ್ಟಾಗ್ರಾಮ್ ಮೆಸೆಜ್ ಕಥೆ. 

First Published Sep 30, 2023, 1:49 PM IST | Last Updated Sep 30, 2023, 1:49 PM IST

ಬೆಂಗಳೂರು(ಸೆ.30):  ಅವನು ಇನ್ನೂ ಪಿಯುಸಿ ಓದುತ್ತಿದ್ದ ಹುಡುಗ, ಕಡುಬಡತನದಲ್ಲಿ ಹುಟ್ಟಿದ್ರೂ ಆತನ ಹೆತ್ತವರು ಈತನ ಓದಿಗೆ ಏನೂ ಕಡಿಮೆ ಮಾಡಿರಲಿಲ್ಲ. ಈತನೂ ಆಟ, ಪಾಠ ಅಂತ ಆರಾಮಾಗಿದ್ದ. ಆದ್ರೆ ಆವತ್ತೊಂದು ದಿನ ಇದೇ ಹುಡುಗ ಮರ್ಡರ್ ಆಗಿಬಿಟ್ಟ. ನಡುರಸ್ತೆಯಲ್ಲೇ ಹಂತಕರು ಅವನ ಕಥೆ ಮುಗಿಸಿದ್ರು. ಇನ್ನೂ ಇದೇ ಕೊಲೆ ಕೇಸ್ ಬೆನ್ನತ್ತಿದ್ದ ಪೊಲೀಸರಿಗೆ ಗೊತ್ತಾಗಿದ್ದು ಆ ಯುವಕನ ಕೊಲೆಗೆ ಕಾರಣ ಇನ್ಸ್ಟಾಗ್ರಾಂ ಅಂತ. ಯಸ್.. ಇನ್ಸ್ಟಾದಲ್ಲಿ ಫುಲ್ ಆ್ಯಕ್ಟೀವ್ ಆಗಿದ್ದವನನ್ನ ಅದೇ ಇನ್ಸ್ಟಾ ಬಲಿ ತಗೆದುಕೊಂಡಿದೆ. ಅತನಿಗೆ ಬಂದ ಒಂದು ಮೆಸೆಜ್ ಆತನ ಬದುಕಿಗೆ ಫುಲ್ ಸ್ಟಾಪ್ ಇಟ್ಟಿದೆ. ಹಾಗಾದ್ರೆ ಆ ಯುವಕನ ಕೊಲೆಗೆ ಕಾರಣವಾದ ಆ ಮೆಸೆಜ್ ಯಾವುದು..? ಆತನನ್ನ ಕೊಂದವ ಯಾರು..? ಇದೆಲ್ಲಾವನ್ನ ತಿಳಿದುಕೊಳ್ಳೋದೇ ಇವತ್ತಿನ ಎಫ್.ಐ.ಆರ್.

ಕೈಗೆ ಬಂದ ಮಗ ಹೀಗೆ ಸತ್ತು ಹೋಗ್ತಾನೆ ಅಂದ್ರೆ ಯಾವ ತಂದೆ ತಾಯಿ ತಾನೇ ಸುಮ್ಮನಿರ್ತಾರೆ. ಇನ್ನೂ ಪ್ರಜ್ವಲ್ನನ್ನ ಆತ ಇದ್ದ ಓಣಿಯವರೇ ಕೊಂದು ಮುಗಿಸಿದ್ದಾರೆ. ಒಟ್ಟಿಗೆ ಆಡಿ ಬೆಳದವರೇ ಮಚ್ಚು ಬೀಸಿದ್ದಾರೆ. ಅಷ್ಟಕ್ಕೂ ಜೊತೆಗಿದ್ದವರೇ ಅವನ ಕಥೆ ಮುಗಿಸಿದ್ದೇಕೆ ಅನ್ನೋದನ್ನ ಕೆದುಕಿದಾಗ ಗೊತ್ತಾಗಿದ್ದು ಒಂದು ಇನ್ಸ್ಟಾಗ್ರಾಮ್ ಮೆಸೆಜ್ ಕಥೆ.. 

ಪ್ರೇಮಿಯ ಮೊಬೈಲ್‌ನಲ್ಲಿ ಪ್ರೇಯಸಿಯ ವಿಡಿಯೋಗಳು: ಹೆದರಿಸಿ ಅತ್ಯಾಚಾರ ನಡೆಸಿದ್ದು ಎಷ್ಟು ಜನ ಗೊತ್ತಾ?

ಅವರೆಲ್ಲಾ ಒಟ್ಟಿಗೆ ಆಡಿ ಬೆಳೆದವರು... ಒಬ್ಬರನ್ನೊಬ್ಬರು ಕಿಚಾಯಿಸೋದು, ರೇಗಿಸೋದು ಕಾಮನ್... ಹೀಗಿದ್ದವರು ಆವತ್ತೊಂದು ದಿನ ಪ್ರಜ್ವಲ್ನನ್ನ ಬಕ್ರ ಮಾಡಲು ಫೇಕ್ ಇನ್ಸ್ಟಾಗ್ರಾಂ ಐಡಿ ಕ್ರಿಯೇಟ್ ಮಾಡಿ ಹುಡುಗಿ ಹೆಸರಲ್ಲಿ ಮೆಸೆಜ್ ಮಾಡ್ತಾರೆ. ಇನ್ನೂ ಪ್ರಜ್ವಲ್ ಹುಡುಗಿ ಅಂದುಕೊಂಡು ಚೆನ್ನಾಗಿ ಚಾಟ್ ಮಾಡ್ತಾನೆ. ಅದ್ರೆ 2 ದಿನದ ಬಳಿಕ ತನಗೆ ಮೆಸೆಜ್ ಮಾಡಿದ್ದು ಹುಡುಗಿ ಅಲ್ಲ ಬದಲಿಗೆ ಆತನ ಸ್ನೇಹಿತರೇ ಅನ್ನೋದು ಗೊತ್ತಾಗಿಬಿಡುತ್ತೆ. ಪ್ರಜ್ವಲ್ ರಾಂಗ್ ಆಗಿ ಮೆಸೆಜ್ ಮಾಡಿದವರಿಗೆಲ್ಲಾ ಕ್ಲಾಸ್ ತೆಗೆದುಕೊಳ್ತಾನೆ. ನಂತರ ಅಲ್ಲಿ ಇದೇ ವಿಷಯಕ್ಕೆ ಜೋರು ಜಗಳ ಆಗುತ್ತೆ.. ರಾಜಿ ಪಂಚಾಯ್ತಿಯೂ ಆಗುತ್ತೆ. ಅದ್ರೆ ಇದರ ನಡುವಲ್ಲೇ ಪ್ರಜ್ವಲ್ನ ಮಾತುಗಳಿಂದ ಸಿಟ್ಟಾದ ಗೆಳೆಯರು ಸೀದಾ ಮಚ್ಚು ಬೀಸೇ ಬಿಡ್ತಾರೆ. 

ಓದುವ ವಯಸ್ಸಿನಲ್ಲಿ ಮೊಬೈಲ್ ಗೀಳಿಗೆ ಬಿದ್ದಿರುವ ಯುವ ಜನಾಂಗ ಮಾಡಬಾರದ ಕೆಲಸ ಮಾಡಿ ಜೀವನ ಹಾಳು ಮಾಡಿಕೊಳ್ತಿರುವುದು ದುರಂತವೇ ಸರಿ. ಸೋಷಿಯಲ್ ಮೀಡಿಯಾದಿಂದ ಆಗುವ ಅವಾಂತರಗಳಿಗೆ ಇದು ಒಂದು ತಾಜಾ ಉದಾಹರಣೆ. 

Video Top Stories