ಪ್ರೇಮಿಯ ಮೊಬೈಲ್‌ನಲ್ಲಿ ಪ್ರೇಯಸಿಯ ವಿಡಿಯೋಗಳು: ಹೆದರಿಸಿ ಅತ್ಯಾಚಾರ ನಡೆಸಿದ್ದು ಎಷ್ಟು ಜನ ಗೊತ್ತಾ?

ಖಾಸಗಿ ವಿಡಿಯೋ ಹಾಗೂ ಫೋಟೋಗಳನ್ನು ಬಳಸಿಕೊಂಡು ಯುವತಿಗೆ ಕಳೆದ ಒಂದು ವರ್ಷದಿಂದ ಬ್ಲ್ಯಾಕ್‌ಮೇಲ್‌ ಮಾಡಿ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದಡಿ ಮೂವರನ್ನು ಕೊಡಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು (ಆ.03): ಖಾಸಗಿ ವಿಡಿಯೋ ಹಾಗೂ ಫೋಟೋಗಳನ್ನು ಬಳಸಿಕೊಂಡು ಯುವತಿಗೆ ಕಳೆದ ಒಂದು ವರ್ಷದಿಂದ ಬ್ಲ್ಯಾಕ್‌ಮೇಲ್‌ ಮಾಡಿ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದಡಿ ಮೂವರನ್ನು ಕೊಡಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. 23 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ವಿದ್ಯಾರಣ್ಯಪುರದ ಆ್ಯಂಡಿ ಜಾರ್ಜ್‌, ಸಂತೋಷ್‌, ಶಶಿ ಎಂಬುವವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಮೊಬೈಲ್‌, ಲ್ಯಾಪ್‌ಟಾಪ್‌, ಪೆನ್‌ ಡ್ರೈವ್‌ ಜಪ್ತಿ ಮಾಡಲಾಗಿದೆ. ಬಂಧಿತ ಆರೋಪಿಗಳ ಪೈಕಿ ಆ್ಯಂಡಿ ಜಾರ್ಜ್‌ ಖಾಸಗಿ ಕಾಲೇಜಿನಲ್ಲಿ ಡಾನ್ಸ್‌ ಟೀಚರ್‌ ಆಗಿದ್ದಾನೆ. ಸಂತೋಷ್‌ ಮತ್ತು ಶಶಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏನಿದು ಪ್ರಕರಣ?: ಕಳೆದ ಮೂರು ವರ್ಷದ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಸಂತ್ರಸ್ತೆ ಹಾಗೂ ಆ್ಯಂಡಿ ಜಾರ್ಜ್‌ ಸ್ನೇಹಿತರಾಗಿದ್ದರು. ಕೆಲ ಸಮಯದ ಬಳಿಕ ಆತ್ಮೀಯತೆಗೆ ಬೆಳೆದು ಪರಸ್ಪರ ಪ್ರೀತಿಸಲು ಆರಂಭಿಸಿದ್ದರು. ಬಳಿಕ ಇಬ್ಬರೂ ಹಲವು ಬಾರಿ ಭೇಟಿಯಾಗಿ ನಗರದ ಹಲವೆಡೆ ಸುತ್ತಾಡಿದ್ದರು. ಈ ಸಮಯದಲ್ಲಿ ಆರೋಪಿ ಆ್ಯಂಡಿ ಜಾರ್ಜ್‌ ಸಂತ್ರಸ್ತೆ ಜತೆಗೆ ಕಳೆದ ಖಾಸಗಿ ಕ್ಷಣಗಳನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದ. ಕೆಲ ದಿನಗಳ ಬಳಿಕ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಸಂತ್ರಸ್ತೆ ಆ್ಯಂಡಿ ಜಾರ್ಜ್‌ನಿಂದ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದಳು.

ಇದರಿಂದ ಕೋಪಗೊಂಡ ಆರೋಪಿ ಆ್ಯಂಡಿ ಜಾರ್ಜ್‌, ತನ್ನ ಬಳಿ ಇದ್ದ ಖಾಸಗಿ ಕ್ಷಣದ ವಿಡಿಯೋ ಹಾಗೂ ಫೋಟೊಗಳನ್ನು ಸಂತ್ರಸ್ತೆಗೆ ಕಳುಹಿಸಿ ಬೆದರಿಕೆ ಹಾಕಿದ್ದ. ತಾನು ಕರೆದ ಕಡೆಗೆ ಬರಬೇಕು. ಇಲ್ಲವಾದರೆ, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹಾಗೂ ಫೋಟೊಗಳನ್ನು ಹರಿಬಿಡುವುದಾಗಿ ಬ್ಲ್ಯಾಕ್‌ಮೇಲ್‌ ಮಾಡಿದ್ದ. ಇದರಿಂದ ಹೆದರಿದ ಸಂತ್ರಸ್ತೆ, ಆ್ಯಂಡಿ ಜಾರ್ಜ್‌ ಹೇಳಿದಂತೆ ಕೇಳಲಾರಂಭಿಸಿದ್ದಳು. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.

Related Video