ಯುವಕ ಅಜಿತ್ ಕೊಲೆ ಪ್ರಕರಣ ..ಹಂತಕರಿಗೆ ದರ್ಶನ್‌ ನಟನೆಯ ಕರಿಯ ಸಿನಿಮಾವೇ ಸ್ಪೂರ್ತಿಯಂತೆ !

ಬೆಂಗಳೂರಿನ ಯುವಕ ಅಜಿತ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕರು ಮರ್ಡರ್‌ಗೂ ಮೊದಲು ತಮಿಳುನಾಡಿಗೆ ಹೋಗಿ ದೇವಸ್ಥಾನದಲ್ಲಿ ಪೂಜೆ ಮಾಡಿಸಿದ್ದರಂತೆ.

First Published Jul 5, 2024, 1:50 PM IST | Last Updated Jul 5, 2024, 1:51 PM IST

ಬೆಂಗಳೂರಿನ(Bengaluru) ಯುವಕ ಅಜಿತ್‌ ಕೊಲೆ ಪ್ರಕರಣಕ್ಕೆ(Murder Case) ಸಂಬಂಧಿಸಿದಂತೆ ಹಂತಕರಿಗೆ ನಟ ದರ್ಶನ್ ನಟನೆಯ ಕರಿಯ ಸಿನಿಮಾವೇ ಸ್ಫೂರ್ತಿಯಂತೆ. 'ಆ ರೀತಿ' ಮಾಡಿದರೆ ಟಾರ್ಗೆಟ್ ಮಿಸ್ಸಾಗೋದೆ ಇಲ್ಲ ಎಂಬ ನಂಬಿಕೆಯಿಂದ, ಹತ್ಯೆಗೆ ಮುಂಚೆ ಹಂತಕರು ತಯಾರಿ ನಡೆಸಿದ್ದರಂತೆ. ಅಜಿತ್ ಎಂಬಾತನ್ನ ಹೊಡೆಯೋಕೆ ಮುಂಚೆ ಹಂತಕರು ಪೂರ್ವ ತಯಾರಿ ಮಾಡಿದ್ದರಂತೆ. ಈಗಾಗಲೇ ಹತ್ಯೆ ಸಂಬಂಧ ಕಿರಣ್ , ರಾಹುಲ್ ಬಂಧಿತರಾಗಿದ್ದಾರೆ. ವಿಚಾರಣೆ ವೇಳೆ ಹಂತಕರ ದೈವ ಭಕ್ತಿ ಬಯಲಾಗಿದೆ. ಟ್ರಾವೆಲ್ ಹಿಸ್ಟರಿ ತೆಗೆದಾಗ ಹತ್ಯೆಗೆ ಮುಂಚೆ ತಮಿಳುನಾಡಿಗೆ ಹೋಗಿದ್ದ ವಿಚಾರ ತಿಳಿದು ಪೊಲೀಸರು ಶಾಕ್‌ ಆಗಿದ್ದಾರೆ. ಸಿನಿಮಾ ಪ್ರಭಾವದಿಂದ ತಮಿಳುನಾಡಿಗೆ(Tamilnadu) ಹೋಗಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಹತ್ಯೆ ಸಕಸ್ಸ್ ಆಗಲು ಮಾರಕಾಸ್ತಗಳ ಜೊತೆ ತಮಿಳುನಾಡಿಗೆ ಹೋಗಿದ್ದ ಹಂತಕರು, ಅಲ್ಲಿನ ದೇವಸ್ಥಾನವೊಂದರ ಮುಂದೆ ಮಾರಕಾಸ್ತ್ರ ಇಟ್ಟು ಪೂಜೆ ಮಾಡಿದ್ದರಂತೆ. ಕರಿಯ ಎಂಬ ದರ್ಶನ್ ಚಿತ್ರದಲ್ಲಿ ಕೂಡ ಅದೇ ಸೀನ್ ಇದೆ. ಈ ನಂಬಿಕೆ ಮೇಲೆ ದೇವಳಕ್ಕೆ  ತೆರಳಿ ಪೂಜೆಯನ್ನು ಹಂತಕರು ಮಾಡಿಸಿದ್ದರು ಎನ್ನಲಾಗ್ತಿದೆ.

ಇದನ್ನೂ ವೀಕ್ಷಿಸಿ:  ಹತ್ರಾಸ್‌ನಲ್ಲಿ ಕಾಲ್ತುಳಿತ ಪ್ರಕರಣ: ಯೋಗಿ ಸರ್ಕಾರದ ವಿರುದ್ಧ ರಾಹುಲ್‌ ವಾಗ್ದಾಳಿ, ಭೋಲೆ ಬಾಬಾ ನಾಪತ್ತೆ