ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಯ್ತು ಕೇಸ್..! ಲಾಕಪ್ ಡೆತ್ ಆರೋಪ.. ಸ್ಟೇಷನ್ ಉಡೀಸ್!

ಪೊಲೀಸರಿಂದ ಸತ್ತಿಲ್ಲ ಎಂದ ಆದಿಲ್ ತಂದೆ 
ಚನ್ನಗಿರಿ ಸ್ಟೇಷನ್ ಮುಂದೆ ಭಾರೀ ಹೈಡ್ರಾಮಾ
ಡಿವೈಎಸ್ಪಿ, ಇನ್ ಸ್ಪೆಕ್ಟರ್ ಇಬ್ಬರೂ ಅಮಾನತು
ಯುವಕನದ್ದು ಲಾಕಪ್ ಡೆತ್ ಅಲ್ಲ ಎಂದ ಸಿಎಂ

First Published May 26, 2024, 3:46 PM IST | Last Updated May 26, 2024, 3:47 PM IST


ಅವನು ಮಟ್ಕಾ(Matka) ಬರೆಯುತ್ತಿದ್ದವನು. ಅದೇ ಅವನ ಬ್ಯುಸಿನೆಸ್. ಈಗಾಗಲೇ ಅವನ ಮೇಲೆ ಮೂರು ಕೇಸ್‌ಗಳಿವೆ. ಅದೇ ಕೇಸ್ ಮೇಲೆ ನಿನ್ನೆ ಅವನನ್ನ ಪೊಲೀಸ್ ಠಾಣೆಗೆ ಕರೆತಂದಿದ್ರು. ಆದ್ರೆ ಆತ ಠಾಣೆಗೆ ಬಂದ 10 ನಿಮಿಷದಲ್ಲೇ ಆತ ಕುಸಿದು ಬಿದ್ದು ಪ್ರಾಣಬಿಟ್ಟಿದ್ದ. ಯಾವಾಗ ಆತ ಸತ್ತ ಅನ್ನೋದು ಗೊತ್ತಾಯ್ತೋ. ದುಷ್ಕರ್ಮಿಗಳ (lockup death)ತಂಡ ಠಾಣೆ ಎದುರು ಬಂತು. ನೋಡ ನೋಡ್ತಿದ್ದಂತೆ ಠಾಣೆ(Channagiri police station) ಮತ್ತು ಪೊಲೀಸ್ ವಾಹನಗಳನ್ನ ಪುಡಿ ಪುಡಿ ಮಾಡಿದ್ರು. ಎಷ್ಟೇ ಆಗಲಿ ಅವರು ಹೆತ್ತವರು. ಮಗನನ್ನ ಕಳೆದುಕೊಂಡ ನೋವಲ್ಲಿ ಹೀಗೆಲ್ಲಾ ಮಾತನ್ನಾಡ್ತಿದ್ದಾರೆ. ನಿಜ ಏನು ಅನ್ನೋದು ತನಿಖೆಯಿಂದ ಗೊತ್ತಾಗಲಿದೆ. ಆದ್ರೆ ಇದೇ ಪ್ರಕರಣ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿಬಿಡ್ತು. ಇತ್ತಿಚೆಗೆ ಪ್ರತೀ ಕೊಲೆಗೂ(Murder) ರಾಜಕೀಯ ಕೆಸರೆರಚಾಟ ನಡೆಯುತ್ತಿದೆ. ಈಗ ಆದೀಲ್ ಸಾವಿನಲ್ಲೂ(Adil Died) ರಾಜಕೀಯ ಶುರುವಾಗಿದೆ. ಸರ್ಕಾರ ಆದೀಲ್ ಸಾವಿಗೆ ಆತನಿಗಿದ್ದ ಖಾಯಿಲೇಯೇ ಕಾರಣ ಅಂದ್ರೆ ವಿರೋಧ ಪಕ್ಷಗಳು ಮತ್ತೆ ಕಾನೂನು ಸುವ್ಯಸ್ಥೆಯ ಪ್ರಶ್ನೆ ಎತ್ತಿದೆ.. ಇದರ ನಡುವೆ. ಆದೀಲ್ನನ್ನ FIR ಆಗದೇಯೇ ಬಂಧಿಸಿದ್ದ ಇಬ್ಬರು ಆಧಿಕಾರಿಗಳನ್ನ ಸರ್ಕಾರ ಅಮಾನತ್ತು ಮಾಡಿದೆ. ಆದಿಲ್ ಸಾವಿಗೆ ಇಜವಾದ ಕಾರಣವೇನು ಅನ್ನೋದು ಇವತ್ತಲ್ಲ ನಾಳೆ ಗೊತ್ತಾಗಲಿದೆ. ಅದಕ್ಕೆ ತನಿಖಾ ತಂಡ ಮತ್ತು ಕಾನೂನು ಇದೆ. ಆದ್ರೆ ಇದೇ ಕಾರಣವನ್ನ ಇಟ್ಟುಕೊಂಡು ದೊಂಬಿ ಎಬ್ಬಿಸುತ್ತಿರೋರು ನಮ್ ಮಧ್ಯೆದಲ್ಲೇ ಇದ್ದಾರೆ.. ಅವರಿಗೆ ತಕ್ಕ ಶಿಕ್ಷೆಯಾಗುವಂತಾಗಬೇಕು.

ಇದನ್ನೂ ವೀಕ್ಷಿಸಿ:  Accident in Uttar Pradesh: ಉತ್ತರ ಪ್ರದೇಶದಲ್ಲಿ ಭೀಕರ ಅಪಘಾತ.. ಬಸ್‌ ಮೇಲೆ ಬಿದ್ದ ಲಾರಿ : 11 ಜನ ದುರ್ಮರಣ