Asianet Suvarna News Asianet Suvarna News

ಯೋಗೇಶ್ ಗೌಡ ಮರ್ಡರ್ ಮಿಸ್ಟರಿ: ಸಾಕ್ಷ್ಯ ನಾಶಕ್ಕೆ ಮಾಜಿ ಸಚಿವರು ಮಾಡಿದ ಕೆಲಸವಿದು!

ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಮತ್ತಷ್ಟು ಟ್ವಿಸ್ಟ್ ಸಿಗುತ್ತಿದೆ. ಯೋಗೇಶ್ ಗೌಡ ಅಣ್ಣ ಗುರುಪಾದಪ್ಪ ಗೌಡರಿಗೆ ಡಿವೈಎಸ್‌ಪಿ ತುಳಜಪ್ಪ ಬೆದರಿಕೆ ಹಾಕುತ್ತಾರೆ.  ವಕೀಲ ಆನಂದ್‌ಗೆ ಮಾಜಿ ಸಚಿವ ವಿನಯ್ ಕುಲಕರ್ಣಿ ಬೆದರಿಕೆ ಹಾಕುತ್ತಾರೆ.

ಬೆಂಗಳೂರು (ಸೆ. 18): ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಮತ್ತಷ್ಟು ಟ್ವಿಸ್ಟ್ ಸಿಗುತ್ತಿದೆ. ಯೋಗೇಶ್ ಗೌಡ ಅಣ್ಣ ಗುರುಪಾದಪ್ಪ ಗೌಡರಿಗೆ ಡಿವೈಎಸ್‌ಪಿ ತುಳಜಪ್ಪ ಬೆದರಿಕೆ ಹಾಕುತ್ತಾರೆ.  ವಕೀಲ ಆನಂದ್‌ಗೆ ಮಾಜಿ ಸಚಿವ ವಿನಯ್ ಕುಲಕರ್ಣಿ ಬೆದರಿಕೆ ಹಾಕುತ್ತಾರೆ. ಸಾಕ್ಷಿ ಹೇಳುವವರಿಗೂ ಬೆದರಿಕೆ ಹಾಕಲಾಗಿತ್ತು. ಅದನ್ನು ಸಾಕ್ಷಿ ಸಮೇತ ನಿಮ್ಮ ಸುವರ್ಣ ನ್ಯೂಸ್ ರಾಜ್ಯಕ್ಕೆ ತೋರಿಸಿದೆ.

ಯೋಗೇಶ್ ಗೌಡ ಪತ್ನಿ 'ಕೈ' ಸೇರಲು ಕಾರಣ ಏನು? ಮೂಲ ಪತ್ತೆ ಹಚ್ಚಿದ ಸಿಬಿಐ! 

ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಂದು ಸಾಕ್ಷ್ಯ ನಾಶ ಹೇಗೆ ನಡೆಯಿತು ಎಂಬುದನ್ನು ನಾವು ತೋರಿಸುತ್ತೇವೆ. 8ಮಂದಿ ಸಾಕ್ಷಿ ಹೇಳುವವರಿಗೆ ಪ್ರತ್ಯೇಕವಾಗಿ ಟ್ರೇನಿಂಗ್ ನೀಡಲಾಗಿತ್ತು. ಕೋರ್ಟ್‌ನಲ್ಲಿ ಹೀಗೆ ಹೇಳಬೇಕು ಎಂದು ಒತ್ತಡ ಹೇರಲಾಗಿತ್ತು. ಸಾಕ್ಷಿ ಹೇಳುವ ದಿನ ಖುದ್ದು ವಿನಯ್ ಕುಲಕರ್ಣಿ ಅವರಿಗೆಲ್ಲಾ ವಾರ್ನಿಂಗ್ ಕೂಡಾ ಮಾಡಿದ್ದರು. ಈ ಬಗ್ಗೆ ಎಕ್ಸ್‌ಕ್ಲೂಸಿವ್ ಸುದ್ದಿ ಇಲ್ಲಿದೆ ನೋಡಿ..!
 

Video Top Stories