ಯಾದಗಿರಿ; ಸಾಲಗಾರನ ಪತ್ನಿ ಒತ್ತೆಯಾಳು, ಮೂತ್ರ ವಿಸರ್ಜನೆಗೂ ಬಿಡಲಿಲ್ಲ!

* ಗಂಡನ ಸಾಲಕ್ಕೆ ಹೆಂಡತಿಯನ್ನು ಒತ್ತೆಯಾಳಗಿಸಿದ  ಫೈನಾನ್ಸ್*  ಗಂಡ ಮಾಡಿದ ಸಾಲಕ್ಕೆ ಹೆಂಡತಿಯನ್ನು ಒತ್ತೆಯಾಳಾಗಿಸಿದ  ಫೈನಾನ್ಸ್!* ಯಾದಗಿರಿಯಲ್ಲಿ ಮೀತಿ ಮೀರಿದ ಬಡ್ಡಿ ವ್ಯವಹಾರ; ಫೈನಾನ್ಸ್‌ಗಳಿಗಿಲ್ಲ ಅಂಕುಶ!* ಖಾಸಗಿ ಫೈನಾನ್ಸ್‌ಗಳಿಂದ ಸಾಲಗಾರರಿಗೆ ಮಾನಸಿಕ ಹಿಂಸೆ ತಪ್ಪಿದ್ದಲ್ಲ

Share this Video
  • FB
  • Linkdin
  • Whatsapp

ಯಾದಗಿರಿ(ಆ. 31) ಗಂಡ ಮಾಡಿದ ಸಾಲಕ್ಕೆ ಹೆಂಡತಿಯನ್ನು ಫೈನಾನ್ಸ್ ಒಂದು ಒತ್ತೆಯಾಳಾಗಿರಿಸಿಕೊಂಡಿದ್ದ ಅಮಾನವೀಯ ಘಟನೆ ವರದಿಯಾಗಿದೆ. ಯಾದಗಿರಿಯಲ್ಲಿ ಬಡ್ಡಿ ವ್ಯವಹಾರ ಮೀತಿ ಮೀರಿದ ಫೈನಾನ್ಸ್‌ಗಳಿಗೆ ಅಂಕುಶವಿಲ್ಲವಾಗಿದೆ.

ಶಿವಶಂಕರ್ ಫೈನಾನ್ಸ್‌ನಿಂದ ಸಾಲಗಾರರ ಕುಟುಂಬಕ್ಕೆ ಹಿಂಸೆ ನೀಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ ಯಾದಗಿರಿಯ ಅಜೀಜ್ ಕಾಲೋನಿಯಲ್ಲಿ ಘಟನೆ ನಡೆದಿದೆ. ಶಿವಶಂಕರ್ ಫೈನಾನ್ಸ್‌ನಲ್ಲಿ ಮೂರು ಲಕ್ಷ ರೂ. ಸಾಲವನ್ನು ಮಹ್ಮದ್ ಎಂಬುವರು ಪಡೆದುಕೊಂಡಿದ್ದರು ಸಮಯಕ್ಕೆ ಸರಿಯಾಗಿ ಅಸಲು ಮತ್ತು ಬಡ್ಡಿ ಕಟ್ಟಿದರೂ, ಹೆಚ್ಚಿನ ಬಡ್ಡಿ ನೀಡಲು ಒತ್ತಡ ಹಾಕಿದ್ದಾರೆ.

'ಕುಡಿಯಲು ಹಣ ಕೊಡಲ್ಲ, ಬುದ್ಧಿ ಹೇಳ್ತಿಯಾ' ದಾವಣಗೆರೆ ಪಾಪಿಯಿಂದ ಪತ್ನಿ ಹತ್ಯೆ!

ಇದಕ್ಕೆ ಒಪ್ಪದ ಮಹ್ಮದ್ ಹೆಂಡತಿ ರಿಜ್ವಾನರನ್ನು ಫೈನಾಲ್ಸ್ ಮಾಲೀಕ ತಮ್ಮ ಆಫೀಸಿಗೆ ಕರೆದುಕೊಂಡು ಹೋಗಿ ಕುಳ್ಳಿರಿಸಕೊಂಡಿದ್ದಾನೆ. ಮಹಿಳೆಯನ್ನು ಒತ್ತೆಯಾಳಾಗಿಸಿಕೊಂಡ ಫೈನಾನ್ಸ್ ಮಾಲೀಕ, ಮೂತ್ರ ವಿಸರ್ಜನೆಗೂ ಬಿಡದೇ ಚಿತ್ರಹಿಂಸೆ ನೀಡಿದ್ದಾನೆ ಶಿವಶಂಕರ್, ಚಂದ್ರಕಲಾ, ಶಿವಮ್ಮ, ಪಾರ್ವತಿ ಎಂಬುವವರಿಂದ ಕೃತ್ಯ ನಡೆದಿದ್ದು ಪ್ರಕರಣ ದಾಖಲಾಗಿದೆ. 

Related Video