ತಾಯಿಯನ್ನೇ ಮುಗಿಸಿದ ಹೆಂಡತಿ, ತಿಥಿ ದಿನ ರಟ್ಟಾಯ್ತು ಕೊಲೆಯ ರಹಸ್ಯ!
ತಾಯಿ ಹೃದಯಾಘಾತಕ್ಕೆ ಮೃತಪಟ್ಟಿದ್ದಳು. 11ನೇ ದಿನದಂದು ತಿಥಿ ಕಾರ್ಯಕ್ಕೆ ಕುಟಂಬ ಸಜ್ಜಾಗಿತ್ತು. ಆದರೆ 10 ದಿನದ ಪತ್ನಿಯ ನಾಟಕ ತಿಥಿಯಂದೇ ಬಯಲಾಗಿತ್ತು.
ಅದು ಸುಂದರ ಕುಟುಂಬ.ಅತ್ತೆಯೇ ಆ ಕುಟುಂಬದ ಬಾಸ್. ಬೆಂಗಳೂರಿನಲ್ಲಿ ಸ್ವಂತ ಮನೆ.. ಕೈ ತುಂಬ ಸಂಬಳ ತರೋ ಮಗ, ಮಹಾಲಕ್ಷ್ಮಿಯಂತಹ ಸೊಸೆ ಮತ್ತು ಇಬ್ಬರು ಮೊಮ್ಮಕ್ಕಳು. ಆದರೆ ಮನೆಯ ಒಡತಿ ಇದ್ದಕ್ಕಿಂದತೆ ಹಾರ್ಟ್ಅಟ್ಯಾಕ್ ಆಗಿ ಮೃತಪಟ್ಟಳು.. ಕುಟುಂಬದವರೆಲ್ಲಾ ಕಣ್ಣೀರಿಡುತ್ತಲೇ ತಾಯಿಯ ಅಂತ್ಯ ಸಂಸ್ಕಾರ ಮಾಡಿ ಮುಗಿಸಿದ್ದರು. ಇನ್ನೇನು 11 ದಿನದ ತಿಥಿ ಕಾರ್ಯಕ್ಕೆ ತಯಾರಿ ಮಾಡಿಕೊಳ್ಳಬೇಕು ಅನ್ನುವಾಗ್ಲೇ ಆ ಕುಟುಂಬಕ್ಕೆ ಶಾಕ್ ಕಾದಿತ್ತು.. ಕಾರಣ ಆ ಮನೆಯ ಒಡತಿ ಸಾವಿನ ಹಿಂದೆ ಹೃದಯಾಘಾತ ಅಲ್ಲ, ಬದಲಿಗೆ ಕೊಲೆ ಅನ್ನೋದು ಗೊತ್ತಾಗಿತ್ತು.