ಕೊಲ್ಲುವ ಮೊದಲು ಅತ್ಯಾಚಾರವೆಸಗಿದ್ದನಾ ಪಾಪಿ..? ಆ ರಾತ್ರಿ ಮೈಸೂರಿನಲ್ಲಿ ನಡೆದಿದ್ದೇನು..?

ಪ್ರೀತ್ಸೆ ಪ್ರೀತ್ಸೆ ಅಂತ ಹಿಂದೆ ಬಿದ್ದವನೇ ಕೊಂದುಬಿಟ್ಟ..!
ರಾತ್ರಿ ಅಮ್ಮನ ಬಳಿ ಮಾತನ್ನಾಡಿದವಳು ಬೆಳಗ್ಗೆ ಇಲ್ಲ..!
ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅವಳ ಕಥೆ ಮುಗಿಸಿದ !
ಅವಳನ್ನ ಆಸ್ಪತ್ರೆಗೆ ಸೇರಿಸಿ ಮನೆಗೆ ಕಾಲ್ ಮಾಡಿದ್ದ..!

First Published Oct 8, 2023, 3:46 PM IST | Last Updated Oct 8, 2023, 3:46 PM IST

ಅವಳು 19ರ ಚೆಲುವೆ. ಡಿಪ್ಲೊಮಾ ಮಾಡಿ ದೂರದ ಊರಿನಲ್ಲಿ ಕೆಲಸಕ್ಕೆ ಸೇರಿದ್ಲು. ಕಷ್ಟದಲ್ಲಿದ್ದ ಹೆತ್ತವರಿಗೆ ನೆರವಾಗ್ತಿದ್ಲು. ಇನ್ನೂ ಹೆತ್ತವರೂ ಕೂಡ ಮಗಳ ಸಂಪಾದನೆಯನ್ನ ನಂಬಿಕೊಂಡಿದ್ರು. ಹೀಗಿರುವಾಗ್ಲೇ ಆವತ್ತೊಂದು ದಿನ ಮಗಳು ಕೋಮಾಗೆ ಹೋಗಿಬಿಟ್ಟಳು. ಹೆತ್ತವರಿಗೆ ದಿಕ್ಕೇ ತೋಚದಂತಾಗಿಬಿಡ್ತು. 3 ದಿನ ಕೋಮಾದಲ್ಲಿದ್ದವಳು ನಾಲ್ಕನೇ ಪ್ರಾಣವನ್ನೇ ಬಿಟ್ಟಿದ್ಲು. ಆದ್ರೆ ಅವಳ ಸಾವಿಗೆ ಕಾರಣವಾಗಿದ್ದು ಮಾತ್ರ ಒಬ್ಬ ಪಾಗಲ್ ಪ್ರೇಮಿ. ಪ್ರೀತ್ಸೆ ಪ್ರೀತ್ಸೆ ಅಂತ ಹಿಂದೆ ಬಿದ್ದವನು ಕೊನೆಗೆ ಅವಳನ್ನೇ ಮುಗಿಸಿಬಿಟ್ಟಿದ್ದಾನೆ. ಇಲ್ಲೊಬ್ಬ ಪಾಗಲ್ ಪ್ರೇಮಿ ಪ್ರೀತ್ಸೆ ಪ್ರೀತ್ಸೆ ಅಂತ ಯುವತಿ ಹಿಂದೆ ಬಿದ್ದು ಕೊನೆಗೆ ಪ್ರೀತಿ ಮತ್ತು ಹುಡುಗಿ ಇಬ್ಬರನ್ನೂ ಬಲಿ ಹಾಕಿದ್ದಾನೆ. ಚಿತ್ರದುರ್ಗ ಜಿಲ್ಲೆಯ ಹುಲ್ಲೂರು ಅನ್ನೋ ಪುಟ್ಟ ಗ್ರಾಮ ಅದು. ಇದೇ ಗ್ರಾಮದ ಹೆಣ್ಣು ಮಕ್ಕಳು ಬೀದಿಗೆ ಬಂದಿದ್ರು. ಹೆಣ್ಣುಮಕ್ಕಳೆಲ್ಲಾ ಗುಂಪು ಕಟ್ಟಿಕೊಂಡು ಯಾರನ್ನೋ ಬೈದು ಕೊಳ್ತಿದ್ರು. ಅವನೊಬ್ಬನಿಂದ ನಾವು ನಮ್ಮ ಹೆಣ್ಣು ಮಕ್ಕಳನ್ನ ಹೊರಗೆ ಕಳಿಸೋದಕ್ಕೆರ ಭಯ ಆಗ್ತಿದೆ. ಅವನಿಂದ ನಮಗೆ ನೆಮ್ಮದಿಯಾಗಿ ಇರೋದಕ್ಕೆ ಆಗ್ತಿಲ್ಲ ಅಂತ ಇನ್ನಿಲ್ಲದಂತೆ ಬೈಯುತ್ತಿದ್ರು. ಇನ್ನೂ ವಯಸ್ಸು 19 ವರ್ಷ. ಡಿಪ್ಲೊಮಾ ಮುಗಿಸಿದ್ಲು.. ಓದು ಮುಗಿಸಿ ಮುನ್ನೂರು ಕಿಲೋ ಮೀಟರ್ ದೂರ ಅಂದ್ರೆ ಮೈಸೂರಿಗೆ ಹೋಗಿ ಕೆಲಸಕ್ಕೆ ಸೇರಿದ್ಲು. ನಾಲ್ಕು ತಿಂಗಳಿನಿಂದ ಕೆಲಸಕ್ಕೆ ಹೋಗ್ತಿದ್ದ ಅರ್ಪಿತಾ ತನ್ನನ್ನೇ ನಂಬಿಕೊಂಡಿದ್ದ ಹೆತ್ತವರಿಗೆ ನೆರವಾಗ್ತಿದ್ಲು. ಆದ್ರೆ ಈ ಪಾಪಿ ಆ ಮುದ್ದು ಹೆಣ್ಣುಮಗಳ ಜೀವವನ್ನೇ ಬಲಿಪಡೆದಿದ್ದಾನೆ. ಪ್ರೀತಿಯ ಹೆಸರಲ್ಲಿ ಅವಳನ್ನ ಕೊಂದು ಮುಗಿಸಿದ್ದಾನೆ. 

ಇದನ್ನೂ ವೀಕ್ಷಿಸಿ:  ಡಿಸಿಎಂ ಲೈಸೆನ್ಸ್ ನೀಡ್ತೀವಿ ಅಂದ್ರೆ..ಸಿಎಂ NO ಅಂತಾರೆ..! ಕಾಂಗ್ರೆಸ್ ನಡೆಗೆ ವಿಪಕ್ಷಗಳ ಲೇವಡಿ!