ರೀಲ್ಸ್‌ನಿಂದ ಸಂಸಾರದಲ್ಲಿ ಬಿರುಕು: ಕೊಲೆಗಾರನ ಮನಸ್ಸು ಬದಲಿಸಿದ್ಲು ನಿಮಿಷಾಂಬ ತಾಯಿ !

ಹೆಂಡತಿಯನ್ನ ಕೊಂದು 2 ದಿನ ಹುಡುಕುವ ನಾಟಕ ..!
ಹೆಂಡತಿಯ ಶವ ಸಾಗಿಸಲು ಮಾವ ಸಹಾಯ ಮಾಡಿದ್ದ..!
ದೇವಸ್ಥಾನಕ್ಕೆ ಹೋದವನು ಪೊಲೀಸರಿಗೆ ಕಾಲ್ ಮಾಡಿದ..!

Share this Video
  • FB
  • Linkdin
  • Whatsapp

ಅವರಿಬ್ಬರು ಪ್ರೀತಿಸಿ ಮದುವೆಯಾದವರು. ಮನೆಯಲ್ಲಿ ಒಪ್ಪದೇ ಇದ್ದಾಗ ಓಡಿ ಹೋಗಿ ಜೀವನ ಕಟ್ಟಿಕೊಂಡವರು. ಇವರ ಸುಖ ಸಂಸಾರಕ್ಕೆ 9 ವರ್ಷ ವಯಸ್ಸಾಗಿತ್ತು. ಆದ್ರೆ ಆವತ್ತು ಇದ್ದಕ್ಕಿದ್ದಂತೆ ಹೆಂಡತಿ ಮಿಸ್ಸಿಂಗ್. ಗಂಡ(Husband) ಆಕೆಗೆ ಎಲ್ಲಾ ಕಡೆ ಹುಡುಕಾಡಿದ.. ಆದ್ರೆ ಎಲ್ಲೂ ಅವಳ ಸುಳಿವೇ ಇಲ್ಲ.. ಗ್ರಾಮದಲ್ಲಿ ಒಬ್ಬೊಬ್ಬರು ಒಂದೊಂದು ರೀತಿ ಮಾತನ್ನಾಡಿಕೊಳ್ಳೋದಕ್ಕೆ ಶುರು ಮಾಡಿದ್ರು. ಆದ್ರೆ ಹೆಂಡತಿ (Wife) ಕಾಣಿಸದೆ ಎರಡು ದಿನಗಳ ನಂತರ ಗಂಡ ನಿಮಿಷಾಂಬ ದೇವಸ್ಥನಕ್ಕೆ ಹೋಗಿ ಕೈಮುಗಿದ. ಆದ್ರೆ ಈತ ದೇವರಿಗೆ ಕೈ ಮುಗಿಯುತ್ತಿದ್ರೆ ಅತ್ತ ಪೊಲೀಸ್ ಠಾಣೆಗೆ ಒಂದು ಕಾಲ್ ಬಂದಿತ್ತು. ಕಾಲ್ ಮಾಡಿದವನು ಕಾಣೆಯಾಗಿದ್ದ ಹೆಂಡತಿಯ ಬಗ್ಗೆ ಮಾಹಿತಿ ಕೊಟ್ಟಿದ್ದ. ಹೆಂಡತಿ ಮೇಲೆ ಅನುಮಾನ ಪಟ್ಟ ಶ್ರೀನಾಥ, ಅದೇ ಕಾರಣಕ್ಕೆ ಹೆಂಡತಿ ಮಗಳನ್ನ ಕರೆದುಕೊಂಡು ವಾಪಸ್ ಮಂಡ್ಯಕೊಪ್ಪಲಿಗೆ(Mandya) ಬಂದುಬಿಟ್ಟ. ಆದ್ರೆ ಊರು ಬದಲಿಸಿ 2 ತಿಂಗಳಾಯ್ತು ಅಷ್ಟೇ ಪೂಜಾ ಕಾವೇರಿ ನದಿಯ(cauvery river) ಹೊಳೆಯಲ್ಲಿ ಹೆಣವಾಗಿ ಸಿಕ್ಕಿದ್ಲು. ಆದ್ರೆ ಅವಳನ್ನ ಕೊಂದಿದ್ದು ಮಾತ್ರ ಶ್ರೀನಾಥನೇ. ಆದ್ರೆ ಶ್ರೀನಾಥನಿಗೆ ಸಾಥ್ ಕೊಟ್ಟವನು ಮಾವ ಶೇಖರ. ಅಂದ್ರೆ ಪೂಜಾಳ ತಂದೆ. ಊರು ಬದಲಾದ್ರೂ ಪೂಜಾ ಬದಲಾಗಿರಲಿಲ್ಲ. ಶ್ರೀನಾಥನ ಅನುಮಾನವೂ ಕಡಿಮೆಯಾಗಿರಲಿಲ್ಲ. ಅರಕೆರೆಯಿಂದ ಮಂಡ್ಯಕೊಪ್ಪಲಿಗೆ ಬಂದ ಶ್ರೀನಾಥ ಮತ್ತು ಪೂಜಾ ಸಂಸಾರದಲ್ಲಿ ಸುಧಾರಣೆಯಾಗಿರಲಿಲ್ಲ. ಬದಲಿಗೆ ಜಗಳಗಳು ಹೆಚ್ಚಾಯ್ತು. ಅದೆಷ್ಟರ ಮಟ್ಟಿಗೆ ಅಂದ್ರೆ ಆವತ್ತೊಂದು ದಿನ ಪೂಜಾಳನ್ನ ಕೊಲ್ಲಲೇಬೇಕೆಂದು ಮತ್ತು ಬರುವ ಔಷಧಿಯನ್ನ ಖರೀಧಿಸಿ ಮನೆಗೆ ಬಂದಿದ್ದ. ಅವಳು ಕುಡಿಯುವ ನೀರಿನಲ್ಲಿ ಮತ್ತು ಬರುವ ಔಷಧಿ ಬೆರಸಿ ನಂತರ ಅವಳು ಪ್ರಜ್ಞೆ ತಪ್ಪಿದ ಮೇಲೆ ಆಕೆಯ ಕುತ್ತಿಗೆಗೆ ಶಾಲು ಬಿಗಿದು ಆಕೆಯ ಕಥೆಯನ್ನ ಮುಗಿಸಿದ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ:  ಬಿಜೆಪಿ ನಾಯಕರನ್ನು ಸೆಳೆಯಲು ಆಪರೇಷನ್ "ಹಸ್ತ": ಶೆಟ್ಟರ್-ಸವದಿ ನೇತೃತ್ವದಲ್ಲಿ ಆಟ ಶುರು !

Related Video