ಪತ್ನಿಗೆ 15 ಬಾರಿ ಇರಿದು ಕೊಲೆಗೆ ಯತ್ನಿಸಿದ ಪತಿ, ಕೃತ್ಯ ತಡೆಯುವ ಬದಲು ವಿಡಿಯೋ ಚಿತ್ರೀಕರಿಸಿದ ಸ್ಥಳೀಯರು!

ನೋಡುಗರನ್ನ ಬೆಚ್ಚಿ‌ ಬೀಳಿಸುವಂತಿದೆ ಗಂಡನ ಕ್ರೌರ್ಯ ಮೊಬೈಲ್‌ನಲ್ಲಿ ಸೆರಯಾಗಿದೆ. ಹೆದ್ದಾರಿಯಲ್ಲಿ ಪತ್ನಿ ಮೇಲೆ 15ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಚುಚ್ಚಿ ಬಳಿಕ ಕಲ್ಲಿನಿಂದ ಜಜ್ಜಿ ಕೊಲೆ ಯತ್ನ ನಡೆದಿದೆ. ಈ ಇಡೀ ಘಟನೆಯನ್ನು ಸ್ಥಳೀಯರು ಮೊಬೈಲ್ ಮೂಲಕ ರೆಕಾರ್ಡ್ ಮಾಡಿಕೊಂಡಿದ್ದಾರೆ ಹೊರತು ಕೃತ್ಯ ತಡೆಯುವ ಯತ್ನಕ್ಕೆ ಹೋಗಿಲ್ಲ.

Share this Video
  • FB
  • Linkdin
  • Whatsapp

ಹೊಸಕೋಟೆ(ಅ.15):  ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಘಟನೆಯನ್ನು ಮೊಬೈಲ್ ಮೂಲಕ ಚಿತ್ರೀಕರಿಸುವ ಧಾವಂತ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡುವ ಕಾತುರವೇ ಹೆಚ್ಚಾಗಿದೆ ಹೊರತು ನಿಜವಾದ ಕಾಳಜಿ. ಮಾನವೀಯತೆ, ನೆರವು ನೀಡುವ ಮನಸ್ಸು ಮಾತ್ರ ಇಲ್ಲದಾಗಿದೆ. ಇದಕ್ಕೆ ಇಲ್ಲೊಂದು ಉದಾಹರಣೆ ಇದೆ. ಹೊಸಕೋಟೆ ತಾಲೂಕಿನ ಪಿಲ್ಲಗುಂಪೆ ಕೈಗಾರಿಕಾ‌ ಪ್ರದೇಶದ ಹೆದ್ದಾರಿಯಲ್ಲಿ ಪತ್ನಿ ಮೇಲೆ ಪತಿ ಕ್ರೌರ್ಯ ಮೆರೆಯುತ್ತಿದ್ದ. ಅಡುಗೆಗೆ ಬಳಸುವ ಸಣ್ಣ ಚಾಕುವಿನ ಮೂಲಕ ಪತ್ನಿಯನ್ನು 15ಕ್ಕೂ ಹೆಚ್ಚು ಬಾರಿ ಚುಚ್ಚಿದ್ದಾನೆ. ಬಳಿಕ ಕಲ್ಲಿನಿಂದ ಜಜ್ಜಿ ಕೊಲೆಗೈಯಲು ಯತ್ನಿಸಿದ್ದಾನೆ. ಈ ಘಟನೆಯನ್ನು ಸ್ಥಳೀಯರು ನಿಂತು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಈ ವೇಳೆ ವಿಡಿಯೋ ಚಿತ್ರೀಕರಣ ಮಾಡುವ ಬದಲು ಪತಿಯ ಕೈಯಿಂದ ಸಣ್ಣ ಚಾಕು ಕಿತ್ತುಕೊಂಡಿದ್ದರೆ ಅಥವಾ ಗದರಿಸಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ. ರಾಕ್ಷಸನಂತೆ ಪತ್ನಿಗೆ ಅಮಾನುಷವಾಗಿ ಚುಚ್ಚಿ ಚುಚ್ಚಿದ ಆರೋಪಿ ಆಂಧ್ರಪ್ರದೇಶ ಮೂಲದ ರಮೇಶ್. ಇದೀಗ ಪತ್ನಿ ಅಶ್ವಿನಿ ಸ್ಥಿತಿ ಚಿಂತಾಜನಕವಾಗಿದ್ದು ಆಸ್ಪತ್ರೆ ತುರ್ತು ಘಟಕಕ್ಕೆ ದಾಖಲಿಸಲಾಗಿದೆ. ಇತ್ತ ಪತ್ನಿ ಮೇಲಿನ ಕ್ರೌರ್ಯದ ಬಳಿಕ ರಮೇಶ್ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾನೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪರೀಕ್ಷೆ ವೇಳೆ ಬಲವಂತವಾಗಿ ಬಟ್ಟೆ ಬಿಚ್ಚಿಸಿದ ಶಿಕ್ಷಕಿ: ಮನನೊಂದು ಬೆಂಕಿ ಹಚ್ಚಿಕೊಂಡ ಬಾಲಕಿ

7 ವರ್ಷಗಳಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಕಳೆದ ಎರಡು ವರ್ಷದಿಂದ ಪತಿಯ ಕಿರುಕುಳಕ್ಕೆ ಬೇಸತ್ತು ಬೇರೆಯಾಗಿದ್ದರು. ಪತ್ನಿ ಹಾಗೂ ಮಕ್ಕಳನ್ನು ನೋಡಲು ಆಗಮಿಸಿದ್ದ ರಮೇಶ್, ನಯವಾಗಿ ಮಾತನಾಡಿಸಿ ಹೆದ್ದಾರಿ ಕರೆತಂದು ಕೊಲೆಗೆ ಯತ್ನಿಸಿದ್ದಾನೆ. ನೋಡುಗರನ್ನ ಬೆಚ್ಚಿ‌ ಬೀಳಿಸುವ ಈ ಕ್ರೌರ್ಯ ಇದೀಗ ಎಲ್ಲರ ಮೊಬೈಲ್‌ನಲ್ಲಿ ಹರಿದಾಡುತ್ತಿದೆ. ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Related Video