Asianet Suvarna News Asianet Suvarna News

ನಟಿ ಸೌಜನ್ಯ ಮೊಬೈಲ್ ಸಿಕ್ಕಿಲ್ಲ? ಮತ್ತೊಂದಷ್ಟು ಅನುಮಾನಗಳು

Oct 1, 2021, 7:44 PM IST
  • facebook-logo
  • twitter-logo
  • whatsapp-logo

ಬೆಂಗಳೂರು/ ಕುಂಬಳಗೋಡು(ಅ. 01)   ಕಿರುತೆರೆ ನಟಿ(Sandalwood)  ಸವಿ ಮಾದಪ್ಪ ಸೌಜನ್ಯ ಆತ್ಮಹತ್ಯೆ(Suicide) ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಕುಂಬಳಗೋಡು ಠಾಣೆಗೆ ಸವಿ ತಂದೆ ಮಾದಪ್ಪ ದೂರು ನೀಡಿದ್ದಾರೆ. 

ಕಿರುತೆರೆ ನಟಿ ಸುಸೈಡ್‌ ಕೇಸ್‌ಗೆ ಟ್ವಿಸ್ಟ್.. ಮದುವೆಯಾಗು ಎಂದು ಕಿರುಕುಳ ಕೊಡ್ತಿದ್ದ ನಟ!

ಸಾವಿನ ಸುತ್ತ ಹಲವಾರು ಅನುಮಾನಗಳು  ಎದ್ದಿವೆ. ಪೊಲೀಸರು ಬರುವ ಮುನ್ನವೇ ಶವವನ್ನು ಕೆಳಕ್ಕೆ ಇಳಿಸಿದ್ದು ಯಾಕೆ? ಸೌಜನ್ಯ ಮೊಬೈಲ್ ಮತ್ತು ಚಿನ್ನಾಭರಣ ಎಲ್ಲಿ ಹೋಯಿತು?  ಈ ಪ್ರಕರಣದಲ್ಲಿ ವಿವೇಕ್ ಪಾತ್ರವೇನು? ಎಂಬ ಎಲ್ಲ ವಿಚಾರಗಳ ಬಗ್ಗೆ ತನಿಖೆಯಾಗುತ್ತಿದೆ. ಕನ್ನಡ ಹಾಗೂ ತೆಲುಗು ಕಿರುತೆರೆ ನಟನೊಬ್ಬ ಮಗಳಿಗೆ ಪರಿಚಿತನಿದ್ದ. ಮದುವೆಯಾಗು ಎಂದು‌ ನನ್ನ ಮಗಳಿಗೆ ಕಿರುಕುಳ‌ ನೀಡುತ್ತಿದ್ದ ಎಂದು ನಟಿ ತಂದೆ ಆರೋಪಿಸಿದ್ದರು.