Asianet Suvarna News Asianet Suvarna News

ಕನ್ನಡ ಕಿರುತೆರೆ ನಟಿ ಸೌಜನ್ಯ ಆತ್ಮಹತ್ಯೆ, ಡೆತ್‌ನೋಟ್‌ ಪತ್ತೆ!

* ನೇಣು ಬಿಗಿದುಕೊಂಡು ನಟಿ ಸೌಜನ್ಯ ಆತ್ಮಹತ್ಯೆ

* ಬೆಂಗಳೂರಿನ ಕುಂಬಳಗೋಡಿನಲ್ಲಿ ಘಟನೆ

* ಸೌಜನ್ಯ ಪಿಎಗೆ ಬೆಳಗ್ಗೆ ತಿಂಡಿ ತರಲು ಹೇಳಿ ಆತ್ಮಹತ್ಯೆ

* ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ನಟಿ ಸೌಜನ್ಯ

Kannada Tv Actress Soujanya Commits Suicide Death Note Recovered pod
Author
Bangalore, First Published Sep 30, 2021, 1:59 PM IST
  • Facebook
  • Twitter
  • Whatsapp

ಬೆಂಗಲೂರು(ಸೆ.30): ಕನ್ನಡದ ಕಿರುತೆರೆ(Kannada Tv Actress) ನಟಿ ಸೌಜನ್ಯ(Soujanya) ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರು ಬೆಂಗಳೂರು ದಕ್ಷಿಣ ಜಿಲ್ಲೆಯ ದೊಡ್ಡಬೆಲೆ ಗ್ರಾಮದ ಕುಂಬಳಗೋಡುವಿನ ಅಪಾರ್ಟ್‌ಮೆಂಟ್‌ ಒಂದರಲ್ಲಿ ನೇಣಿಗೆ ಶರಣಾಗಿದ್ದಾರೆ. 

"

ಮೂಲತಃ ಕೊಡಗು(Kodagu) ಜಿಲ್ಲೆಯ ಕುಶಾಲನಗರದವರಾಗಿರುವ ಉದಯೋನ್ಮುಖ ನಟಿ ಸೌಜನ್ಯ ಅನೇಕ ಧಾರವಾಹಿಗಳಲ್ಲಿ ನಟಿಸಿದ್ದರು. ಅಲ್ಲದೇ ಚೌಕಟ್ಟು, ಫನ್​ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ಸಾವಿಗೂ ಮೊದಲು ಡೆತ್​ನೋಟ್(Suicide Note) ಬರೆದಿರುವ ಸೌಜನ್ಯ 'ನನ್ನ ಸಾವಿಗೆ ಯಾರೂ ಕಾರಣರಲ್ಲ. ಅಮ್ಮ-ಅಮ್ಮ ನನ್ನನ್ನು ಕ್ಷಮಿಸಿ. ನಾನು ನಿಮ್ಮಿಬ್ಬರನ್ನೂ ತುಂಬಾ ಪ್ರೀತಿಸುವೆ. ಸದ್ಯ ನನ್ನ ಮನಸ್ಥಿತಿ ಸರಿ ಇಲ್ಲ. ಅನಾರೋಗ್ಯ ನನ್ನನ್ನು ತೀವ್ರವಾಗಿ ಕಾಡುತ್ತಿದೆ. ನಾನು ಸಾವಿನ ಮನೆಗೆ ಹೋಗುತ್ತಿದ್ದೇನೆ. ಕ್ಷಮಿಸಿ ಎಂದು ಸ್ನೇಹಿತರು ಮತ್ತು ಸಹೋದರರ ಹೆಸರನ್ನೂ ಬರೆದಿದ್ದಾರೆ. ಇಂಗ್ಲಿಷ್​ನಲ್ಲಿ ಬರೆದಿರುವ ಡೆತ್​ನೋಟ್​ 4 ಪುಟ ಇದೆ. ಸೌಜನ್ಯರವರು ಖಿನ್ನತೆಯಿಂದ ಬಳಲುತ್ತಿದ್ದರೆನ್ನಲಾಗಿದೆ.

Kannada Tv Actress Soujanya Commits Suicide Death Note Recovered pod

ಇನ್ನು ಆತ್ಮಹತ್ಯೆಗೂ ಮುನ್ನ ಸೌಜನ್ಯ ತನ್ನ ಪಿಎಯನ್ನು ತಿಂಡಿ ತರಲು ಕಳುಹಿಸಿದ್ದರು. ಆತ ಹೊರಗೆ ತೆರಳುತ್ತಿದ್ದಂತೆಯೇ ನಟಿ ನೇಣಿಗೆ ಶರಣಾಗಿದ್ದಾರೆ. 

ಮೂರು ದಿನದ ಹಿಂದೆ ಡೆತ್‌ನೋಟ್‌

ಇನ್ನು ನಟಿ ಮೂರು ದಿನಗಳ ಹಿಂದೆಯೇ ಸೆಪ್ಟೆಂರ್‌ 27ರಂದು ಡೆತ್ ನೋಟ್ ಬರೆದಿಟ್ಟಿದ್ದರು. ಇನ್ನು ಇದರಲ್ಲಿ ಅವರು ತಮ್ಮ ಮಾನಸಿಕ ಆರೋಗ್ಯ ಚೆನ್ನಾಗಿಲ್ಲ ಎಂಬುವುದನ್ನು ಉಲ್ಲೇಖಿಸಿದ್ದಾರೆ. 

ಸ್ಥಳಕ್ಕೆ ಹಿರಿಯ ಪೋಲೀಸ್ ಆಧಿಕಾರಿಗಳು ಭೇಟಿ ನೀಡಿ‌‌ ಪರಿಶೀಲನೆ ನಡೆಸಿದ್ದು, ಕುಂಬಳಗೋಡು ಪೋಲೀಸ್ ಠಾಣೆಯಲ್ಲಿ  ದೂರು ದಾಖಲಾಗಿದೆ.

Follow Us:
Download App:
  • android
  • ios