Asianet Suvarna News Asianet Suvarna News

ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗಿಲ್ವಾ ರಕ್ಷಣೆ..? ಚಿಕಿತ್ಸೆಗೆಂದು ಬಂದರೆ ರೋಗಿಗಳ ಮೇಲೆ ಇದೆಂಥಾ ಕ್ರೌರ್ಯ..?

ರೋಗಿ ಮೇಲೆ ಆಸ್ಪತ್ರೆ ವಾರ್ಡ್ ಬಾಯ್ ರೌಡಿಸಂ..?
ಕೆಸಿ ಜನರಲ್ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆ..!
ರೋಗಿಗೆ ರಕ್ತ ಬರುವಂತೆ ಥಳಿಸಿರುವ ವಾರ್ಡ್ ಬಾಯ್..? 
 

ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ರಕ್ಷಣೆ ಇಲ್ವಾ ಎಂಬ ಪ್ರಶ್ನೆಯೊಂದು ಇದೀಗ ಕಾಡತೊಡಗಿದೆ. ಇದಕ್ಕೆ ಕಾರಣ ಕೆಸಿ ಜನರಲ್‌ ಆಸ್ಪತ್ರೆಗೆ(KC General Hospital) ಚಿಕಿತ್ಸೆಗೆಂದು ಬಂದ ರೋಗಿಯ ಮೇಲೆ ವಾರ್ಡ್‌ ಬಾಯ್‌(Ward boy) ರೌಡಿಸಂ(Rowdyism) ತೋರಿರುವ ಘಟನೆ ನಡೆದಿದೆ. ಈ ಘಟನೆಯಿಂದ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗೆ ರೋಗಿಗಳ(Patient) ಮೇಲೆ ಕರುಣೆ ಇಲ್ವಾ ಎಂಬ ಪ್ರಶ್ನೆ ಕಾಡತೊಡಗಿದೆ. ವಾರ್ಡ್‌ ಬಾಯ್‌ ರೋಗಿಗೆ ರಕ್ತ ಬರುವಂತೆ ಥಳಿಸಿದ್ದಾನೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಚಿಕಿತ್ಸೆಗೆ ದಾಖಲಾಗಿದ್ದ ವೇಳೆ ಸ್ಥಿಮಿತತೆ ಕಳೆದುಕೊಂಡು ರೋಗಿ ಕೂಗಾಡ್ತಿದ್ದ ಎಂದು ತಿಳಿದುಬಂದಿದೆ. ವಿಷ ಕುಡಿದು ಆಸ್ಪತ್ರೆಗೆ ದಾಖಲಾಗಿದ್ದ ವೆಂಕಟೇಶ್. ಈ ವೇಳೆ ಮಾನಸಿಕ ಸ್ಥಿಮಿತತೆ ಕಳೆದುಕೊಂಡು ವೆಂಕಟೇಶ್ ಕೂಗಾಡುತ್ತಿದ್ದ, ಕೂಗಾಡುತ್ತಿದ್ದ ವೆಂಕಟೇಶ್ ಕೈ-ಕಾಲನ್ನು ವಾರ್ಡ್‌ ಬಾಯ್‌ ಕಟ್ಟಿ ಹಾಕಿದ್ದಾನೆ. ವೆಂಕಟೇಶ್ ಕೂಗಾಡುವ ವೇಳೆ ವಾರ್ಡ್‌ ಬಾಯ್‌ಗಳಿಂದ ಹಲ್ಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ವೀಕ್ಷಿಸಿ:  Deepika Padukone: ಸರೋಗೆಸಿ ಮಗು ಮಾಡ್ಕೊಳ್ತಿದ್ದಾರಾ ದೀಪಿಕಾ? ಗಾಸಿಪ್ ಮಾಡಿದವರಿಗೆ ನಟಿ ಹೇಳಿದ್ದೇನು ?