ಕಲಬುರಗಿ ಜೈಲಿನಲ್ಲಿ ಖೈದಿಗಳ ಬಿಂದಾಸ್ ಲೈಫ್: ಇದು ಅಧೀಕ್ಷಕಿ ವಿರುದ್ಧದ ಷಡ್ಯಂತ್ರವೇ?

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಖೈದಿಗಳು ಮೊಬೈಲ್ ಬಳಕೆ, ಧೂಮಪಾನ ಮತ್ತು ಇತರ ಚಟುವಟಿಕೆಗಳಲ್ಲಿ ತೊಡಗಿರುವ ವಿಡಿಯೋಗಳು ವೈರಲ್ ಆಗಿವೆ. ಜೈಲು ಅಧಿಕ್ಷಕಿ ವಿರುದ್ಧ ಷಡ್ಯಂತ್ರ ನಡೆದಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಈ ಘಟನೆಯ ಬಗ್ಗೆ ತನಿಖೆ ನಡೆಸಿ ಸತ್ಯಾಂಶ ಹೊರಗೆಡಹಬೇಕಿದೆ.

First Published Dec 8, 2024, 2:11 AM IST | Last Updated Dec 8, 2024, 2:11 AM IST

ಕಲಬುರಗಿ ಕೇಂದ್ರ ಕಾರಾಗೃಹ   ಮತ್ತೊಂದು ಕರ್ಮಕಾಂಡ ಬಯಲಿಗೆ ಬಂದಿದೆ. ಖೈದಿಗಳ ಬಿಂದಾಸ್ ಲೈಫ್‌ನ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಮತ್ತಷ್ಟು ವೈರಲ್ ಆಗಿದೆ. ಮೊಬೈಲ್ ಬಳಕೆ, ಸಿಗರೇಟ್ ಸೇದುವುದು, ಎಣ್ಣೆ ಹೊಡೆಯೊ ವಿಡಿಯೋ, ರಾಶಿರಾಶಿ ಗುಟ್ಕಾ, ಸಿಗರೇಟ್ ವಿಡಿಯೋಗಳು. ಮತ್ತೊಂದೆಡೆ ಕೈದಿಗಳಿಬ್ಬರು ಹಣ ಮುಂದಿಟ್ಟುಕೊಂಡು ಜೈಲು ಅಧಿಕ್ಷಕಿ ಅನೀತಾ ಮೇಡಂಗೆ ದುಡ್ಡು ಕೊಡೋದಿದೆ ಎನ್ನುತ್ತಿರುವ ಖೈದಿ.

ಸುರೇಶ್ ಎಂಬಾತನ ಮೂಲಕ ಡೀಲ್ ಕುದುರಿಸಿಕೊಳ್ಳಲು ಸಲಹೆ ನೀಡಿದ ಖೈದಿ. ಈ ಮೂಲಕ 35 ಸಾವಿರ ರೂ ಹಣ ಜೈಲು ಅಧಿಕ್ಷಕಿ ಡಾ ಅನೀತಾಗೆ ನೀಡಲು ಖೈದಿಗಳ ನಡುವೆ ಮಾತುಕತೆ ನಡೆದಿದೆ. ಈ ವಿಡಿಯೋಗಳು ಹರಿಬಿಟ್ಟಿರುವ ಉದ್ದೇಶವೇ ಅಧೀಕ್ಷಕಿ ಡಾ. ಅನೀತಾ ವಿರುದ್ದದ ಷಡ್ಯಂತ್ರವಾ ?

ಜೈಲಿನಲ್ಲಿ ಇಷ್ಟೆಲ್ಲಾ ಇದ್ರೂ ಅಧೀಕ್ಷಕಿ‌ ಡಾ. ಅನಿತಾ ಸೇರಿ ಅಧಿಕಾರಿಗಳು ಮೌನವಾಗಿದ್ದೇಕೆ ? ಹಾಗಾದ್ರೆ ಇದೆಲ್ಲಾ ಪೂರೈಕೆಯಾಗಿದ್ದು ಯಾವಾಗ? ಜೈಲಿನ ಕೆಲ ಸಿಬ್ಬಂದಿಗಳೂ ಇದರಲ್ಲಿ ಶಾಮೀಲಿರುವ ಶಂಕೆ ವ್ಯಕ್ತವಾಗಿದೆ.

ಇದೇ ಕಾರಣಕ್ಕೆ ಆರು ಖೈದಿಗಳಿಗೆ ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರ ಮಾಡಲಾಗಿದೆ. ಈಗ ವೈರಲ್ ಆಗುತ್ತಿರುವ ವಿಡಿಯೋಗಳು ಯಾವಾಗಿಂದು ಎನ್ನುವುದರ ಖಚಿತತೆ ಇಲ್ಲ. ಆದ್ರೆ ಈ ವಿಡಿಯೋಗಳೆಲ್ಲಾ ಅನಿತಾ ಅಧಿಕ್ಷಕಿಯಾಗಿ ಬಂದ ನಂತರದ್ದೇ ಎನ್ನುವುದಕ್ಕೆ ಅಕ್ಟೋಬರ್ 29 ರ ನ್ಯೂಸ್ ಪೇಪರ್ ಸಾಕ್ಷಿಯಾಗಿದೆ. ಕೆಲವರಿಗಷ್ಟೇ ಕಲಬುರಗಿ ಜೈಲಿನಲ್ಲಿ ಸೌಲಭ್ಯ ನೀಡಲಾಗ್ತಿದೆಯಾ ? ಎನ್ನುವ ಅನುಮಾನ ಮೂಡಿಸುತ್ತಿರುವ ವಿಡಿಯೋಗಳು. ಅದಾಗ್ಯೂ ಈ ಬಗ್ಗೆ ತನಿಖೆ ನಡೆದು ಸತ್ಯಾಂಶ ಹೊರಬರಬೇಕಿದೆ.