ವಿನಯ್ ಕುಲಕರ್ಣಿ ಜೊತೆ ದ್ವೇಷ ಯಾಕೆ ಕಟ್ಕೋತೀರಿ? ನೀವೂ ರಾಜಿಯಾಗ್ಬಿಡಿ; ಯೋಗೇಶ್ ಗೌಡ ಸಹೋದರಗೆ ಒತ್ತಡ
ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಯನ್ನು ಅರೆಸ್ಟ್ ಮಾಡಲು ಸಿಬಿಐ 3 ತಿಂಗಳಿಂದ ಪ್ಲಾನ್ ಮಾಡಿತ್ತು. 6 ಮಂದಿ ಸುಪಾರಿ ಕಿಲ್ಲರ್‌ಗಳಿಂದ ಮಾಹಿತಿಯನ್ನೂ ಸಂಗ್ರಹಿಸಿತ್ತು. ಯೋಗೇಶ್ ಗೌಡ ಪತ್ನಿ ಮಲ್ಲಮ್ಮರನ್ನು ವಿಚಾರಣೆಗೆ ಒಳಪಡಿಸಿತ್ತು.
ಬೆಂಗಳೂರು (ನ. 05): ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಯನ್ನು ಅರೆಸ್ಟ್ ಮಾಡಲು ಸಿಬಿಐ 3 ತಿಂಗಳಿಂದ ಪ್ಲಾನ್ ಮಾಡಿತ್ತು. 6 ಮಂದಿ ಸುಪಾರಿ ಕಿಲ್ಲರ್‌ಗಳಿಂದ ಮಾಹಿತಿಯನ್ನೂ ಸಂಗ್ರಹಿಸಿತ್ತು. ಯೋಗೇಶ್ ಗೌಡ ಪತ್ನಿ ಮಲ್ಲಮ್ಮರನ್ನು ವಿಚಾರಣೆಗೆ ಒಳಪಡಿಸಿತ್ತು. ಉಪಚುನಾವಣಾ ಮತದಾನದ ಮೇಲೆ ಪ್ರಭಾವ ಬೀರಬಾರದೆಂದು ಬಂಧನವನ್ನು ಮುಂದೂಡಲಾಗಿತ್ತು.
ವಿನಯ್ ಕುಲಕರ್ಣಿ ಅರೆಸ್ಟ್ : ಯೋಗೇಶ್ ಗೌಡ ಸ್ನೇಹಿತ ಬಿಚ್ಚಿಟ್ಟ ಷಡ್ಯಂತ್ರ
ವಿನಯ್ ಕುಲಕರ್ಣಿ ಅರೆಸ್ಟ್ ಆಗಿರುವ ಬಗ್ಗೆ ಯೋಗೇಶ್ ಗೌಡ ಸಹೋದರ, ಗುರುನಾಥ ಗೌಡ್ರು ಪ್ರತಿಕ್ರಿಯಿಸಿ, ' ನಮ್ಮ ಮೇಲೆ ಒತ್ತಡ ಇತ್ತು. ಒಂದು ವಾರದ ಹಿಂದೆ ಮತ್ತೆ ಒತ್ತಡ ಹೇರಿದ್ದರು. ವಿನಯ್ ಕುಲಕರ್ಣಿ ಬಿಜೆಪಿ ಸೇರಲಿದ್ದಾರೆ. ಹೈಕಮಾಂಡ್ ಕೂಡಾ ಒಪ್ಪಿದ್ದಾರೆ. ಅವರ ಜೊತೆ ನೀವ್ಯಾಕೆ ದ್ವೇಷ ಕಟ್ಟಿಕೊಳ್ಳುತ್ತೀರಿ? ನೀವು ರಾಜಿಯಾಗಿ ಬಿಡಿ' ಎಂದಿದ್ದರು.