ವಿನಯ್ ಕುಲಕರ್ಣಿ ಅರೆಸ್ಟ್: ಯೋಗೇಶ್‌ ಗೌಡ ಸ್ನೇಹಿತ ಬಿಚ್ಚಿಟ್ಟ ಷಡ್ಯಂತ್ರ

ನಾಲ್ಕು ವರ್ಷಗಳ ಹಿಂದೆ ನಡೆದ ಜಿ.ಪಂ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ್ ಕುಲಕರ್ಣಿ ಸಹೋದರರನ್ನು ಅರೆಸ್ಟ್ ಮಾಡಲಾಗಿದೆ. 
 

First Published Nov 5, 2020, 2:25 PM IST | Last Updated Nov 5, 2020, 2:29 PM IST

ಬೆಂಗಳೂರು (ನ. 05): ನಾಲ್ಕು ವರ್ಷಗಳ ಹಿಂದೆ ನಡೆದ ಜಿ.ಪಂ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ್ ಕುಲಕರ್ಣಿ ಸಹೋದರರನ್ನು ಅರೆಸ್ಟ್ ಮಾಡಲಾಗಿದೆ. 

ಭಾರತೀಯರ ಪಾಲಿನೊಂದಿಗೆ ಅಮೆರಿಕಕ್ಕೆ ಹೊಸ ಅಧ್ಯಕ್ಷ, ಕೆನಡಾದಲ್ಲಿ ಹಂದಿ ಜ್ವರ

ತಮ್ಮ ಸ್ನೇಹಿತ ಯೋಗೇಶ್ ಗೌಡರಿಗೆ ನ್ಯಾಯ ಕೊಡಿಸಲು ಹೋರಾಡುತ್ತಿರುವ ಬಸವರಾಜ್ ಕೋರಾವರ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. '2016 ರಲ್ಲಿ ನಾವು ಹೋರಾಟವನ್ನು ಆರಂಭಿಸಿದ್ದೇವೆ. ಆಗಿನಿಂದಲೂ ನಮ್ಮ ಬಾಯಿ ಮುಚ್ಚಿಸಲು ಸಾಕಷ್ಟು ಪ್ರಯತ್ನಗಳು ನಡೆದಿದೆ. ಯೋಗೇಶ್ ಗೌಡ ಅಣ್ಣನನ್ನು ಹಿಂದೆ ಸರಿಯುವಂತೆ ಮಾಡಿದ್ದಾರೆ. ನಮ್ಮ ಮೇಲೆಯೂ ಸಾಕಷ್ಟು ಒತ್ತಡ ಹಾಕಿದ್ದರು.  ಆದರೆ ನಾವು ಅದಕ್ಕೆಲ್ಲಾ ಜಗ್ಗಲಿಲ್ಲ. ಈ ಪ್ರಕರಣವನ್ನು ಸಿಬಿಐಗೆ ನೀಡದಿದ್ದರೆ ಇಲ್ಲಿಯವರೆಗೆ ಬರುತ್ತಿರಲಿಲ್ಲ. ಈಗ ವಿನಯ್ ಕುಲಕರ್ಣಿಯನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸಲಾಗುತ್ತಿದೆ. ನ್ಯಾಯ ಸಿಗುತ್ತದೆ ಎಂಬ ನಂಬಿಕೆ ನಮಗಿದೆ' ಎಂದು ಬಸವರಾಜ್ ಹೇಳಿದ್ದಾರೆ. 

Video Top Stories