ಸಿಎಂ ಗಮನಕ್ಕೆ ಬಾರದೆ ಮುಡಾ ಹಗರಣ ನಡೆದಿರುವುದಿಲ್ಲ, ಸೂಕ್ತ ತನಿಖೆಯಾಗಲಿ: ವಿಜಯೇಂದ್ರ

ಮೈಸೂರು ಮುಡಾ ಹಗರಣ ದೊಡ್ಡ ಹಗರಣವಾಗಿದ್ದು, ಯಾವೆಲ್ಲಾ ಹಗರಣ ನಡೆದಿದೆ, ಎಲ್ಲವೂ ತನಿಖೆಯಾಗಲಿ ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ. 
 

First Published Jul 3, 2024, 4:00 PM IST | Last Updated Jul 3, 2024, 4:00 PM IST

ಮುಡಾದಿಂದ ಸಿಎಂ ಸಿದ್ದರಾಮಯ್ಯ(Siddaramaiah) ಪತ್ನಿ ಪಾರ್ವತಿಗೆ ನಿವೇಶನ ಹಂಚಿಕೆ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (Vijayendra) ಆಕ್ರೋಶವನ್ನು ಹೊರಹಾಕಿದ್ದಾರೆ. ಮೈಸೂರು ಮುಡಾ ಹಗರಣ(Mysore Muda scam) ದೊಡ್ಡ ಹಗರಣವಾಗಿದೆ. ಸಿಎಂ ಗಮನಕ್ಕೆ ಬಾರದೆ ಹಗರಣ ನಡೆದಿರುವುದಿಲ್ಲ. ಸಿಎಂನವರೇ ಸ್ವತಃ ಹಣಕಾಸು ಸಚಿವರು. ಯಾವೆಲ್ಲಾ ಹಗರಣ ನಡೆದಿದೆ, ಎಲ್ಲವೂ ತನಿಖೆಯಾಗಲಿ ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ. ಬಿಜೆಪಿಗೆ ತಿರುಗುಬಾಣ ಆದ್ರೂ ಹೋರಾಟ ಮಾಡ್ತೇವೆ. ಬೈರತಿ ಸುರೇಶ್‌ರವರು ಸಿಎಂಗೆ ಪರಮಾಪ್ತರು. ಹಾಗಾಗಿ ಪ್ರಕರಣದಲ್ಲಿ ಸೂಕ್ತ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಇದನ್ನೂ ವೀಕ್ಷಿಸಿ:  ಉಳಿದ ಅವಧಿಗೂ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ: ರಾಘವೇಂದ್ರ ಹಿಟ್ನಾಳ್‌