ಅನೈತಿಕ ಗರ್ಭ ಧರಿಸಿದವರಿಗೆ ಹೆರಿಗೆ, ಹುಟ್ಟಿದ ಮಕ್ಕಳ ಮಾರಾಟ!

ವಿಜಯಪುರದಲ್ಲಿ ಅಕ್ರಮವಾಗಿ ಮಕ್ಕಳ ಮಾರಾಟ ಜಾಲ ಪತ್ತೆಯಾಗಿದ್ದು, ಸರ್ಕಾರಿ ಆಸ್ಪತ್ರೆಯ ನರ್ಸ್ ಜಯಮಾಲ ಇದರಲ್ಲಿ ಭಾಗಿಯಾಗಿದ್ದಾರೆ. ಅನೈತಿಕ ಗರ್ಭ ಧರಿಸಿದವರಿಗೆ ಹೆರಿಗೆ ಮಾಡಿಸುವ ಜಯಮಾಲ, ಈ ಮಕ್ಕಳನ್ನು ಮಾರಾಟ ಮಾಡುವ ಕೆಲಸ ಮಾಡುತ್ತಿದ್ದರು.
 

Share this Video
  • FB
  • Linkdin
  • Whatsapp

ವಿಜಯಪುರ (ಮೇ. 24): ಅಕ್ರಮವಾಗಿ ಮಕ್ಕಳ ಮಾರಾಟ ಜಾಲದಲ್ಲಿ ಸರ್ಕಾರಿ ಆಸ್ಪತ್ರೆಯ ನರ್ಸ್ (government hospital nurse) ಭಾಗಿಯಾಗಿರುವ ಪ್ರಕರಣ ನಡೆದಿದೆ. ಚಡಚಣದ (Chadachana) ಜಗಜೇವಣಗಿಯ (JagaJevanagi) ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿರುವ ಜಯಮಾಲ (Jayamala), ಮಕ್ಕಳ ಮಾರಾಟ (Baby Selling) ಜಾಲದಲ್ಲಿ ಭಾಗಿಯಾಗಿದ್ದಾರೆ ಎಂದು ವರದಿಯಾಗಿದೆ. ಎಫ್ ಐಆರ್ ದಾಖಲಾಗುತ್ತಿದ್ದಂತೆ ನರ್ಸ್ ಜಯಮಾಲಾ ಎಸ್ಕೇಪ್ ಆಗಿದ್ದಾರೆ.

ಅಕ್ರಮವಾಗಿ ಮಕ್ಕಳನ್ನು ಮನೆಯಲ್ಲಿಟ್ಟುಕೊಂಡು ಅವರನ್ನು ಮಹಾರಾಷ್ಟ್ರಕ್ಕೆ ಮಾರಾಟ ಮಾಡುತ್ತಿರುವ ಜಾಲ ಇದಾಗಿದೆ. ಈಗಾಗಲೇ ಮೂರು ಮಕ್ಕಳು ಈ ರೀತಿಯಲ್ಲಿ ಮಾರಾಟವಾಗಿದ್ದಾರೆ. ಇನ್ನೆರಡು ಮಕ್ಕಳನ್ನು ಜಯಮಾಲ ಮನೆಯಲ್ಲಿಯೇ ನೋಡಿಕೊಳ್ಳುತ್ತಿದ್ದರು.

Bengaluru Crime: ರಿವಾಲ್ವರ್‌ ತೋರಿಸಿ ಯುವತಿ ಮೇಲೆ ಮನೆ ಮಾಲೀಕನಿಂದ ರೇಪ್‌

ಅನೈತಿಕ ಗರ್ಭಧಾರಣೆಯಾದವರಿಗೆ ಹೆರಿಗೆ ಮಾಡಿಸುತ್ತಿದ್ದ ಜಯಮಾಲ, ಈ ಮಕ್ಕಳನ್ನು ಮಹಾರಾಷ್ಟ್ರಕ್ಕೆ ಮಾರಾಟ ಮಾಡುತ್ತಿದ್ದರು. ಜಯಮಾಲ ಎಸ್ಕೇಪ್ ಆಗಿರುವ ಕಾರಣ, ಈ ಎರಡು ಮಕ್ಕಳನ್ನು ಮಕ್ಕಳ ಸಹಾಯವಾಣಿ ರಕ್ಷಿಸಿದೆ. ನರ್ಸ್ ಗಾಗಿ ವಿಜಯಪುರ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

Related Video