Asianet Suvarna News Asianet Suvarna News

ಅಥ್ಲೆಟಿಕ್ ಆಟಗಾರ ಇಂದು ಕೋಟಿ ರೂಪಾಯಿ ಒಡೆಯ‌: ಕೋಟೆನಾಡ ಜನರ ಮನಗೆದ್ದ ಯುವ ಉದ್ಯಮಿ !

ಕ್ರೀಡೆಯಲ್ಲಿ ಸಾಧನೆ ಮಾಡಬೇಕಿದ್ದ ರಾಷ್ಟ್ರೀಯ ಅಥ್ಲೆಟಿಕ್ ಆಟಗಾರ ಇಂದು ಕೋಟಿ ಕೋಟಿ ಒಡೆಯ‌. ಆರೋಗ್ಯದ ದೃಷ್ಟಿಯಿಂದ ಗಾಣದಿಂದ ನ್ಯಾಚುರಲ್ ಎಣ್ಣೆ ತಯಾರಿಸುವ ಘಟಕ ತೆರೆಯುವ ಮೂಲಕ ಕೋಟೆನಾಡಿನ ಜನರ ಮನಗೆದ್ದ ಯುವ ಉದ್ಯಮಿ.
 

ಜನರು ಆರೋಗ್ಯವಾಗಿ ಇರಬೇಕಂದ್ರೆ, ಅಷ್ಟೇ ಗುಣಮಟ್ಟದ ಆಹಾರವನ್ನು ಸೇವಿಸಬೇಕಾಗುತ್ತದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಜನರು ಫಾಸ್ಟ್ ಫುಡ್‌ಗೆ ಹೆಚ್ಚು ಮಾರು ಹೋಗಿದ್ದು, ಟೇಸ್ಟ್ ಒಂದು ಚೆನ್ನಾಗಿದ್ರೆ ಸಾಕು ಅದನ್ನು ಯಾವ ಆಯಿಲ್‌ನಿಂದ ಮಾಡಿದ್ರು ಪರವಾಗಿಲ್ಲ. ಅದನ್ನ ಬಾಯಿ ಚಪ್ಪರಿಸಿಕೊಳ್ಳುತ್ತಾ ಆಹಾ ಏನ್ ಚೆಂದವಾಗಿದೆ ಅಂತ ಕಣ್ ಮುಚ್ಕೊಂಡ್ ತಿಂತಾನೇ ಇರ್ತಾರೆ. ಆದ್ರೆ ನಮ್ಮ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುವುದೇ ನಾವು ಅಡುಗೆಗೆ ಬಳಸುವ ಆಯಿಲ್ ಯಾವುದು ಅಂತ. ಇಲ್ಲಿ ದೃಶ್ಯಗಳಲ್ಲಿ ಕಾಣ್ತಿರುವ ಎಣ್ಣೆ(oil) ಬಾಟಲ್ ಗಳು ಯಾವುದೋ ಕೆಮಿಕಲ್ ಯೂಸ್ ಮಾಡಿ ಮಾಡಿದ್ದಲ್ಲ, ಮೇಲಾಗಿ ಎಲ್ಲ ನ್ಯಾಚುರಲ್ ಪ್ರಾಡಕ್ಟ್ಸ್. ಚಿತ್ರದುರ್ಗ(Chitradurga) ನಗರದ ಹೊರವಲಯದಲ್ಲಿರುವ ಆಯುಷ್ ವರ್ಧನ್ ನ್ಯಾಚುರಲ್ಸ್ (Ayush Vardhan Naturals) ಅಂದ್ರೆ ಸಾಕು ಗಾಣದ ಎಣ್ಣೆಗೆ ಫೇಮಸ್ ಸ್ಥಳ. ಮರದ ಗಾಣದಿಂದ ತಯಾರಾದ ಪ್ರಾಕೃತಿಕ, ರಾಸಾಯನಿಕ ರಹಿತ, ಶೇ.100%ರಷ್ಟು ಪರಿಶುದ್ಧ ಆರೋಗ್ಯದಾಯಕ ಶೇಂಗಾ ಎಣ್ಣೆ, ಕೊಬ್ಬರಿ ಎಣ್ಣೆ ಹಾಗೂ ಆಯುರ್ವೇದ ಪದ್ದತಿಯಲ್ಲಿ ತಯಾರಾದ ಅಕಾಲ ನೆರೆ, ತಲೆ ಹೊಟ್ಟು ನಿವಾರಣಾ ಕೇಶ ತೈಲ (ಹರ್ಬಲ್ ಕೇರ್ ಮೆಡಿಸಿನ್ ಆಯಿಲ್) ತಯಾರಕಾ ಘಟಕ ಇದಾಗಿದೆ.

ಇದರ ಮುಖ್ಯಸ್ಥರಾದ ಪ್ರದೀಪ್ ಮೂಲತಃ ಸ್ಪೋರ್ಟ್ಸ್ ಪರ್ಸನ್, ಅಥ್ಲೆಟಿಕ್ಸ್ ನಲ್ಲಿ ರಾಷ್ಟೀಯ ಆಟಗಾರನಾಗಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ಬೆಂಗಳೂರಿನಲ್ಲಿ ICICI ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಕಾರಣಾಂತರಗಳಿಂದ  ರಿಸೈನ್‌ ಮಾಡಿ ತವರೂರು ಚಿತ್ರದುರ್ಗಕ್ಕೆ‌ ಆಗಮಿಸಿ, ತಾನು‌ ಏನಾದ್ರು ಸಾಧನೆ ಮಾಡಬೇಕು ಅಂದ್ರೆ ಅದು ಫುಡ್ ಗೆ ಸಂಬಂಧಿಸಿದ್ದೇ ಆಗಬೇಕು ಎಂದು ಕನಸನ್ನು‌ ಹೊಂದಿದ್ದರು. ಅದಕ್ಕೆ ಪೂರಕವಾಗಿ ಕೊರೊನಾ ಸಮಯದಲ್ಲಿ ಗಾಣದಿಂದ ನ್ಯಾಚುರಲ್ ಎಣ್ಣೆ ತಯಾರಿಕೆ ಮಾಡುವ ಕೆಲಸಕ್ಕೆ ಕೈ ಹಾಕಿದ್ರು. ಶೇಂಗಾದಿಂದ ಅಡುಗೆಗೆ ಬಳಸುವ ಶುದ್ದ ಗಾಣದ ಎಣ್ಣೆ, ಅದೇ ರೀತಿ ಕೊಬ್ಬರಿ ಎಣ್ಣೆ ತಯಾರಿಸಲು ಆರಂಭಿಸಿದ್ರು. ಮೊದ ಮೊದಲು ತುಂಬಾನೇ ಕಷ್ಟವಾಗ್ತಿತ್ತು. ಒಂದು ಕೆಜಿ ಶೆಂಗಾಗೆ 100 ರೂ ಬೇಕಾಗುತ್ತೆ, ಅದೇ ಒಂದು ಲೀಟರ್ ಎಣ್ಣೆಗೆ ಎರಡೂವರೆ ಕೆಜಿ ಶೇಂಗಾ ಬಳಕೆ ಆಗುತ್ತದೆ.

ಇದನ್ನೂ ವೀಕ್ಷಿಸಿ:  ‘ಜಯನಗರ ಸಂಭ್ರಮ’ ಫುಡ್ ಫೆಸ್ಟಿವಲ್‌ಗೆ ಚಾಲನೆ: ಕನ್ನಡ ಪ್ರಭ - ಸುವರ್ಣ ನ್ಯೂಸ್ ಸಹಯೋಗ

Video Top Stories