ಸ್ಥಳ ಮಹಜರಿಗೆ ಬಂದಾಗ ಹೈಡ್ರಾಮ..! ಅವನನ್ನ ನಮಗೆ ಒಪ್ಪಿಸಿ ಎಂದ ಉಡುಪಿ ಜನರು..!

ಹಂತಕನ ಫೋನ್ ಪೊಲೀಸರಿಗೆ ಕೊಟ್ಟಿತ್ತಾ ಸುಳಿವು ?
ಸಂಬಂಧಿಕರ ಮನೆಯಲ್ಲಿದ್ದಾಗಲೇ ಲಾಕ್ ಆಗಿದ್ದ..!
ಒಬ್ಬಳನ್ನ ಕೊಲ್ಲಲು ಬಂದು 4 ಹೆಣ ಉರುಳಿಸಿದ್ದ..!

Share this Video
  • FB
  • Linkdin
  • Whatsapp

ಉಡುಪಿಯಲ್ಲಿ ನಾಲ್ವರ ಹೆಣ ಹಾಕಿ ಎಸ್ಕೇಪ್ ಆಗಿದ್ದ ಪ್ರದೀಪ್ ಚೌಗಲೇ ಸದ್ಯ ಪೊಲೀಸರ(Police) ಅತಿಥಿಯಾಗಿದ್ದಾನೆ. ಮಂಗಳವಾರ ಬೆಳಗಾವಿಯಲ್ಲಿ ಆತನನ್ನ ಅರೆಸ್ಟ್ ಮಾಡಿಕೊಂಡು ಬಂದ ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಿ 14 ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ರು. ಆದ್ರೆ ಆತ ಯಾವಾಗ ಅರೆಸ್ಟ್ ಆದನೋ ಉಡುಪಿಯ(Udupi) ಜನಕ್ಕೆ ರಕ್ತ ಕುದಿಯೋದಕ್ಕೆ ಶುರುವಾಗಿತ್ತು. ಇವತ್ತು ಆತನನ್ನ ಸ್ಥಳ ಮಹಜರಿಗೆ ತೃಪ್ತಿ ನಗರಕ್ಕೆ ಕರೆತರುತ್ತಿದ್ದಂತೆ ಅಲ್ಲಿನ ಜನ ರೊಚ್ಚಿಗೆದ್ದಿದ್ರು. ಆತನನ್ನ ತಮ್ಮ ಕೈಗೆ ಒಪ್ಪಿಸುವಂತೆ ಆಗ್ರಹಿಸಿದ್ರು. ನಿಜಕ್ಕೂ ಇವತ್ತು ಉಡುಪಿಯ ತೃಪ್ತಿ ಲೇಔಟ್ ರಣಾಂಗಣವಾಗಿತ್ತು. ದೇಗೋ ಪೊಲೀಸರು ಎಲ್ಲರನ್ನೂ ಸಮಾದಾನಪಡಿಸಿ ಮನೆಗೆ ಕಳುಹಿಸಿ ಪ್ರವೀಣ್ ಚೌಗಲೆಯನ್ನ(Praveen Chowgale) ಕರೆತಂದು ಸ್ಥಳ ಮಹಜರು ಮಾಡಿ ವಾಪಸ್ ಕರೆದೊಯ್ದರು. ಅವನು ವಿಮಾನದಲ್ಲಿ ಬಂದ ಪ್ರಯಾಣಿಕರಿಗೆ ಸಹಾಯ ಮಾಡಿಕೊಂಡಿದ್ದ ಕ್ರೂ ಮೆಂಬರ್ ಆಗಿದ್ದವನು. ಆದ್ರೆ ಇಂತವನು ನಾಲ್ಕು ಹೆಣ ಹಾಕ್ತಾನೆ ಅಂದ್ರೆ ಯಾರೂ ಕೂಡ ನಂಬೋದಕ್ಕೆ ರೆಡಿ ಇಲ್ಲ. ಆದ್ರೆ ಪ್ರವೀಣ್ ಆವತ್ತು ಮೃಗನ್ನಂತಾಗಲು ಕಾರಣವೇನು ಅನ್ನೋದನ್ನ ಸ್ವತಃ ಆತನೇ ಪೊಲೀಸರೆದುರು ಬಾಯಿಬಿಟ್ಟಿದ್ದಾನೆ. ಅಷ್ಟೇ ಅಲ್ಲ ಆತ ಪೊಲೀಸರ ಕೈಗೆ ತಗ್ಲಾಕಿಕೊಳ್ಳೋದಕ್ಕೂ ಮೊದಲು ಆತ ಉಡುಪಿ ಟು ಬೆಳಗಾವಿ(Belagavi) ಟ್ರಾವಲ್ ಹಿಸ್ಟರಿ ಸ್ವತಃ ಪೊಲೀಸರನ್ನೇ ಬೆಚ್ಚಿ ಬೀಳೀಸಿದೆ. ಸದ್ಯ ಉಡುಪಿ ಬೂದಿ ಮುಚ್ಚಿದ ಕೆಂಡದಂತಾಗಿರೋದಂತು ಸತ್ಯ. ಆದ್ರೆ ಪ್ರವೀಣ್ ಅನ್ನೋ ಕ್ರಿಮಿಗೆ ಆದಷ್ಟು ಬೇಗ ಶಿಕ್ಷೆಯಾಗಲಿ ಎಂಬುದು ಅಲ್ಲಿದ್ದ ಪ್ರತೀಯೊಬ್ಬರ ಆಗ್ರಹವಾಗಿತ್ತು.

ಇದನ್ನೂ ವೀಕ್ಷಿಸಿ:  ಬಿಜೆಪಿ ಸಂಸದ ಪುತ್ರನ ವಿರುದ್ಧ ವಂಚನೆ ಆರೋಪ! ಮದುವೆ ಹೆಸರಲ್ಲಿ ನಂಬಿಸಿ ಕೈಕೊಟ್ಟನಾ ?

Related Video