Asianet Suvarna News Asianet Suvarna News

ಬೆಂಗಳೂರು: ಜ್ಯುವೆಲರಿ ಅಂಗಡಿ ಶೂಟೌಟ್​​ ಕೇಸ್​​​ಗೆ ಟ್ವಿಸ್ಟ್​, ಕಿರಾತಕರನ್ನ ಪೊಲೀಸರು ಪತ್ತೆ ಹಚ್ಚಿದ್ದೇ ರೋಚಕ!

ಕಿರಾತಕರನ್ನ ಪೊಲೀಸರು ಪತ್ತೆ ಹಚ್ಚಿದ್ದೇ ರೋಚಕ. ಒಂದೇ ಒಂದು ಸುಳಿವು ಬಿಡದೇ ಹೋಗಿದ್ದ ಆಗುಂತಕರನ್ನ ನಮ್ಮ ಪೊಲೀಸರು ದೂರದ ಮಧ್ಯ ಪ್ರದೇಶಕ್ಕೆ ಹೋಗಿ ಎತ್ತಾಕೊಂಡು ಬಂದಿದ್ದಾರೆ. 

ಬೆಂಗಳೂರು(ಮಾ.20):  ಸರಿಯಾಗಿ 5 ದಿನಗಳ ಹಿಂದೆ ಬೆಂಗಳೂರಿನ ಜ್ಯುವೆಲರಿ ಅಂಗಡಿಯೊಳಗೆ ಶೂಟ್​ ಔಟ್​ ನಡೆದಿತ್ತು. ಬೈಕ್​ಗಳಲ್ಲಿ ಬಂದ ನಾಲ್ವರು ಅಂಗಡಿಯಲ್ಲಿದ್ದ ಇಬ್ಬರಿಗೆ ಗುಂಡು ಹಾರಿಸಿ ಎಸ್ಕೇಪ್​ ಆಗಿದ್ರು..ಇನ್ನೂ ಇದೇ ಕೇಸ್​​​ನ ತನಿಖೆ ನಡೆಸಿದ ಪೊಲೀಸರು ಇವತ್ತು ಆ ಖದೀಮರ ಹೆಡೆಮುರಿ ಕಟ್ಟಿದ್ದಾರೆ.

ಆದ್ರೆ ಈ ಕಿರಾತಕರನ್ನ ಪೊಲೀಸರು ಪತ್ತೆ ಹಚ್ಚಿದ್ದೇ ರೋಚಕ. ಒಂದೇ ಒಂದು ಸುಳಿವು ಬಿಡದೇ ಹೋಗಿದ್ದ ಆಗುಂತಕರನ್ನ ನಮ್ಮ ಪೊಲೀಸರು ದೂರದ ಮಧ್ಯ ಪ್ರದೇಶಕ್ಕೆ ಹೋಗಿ ಎತ್ತಾಕೊಂಡು ಬಂದಿದ್ದಾರೆ. 
ಚಿನ್ನದ ಅಂಗಡಿಗೆ ಕನ್ನ ಹಾಕಲು ಬಂದವರು ಗುಂಡು ಹಾರಿಸಿ ಎಸ್ಕೇಪ್​ ಆಗಿದ್ರು.. ಆದ್ರೆ ಅವರ ಬೆನ್ನು ಬಿದ್ದ ಪೊಲೀಸರು ಜಸ್ಟ್​​ ಮೂರೇ ದಿನದಲ್ಲಿ ಅವರನ್ನ ಬಂಧಿಸಿ ವಾಪಸ್​ ಬೆಂಗಳೂರಿಗೆ ಕರೆತಂದಿದ್ದಾರೆ. ಆದ್ರೆ ಮೂರು ಜನರನ್ನ ಅರೆಸ್ಟ್​​ ಮಾಡಿದ್ರೆ ಮತ್ತೊಬ್ಬ ಈಗಾಗಲೇ ಶಿವನ ಪಾದ ಸೇರಿದ್ದಾನೆ.

Bengaluru FIR: ಒಂಟಿ ಮಹಿಳೆಯ ಕತ್ತು ಹಿಸುಕಿ ಪರಾರಿ, 800 ಸಿಸಿ ಟಿವಿಗಳಲ್ಲಿ ಕಂಡಿದ್ದು ಕಾಲಷ್ಟೇ!

ಅದು ಪಕ್ಕಾ ರಾಬರಿ ಗ್ಯಾಂಗ್​ ಹೊಂಚು ಹಾಕಿ ಬೇಟೆ ಆಡೋದೇ ಅವರ ಸ್ಪೆಶಾಲಿಟಿ.. ಒಂದು ಅಂಗಡಿಯನ್ನ ಫಿಕ್ಸ್​​ ಮಾಡಕೊಂಡ್ರೆ ಮುಗೀತು ಆ ಅಂಗಡಿ ದೋಚೋವರೆಗೂ ಬಿಡೋದೇ ಇಲ್ಲ.. ಆದ್ರೆ ಆವತ್ತು ಅವರ ನಸೀಬು ಖರಾಬಾಗಿತ್ತು.. ಕಳ್ಳತನಕ್ಕೆ ಬಂದವರು ಒಂದು ಗ್ರಾಂ ಚಿನ್ನವನ್ನೂ ಕದಿಯಲಿಲ್ಲ. ಗುಂಡೇಟು ಕೊಟ್ಟು ಹೋಗಿಬಿಟ್ಟಿದ್ರು.. ಇನ್ನೂ ಇವರ ಬೇಟೆಗೆ ನಿಂತ ಪೊಲೀಸರಿಗೆ ಮೊದಲ ಸುಳಿವು ಕೊಟ್ಟಿದ್ದು ಅಂಗಡಿಯಲ್ಲಿ ಸಿಕ್ಕ ಫಿಂಗರ್​​ ಪ್ರಿಂಟ್​​... ಕದಿಯಲು ಬಂದಿದ್ದ ಒಬ್ಬನ ಫಿಂಗರ್​ ಪ್ರಿಂಟ್​​ 15 ಕೇಸ್​ಗಳಲ್ಲಿ ಬೇಕಾಗಿದ್ದ ಖದೀಮನದ್ದಾಗಿತ್ತು.. ನಂತರ ಅದೇ ಕ್ಲೂ ಇಟ್ಟುಕೊಂಡು ಹೋದ ಪೊಲೀಸರು ಗ್ವಾಲಿಯರ್​ನಲ್ಲಿ ಮೂವರನ್ನ ಅರೆಸ್ಟ್​​ ಮಾಡಿದ್ರೆ ಮತ್ತೊಬ್ಬ ಗುಂಡೇಟಿನಿಂದ ಸತ್ತು ಹೋಗಿದ್ದ.. ಅಂಗಡಿಯಲ್ಲಾದ ಶೂಟೌಟ್​​ ವೇಳೆ ಕಳ್ಳರು ತಮ್ಮದೇ ತಂಡದೊಬ್ಬನಿಗೆ ಗುಂಡು ಹಾರಿಸಿಬಿಟ್ಟಿದ್ದರು.

ಕೋಟಿ ಆಸೆಯಲ್ಲಿ ಬಂದ ಗ್ಯಾಂಗ್​ ಈಗ ಅಂದರ್​ ಆಗಿದೆ. ಅಷ್ಟೇ ಅಲ್ಲ ತಮ್ಮದೇ ಗ್ಯಾಂಗ್​ನಲ್ಲಿದ್ದವನೊಬ್ಬನನ್ನ ಕಳೆದುಕೊಂಡಿದೆ. 

Video Top Stories