Bengaluru FIR: ಒಂಟಿ ಮಹಿಳೆಯ ಕತ್ತು ಹಿಸುಕಿ ಪರಾರಿ, 800 ಸಿಸಿ ಟಿವಿಗಳಲ್ಲಿ ಕಂಡಿದ್ದು ಕಾಲಷ್ಟೇ!

ಬೆಂಗಳೂರಿನಲ್ಲಿ ಸುಖ ಸಂಸಾರ ಮಾಡಿಕೊಂಡಿದ್ದ ಒಂಟಿ ಮಹಿಳೆಯ ಕೊಲೆಗೈದು ಒಂದೇ ಒಂದು ಸುಳಿವು ಸಿಗದೇ ಪರಾರಿಯಾಗಿದ್ದ ಕೊಲೆಗಾರನನ್ನು ಪೊಲೀಸರು ಪತ್ತೆ ಮಾಡಿದ್ದೇ ರೋಚಕ. 

 

 

First Published Jan 17, 2024, 1:16 PM IST | Last Updated Jan 17, 2024, 1:16 PM IST

ಬೆಂಗಳೂರು (ಜ.17):  ಬೆಂಗಳೂರಿನಲ್ಲಿ ಪೇಂಟಿಂಗ್ ಕೆಲಸಕ್ಕೆ ಅಂತ ದಶಕದ ಹಿಂದೆ ಉತ್ತರ ಪ್ರದೇಶದಿಂದ ಬಂದವನು ಇವತ್ತು ಕಾಂಟ್ರಾಕ್ಟರ್ ಲೆವೆಲ್ಲಿಗೆ ಬೆಳದಿದ್ದನು. ಒಳ್ಳೆ ಬ್ಯುಸಿನೆಸ್.. ಅರ್ಥ ಮಾಡಿಕೊಳ್ಳೋ ಹೆಂಡತಿ ಮತ್ತು ಇಬ್ಬರು ಮುದ್ದಾದ ಮಕ್ಕಳು. ಇನ್ನೇನು ಬೇಕು ಆ ಜೀವಕ್ಕೆ. ಆದ್ರೆ ಆವತ್ತು ಮನೆಯಲ್ಲಿದ್ದ ಹೆಂಡತಿಯನ್ನ ಹಂತಕರು ಕೊಂದು ಮುಗಿಸಿದ್ರು. ಅಷ್ಟೇ ಅಲ್ಲ ಮೈಮೇಲಿದ್ದ ಒಡವೆ, ಮನೆಯಲ್ಲಿದ್ದ ದುಡ್ಡನ್ನೆಲ್ಲಾ ದೋಚಿ ಎಸ್ಕೇಪ್ ಆಗಿದ್ದರು. ಆರಂಭದಲ್ಲಿ ಇದು ಮರ್ಡರ್ ಫಾರ್ ಗೇನ್ ಅಂತಲೇ ಅಂದುಕೊಂಡಿದ್ದರು. ಇನ್ನು ಕೇಸ್ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಬರೊಬ್ಬರಿ 800 ಸಿಸಿಟಿವಿ ಕ್ಯಾಮರಾಗಳನ್ನ ಪರಿಶೀಲಿಸಿದರೂ ಹಂತಕನ ಸುಳಿವು ಮಾತ್ರ ಸಿಗಲೇ ಇಲ್ಲ. ಹಾಗಾದ್ರೆ ಆ ಮಹಿಳೆಯನ್ನ ಕೊಂದಿದ್ಯಾರು.? ಎನ್ನುವುದೇ ದೊಡ್ಡ ರಹಸ್ಯವಾಗಿತ್ತು.

ಸೀನ್ ಆಫ್ ಕ್ರೈಂ ನೋಡಿದ ಪೊಲೀಸರಿಗೆ ಇದು ಮರ್ಡರ್ ಫಾರ್ ಗೇನ್ ಅಂತಲೆ ಅನ್ನಿಸಿತ್ತು. ಆದ್ರೆ ಗೇಟ್ ತೆರೆದಿತ್ತು. ಬಾಗಿಲು ಹೊಡೆದಿಲ್ಲ. ಇದು ಪರಿಚಯಸ್ಥರೇ ಮಾಡಿರಬಹುದಾದ ಅನುಮಾನ. ಇನ್ನೂ ಯಾವುದಾದ್ರೂ ಕ್ಲೂ ಸಿಗುತ್ತಾ ಅಂತ ಅಕ್ಕಪಕ್ಕದ ಏರಿಯಾಗಳ ಅಂದಾಜು 800 ಸಿಸಿ ಕ್ಯಾಮರಾಗಳನ್ನೆಲ್ಲಾ ಪರಿಶೀಲನೆ ಮಾಡಿದ್ದರು.  ಆದರ, ಹೀಗೆ ಹುಡುಕುತ್ತಿರುವಾಗ್ಲೇ ಒಂದು ವಿಡಿಯೋದಲ್ಲಿ ಕಂಡ ಕಾಲಿನ ದೃಶ್ಯ ಕೇಸ್ಗೆ ಬಿಗ್ ಟ್ವಿಸ್ಟ್ ಕೊಟ್ಟಿತ್ತು. ಹಾಗಾದ್ರೆ ಕೊಲೆಯಾದ ಮಹಿಳೆ ನೀಲಂನ ಹೆಣ ಹಾಕಿದ್ಯಾರು? ಸಿಸಿ ಟಿವಿಯಲ್ಲಿ ಸಿಕ್ಕ ಆ ಕಾಲು ಯಾರದ್ದು? ಎನ್ನುವುದರ ಹಿಂದೆ ಪೊಲೀಸರಿ ಬಿದ್ದಿದ್ದರು.

24 ವರ್ಷ ಅಪ್ಪನ ಕ್ರೌರ್ಯ, 7 ಮಕ್ಕಳ ಹೆತ್ತ ಮಗಳು, ಭಯಹುಟ್ಟಿಸುತ್ತೆ ಅಪರಾಧ ಜಗತ್ತು

ಲಕ್ಷಲಕ್ಷ ಹಣದ ಆಸೆಯಲ್ಲಿ ಹಂತಕ ನೀಲಂ ಮನೆಗೆ ಎಂಟ್ರಿ ಕೊಟ್ಟಿದ್ದ. ಪರಿಚಯದವನೇ ಆಗಿದ್ರಿಂದ ನೀಲಂ ಬಾಗಿಲು ತೆಗೆದು ಮನೆಯೊಳಗೆ ಬಿಟ್ಟುಕೊಂಡಿದ್ದಳು. ಆದ್ರೆ ಮೊದಲೇ ಪ್ಲಾನ್ ಮಾಡಿಕೊಂಡು ಬಂದಿದ್ದ ಆತ ನೀಲಂ ಕಥೆ ಮುಗಿಸಿ ಮನೆಯನ್ನೆಲ್ಲಾ ತಡಕಾಡಿದ. ಆದ್ರೆ ಆತನಿಗೆ ಸಿಕ್ಕಿದ್ದು ಕೇವಲ 8 ಸಾವಿರ.. ಅದೇ 8 ಸಾವಿರ ಜೇಬಿನಲ್ಲಿಟ್ಟುಕೊಂಡು ಬಂದ ದಾರಿಯಲ್ಲೇ ವಾಪಸ್ ಆಗಿದ್ದ. ಆದ್ರೆ ಆ ಕಿಲಾಡಿ ಹಂತಕ ಆ ಏರಿಯಾದ ಒಂದೇ ಒಂದು ಸಿಸಿ ಟಿವಿಗಳಲ್ಲೂ ಸೆರೆಯಾಗದಂತೆ ಪಕ್ಕಾ ಪ್ಲಾನ್ ಮಾಡಿದ್ದನು. ಮೊಬೈಲ್ ಅನ್ನ ಮನೆಯಲ್ಲೇ ಬಿಟ್ಟು ಹೋಗಿದ್ದನು. ಎರಡ್ಮೂರು ಜೊತೆ ಬಟ್ಟೆಗಳನ್ನ ತೆಗೆದುಕೊಂಡು ಹೋಗಿದ್ದನು. ಪ್ರತೀ ರಸ್ತೆಯಲ್ಲೂ ತನ್ನ ಶರ್ಟ್‌ಗಳನ್ನು ಬದಲಿಸಿದ್ದನು. ಆದ್ರೆ ಆತ ಧರಿಸಿದ್ದ ಪ್ಯಾಂಟ್ ಪೊಲೀಸರಿಗೆ ಸುಳಿವು ಕೊಟ್ಟಿತ್ತು.

ಹಣಕ್ಕಾಗಿ ಜನ ಏನ್ ಬೇಕಾದ್ರೂ ಮಾಡ್ತಾರೆ ಅನ್ನೋದಕ್ಕೆ ನೀಲಂ ಕೊಲೆಯೂ ಒಂದು ಸಾಕ್ಷಿಯಾಗಿದ್ದು ವಿಪರ್ಯಾಸ. ಅದಕ್ಕೇ ಹೇಳೋದು ಯಾರನ್ನ ನಂಬಬೇಕೋ, ಯಾರನ್ನ ಬಿಡಬೇಕೋ ಅಂತ. ಯಾರನ್ನಾದರೂ ನಂಬೋದಕ್ಕೂ ಮೊದಲು ಹುಷಾರ್ ಆಗಿರಬೇಕು.