Tumakuru Crime: ಪರಿಹಾರ ನೆಪದಲ್ಲಿ ಬಾಲಕಿಗೆ ಲೈಂಗಿಕ ದೌರ್ಜನ್ಯ..! ಬ್ಲ್ಯಾಕ್‌ಮೇಲ್ ಕೇಸ್‌ಗೆ ಸಿಕ್ಕಿತು ಮೇಜರ್ ಟ್ವಿಸ್ಟ್..!

ಸ್ವಾಮೀಜಿಯ ಕರ್ಮಕಾಂಡ ಬಯಲು ಮಾಡಿದ್ದು ಶಿಷ್ಯನೇ..!
ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿದನಾ ಪಿಎ..!
ಪರಿಹಾರ ನೆಪದಲ್ಲಿ ಲೈಂಗಿಕ ದೌರ್ಜನ್ಯ ನೀಡಿದ್ದ ಸ್ವಾಮಿ..! 

Share this Video
  • FB
  • Linkdin
  • Whatsapp

ಅವರು ಒಂದು ಪ್ರತಿಷ್ಟಿತ ಮಠದ ಮಠಾಧೀಶರು. ಪ್ರತಿ ನಿತ್ಯ ಇವರ ಆರ್ಶೀವಾದ ಪಡಿಯಲು ಸಹಸ್ರಾರು ಮಂದಿ ಬಂದು ಹೋಗ್ತಿದ್ರು. ಮಠ ಸದಾ ಭಕ್ತಾಧಿಗಳಿಂದ ತುಂಬಿತ್ತು. ಆದ್ರೆ ಇವತ್ತು ಇದೇ ಮಠದ ಸ್ವಾಮೀಜಿಗಳು ಅರೆಸ್ಟ್(Arrest) ಆಗಿದ್ದಾರೆ. ರಾತ್ರೋ ರಾತ್ರಿ ಮಠಕ್ಕೆ ಎಂಟ್ರಿ ಕೊಟ್ಟ ಪೊಲೀಸರು(Police) ಮಠಾಧಿಪತಿಗಳನ್ನ ಬಂಧಿಸಿದ್ದಾರೆ. ಆದ್ರೆ ಸ್ವಾಮೀಜಿಯ ಬಂಧನಕ್ಕೆ ಕಾರಣ ಲೈಂಗಿಕ ಕಿರುಕುಳ(Sexually assaulting). ಅಪ್ರಾಪ್ತೆಯ ಮೇಲೆ ದೌರ್ಜನ್ಯವೆಸಗಿದ ಆರೋಪದಡಿಯಲ್ಲಿ ಇವತ್ತು ಮಠದ ಸ್ವಾಮೀಜಿ ಅರೆಸ್ಟ್ ಆಗಿದ್ದಾರೆ. ಸ್ವಾಮೀಜಿ ಏನೋ ಮಾಡಲು ಹೋಗಿ ಏನೇನೋ ಮಾಡಿಕೊಂಡುಬಿಟ್ಟಿದ್ದಾರೆ. ಅವರ ಜೊತೆಯಲ್ಲೇ ಇದ್ದವರು ಅವರ ಬಂಡವಾಳ ಬಯಲು ಮಾಡಿದ್ದಾರೆ. ಒಂದೇ ಒಂದು ವಿಡಿಯೋ ಇವತ್ತು ಈ ಸ್ವಾಮೀಜಿಯನ್ನ ಆರೋಪಿ ಸ್ಥಾನದಲ್ಲಿ ನಿಲ್ಲಿಸಿದೆ. ಫೋಕ್ಸೋ ಕಾಯ್ದೆಯಡಿ ಸದ್ಯ ಬಾಲ ಮಂಜುನಾಥ ಸ್ವಾಮಿ ಮತ್ತು ಆತನ ಶಿಷ್ಯ ಅರೆಸ್ಟ್ ಆಗಿದ್ದಾರೆ. ಆದ್ರೆ ಈ ಪ್ರಕರಣ ನಡೆದಿದ್ದು 2017ರಲ್ಲಿ ಆದ್ರೆ ಈಗ ಬೆಳಕಿಗೆ ಬಂದಿದ್ದೇಗೆ ಅನ್ನೋದೇ ಯಕ್ಷ ಪ್ರಶ್ನೆ. ಆದರೆ ಇಲ್ಲಿ ಬಾಲ ಮಂಜುನಾಥ ಸ್ವಾಮಿ ತಾವಾಗೇ ಹೋಗಿ ಟ್ರ್ಯಾಪ್ ಆಗಿದ್ದಾರೆ. ತಮಗಿದ್ದ ಗುಪ್ತಾಂಗದ ರೋಗದ ಟ್ರೀಟ್‌ಮೆಂಟ್‌ಗಾಗಿ ವೈದ್ಯರನ್ನ ತಮ್ಮ ಪಿ.ಎ ಮೂಲಕ ಸಂಪರ್ಕಿಸಿದ್ರು. ಆದ್ರೆ ಈ ವೇಳೆ ಪಿ.ಎ ಡಾಕ್ಟರ್ ಜೊತೆ ಸೇರಿಕೊಂಡು ಸ್ವಾಮೀಜಿಯ ವಿಡಿಯೋವನ್ನ ರೆಕಾರ್ಡ್ ಮಾಡಿದ್ರು. ದುಡ್ಡಿಗೆ ಬೇಡಿಕೆ ಇಟ್ಟರು. ಆದ್ರೆ ಕೊಡುವಷ್ಟು ಕೊಟ್ಟಿದ್ದ ಸ್ವಾಮಿ ನಂತರ ಪೊಲೀಸ್ ಠಾಣೆ ಮೆಟ್ಟಿಲ್ಲೇರಿದರು. ಆದ್ರೆ ಯಾವಾಗ ಬ್ಲ್ಯಾಕ್‌ಮೇಲರ್‌ಗಳನ್ನ ಎತ್ತಾಕೊಂಡು ಬಂದು ವರ್ಕ್ ಮಾಡಿದ್ರೋ ಸ್ವಾಮಿಯ ಕರ್ಮಕಾಂಡ ಕೂಡ ಬಯಲಿಗೆ ಬಂದಿತ್ತು.

ಇದನ್ನೂ ವೀಕ್ಷಿಸಿ: Loksabha: ರಣಕಲಿಗಳ ಹುಡುಕಾಟದಲ್ಲಿ ಘಟಾನುಘಟಿ ಪಕ್ಷಗಳು..! ಯಾವ ಕ್ಷೇತ್ರ ಯಾರ ಪಾಲು..ಟೆನ್ಷನ್‌ಗೆ ಕಾರಣವೇನು..?

Related Video