Tumakuru SP ದೂರುದಾರನನ್ನು ತಮ್ಮದೆ ಕಾರಿನಲ್ಲಿ ಕಳುಹಿಸಿ ಎಸ್‌ಐಗೆ ಶಾಕ್ ಕೊಟ್ಟ ಎಸ್‌ಪಿ
ಪೊಲೀಸ್ ಠಾಣೆಯಲ್ಲಿ ದೂರು ಸ್ವೀಕರಿಸಿದರೂ ಆರೋಪಿಗಳನ್ನು ಬಂಧಿಸಲು ಮೀನಮೇಷ ಎಣಿಸುತ್ತಿದ್ದ ವಿಷಯ ತಿಳಿದ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಅವರು ದೂರುದಾರರನ್ನು ತಮ್ಮ ಕಾರಿನಲ್ಲೇ ಇನ್ಸ್ಪೆಕ್ಟರ್ ಕಚೇರಿಗೆ ಕಳುಹಿಸಿಕೊಟ್ಟ ಘಟನೆ ನಡೆದಿದೆ.
ತುಮಕೂರು, (ಜ.14): ಪೊಲೀಸ್ ಠಾಣೆಯಲ್ಲಿ ದೂರು ಸ್ವೀಕರಿಸಿದರೂ ಆರೋಪಿಗಳನ್ನು ಬಂಧಿಸಲು ಮೀನಮೇಷ ಎಣಿಸುತ್ತಿದ್ದ ವಿಷಯ ತಿಳಿದ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಅವರು ದೂರುದಾರರನ್ನು ತಮ್ಮ ಕಾರಿನಲ್ಲೇ ಇನ್ಸ್ಪೆಕ್ಟರ್ ಕಚೇರಿಗೆ ಕಳುಹಿಸಿಕೊಟ್ಟ ಘಟನೆ ನಡೆದಿದೆ.
ಯುವಕನ ಕೈಯಿಂದ ಪ್ಯಾಂಟ್ ಸ್ವಚ್ಛಗೊಳಿಸಿಕೊಂಡ ಮಹಿಳಾ ಪೊಲೀಸ್... ವಿಡಿಯೋ ವೈರಲ್
ದಂಡಿನಶಿವರ ಪೊಲೀಸ್ ಠಾಣೆ ಸಿಬ್ಬಂದಿ ಎಸ್‌ಪಿ ಕಾರು ಇನ್ಸ್ಪೆಕ್ಟರ್ ಕಚೇರಿಗೆ ಬರುತ್ತಿದ್ದಂತೆ, ಅಲ್ಲದೇ ಅದರಲ್ಲಿದ್ದ ದೂರುದಾರರನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ತುರುವೇಕೆರೆ ತಾಲೂಕಿನ ದಂಡಿನಶಿವರ ಗ್ರಾಮದಲ್ಲಿ ಈ ಘಟನೆ ನಡೆದಿದೆ.