ಯುವಕನ ಕೈಯಿಂದ ಪ್ಯಾಂಟ್ ಸ್ವಚ್ಛಗೊಳಿಸಿಕೊಂಡ ಮಹಿಳಾ ಪೊಲೀಸ್... ವಿಡಿಯೋ ವೈರಲ್‌

  • ಯುವಕನ ಕೈಯಲ್ಲಿ ಪ್ಯಾಂಟ್‌ ಕ್ಲೀನ್ ಮಾಡಿಸಿಕೊಂಡ ಮಹಿಳಾ ಪೇದೆ
  • ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
  • ಮಧ್ಯಪ್ರದೇಶದ ರೇವಾದಲ್ಲಿ ಘಟನೆ
     
Madhya Pradesh Policewoman Forces Man To Clean Her Trousers watch video akb

ಭೋಪಾಲ್‌(ಜ.12): ಮಹಿಳಾ ಪೊಲೀಸ್‌ ಪೇದೆಯೋರ್ವರು ಸಾರ್ವಜನಿಕ ಸ್ಥಳದಲ್ಲಿ ಯುವಕನ ಕೈಯಲ್ಲಿ ತಮ್ಮ ಪ್ಯಾಂಟ್‌ ಕ್ಲೀನ್‌ ಮಾಡಿಸಿಕೊಂಡ ಘಟನೆ ನಡೆದಿದ್ದು, ಯುವಕ ಮಹಿಳಾ ಪೊಲೀಸ್ ಪೇದೆಯ ಪ್ಯಾಂಟ್‌ ಸ್ವಚ್ಛಗೊಳಿಸುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 

ಮಧ್ಯಪ್ರದೇಶದ ರೇವಾದಲ್ಲಿ ಈ ಘಟನೆ ನಡೆದಿದೆ. ಮಹಿಳಾ ಪೊಲೀಸ್‌ ಪೇದೆ ಒತ್ತಾಯಪೂರ್ವಕವಾಗಿ ವ್ಯಕ್ತಿಯೋರ್ವನಲ್ಲಿ ತನ್ನ ಪ್ಯಾಂಟ್‌ ಸ್ವಚ್ಛಗೊಳಿಸಿಕೊಂಡಿದ್ದಾಳೆ. ವ್ಯಕ್ತಿಯೊಬ್ಬ ತನ್ನ ಮೋಟಾರ್‌ ಸೈಕಲ್‌ನ್ನು ರಿವರ್ಸ್‌ ತೆಗೆಯುವಾಗ ಅಲ್ಲಿದ್ದ ಕೆಸರುಮಣ್ಣು ಪೊಲೀಸ್‌ ಪೇದೆಯ ಪ್ಯಾಂಟಿಗೆ ರಟ್ಟಿದೆ. ಇದರಿಂದ ಸಿಟ್ಟುಗೊಂಡ ಮಹಿಳಾ ಪೊಲೀಸ್‌ ಪೇದೆ ಆತನ್ನು ಕರೆಸಿ ಆತನ ಕೈಯಿಂದಲ್ಲೇ ತನ್ನ ಪ್ಯಾಂಟ್‌ನ್ನು ಸ್ವಚ್ಛಗೊಳಿಸಿಕೊಂಡಿದ್ದಾಳೆ.  ಆದರೆ ಮಣ್ಣು ಆಕೆಯ ಪ್ಯಾಂಟ್‌ಗೆ ರಟ್ಟಿದ ದೃಶ್ಯ ವಿಡಿಯೋದಲ್ಲಿ ರೆಕಾರ್ಡ್ ಆಗಿಲ್ಲ. ಆರು ಸೆಕೆಂಡ್‌ನ ವಿಡಿಯೋ ಇದಾಗಿದ್ದು, ವ್ಯಕ್ತಿಯೊಬ್ಬ ಬಗ್ಗಿ ಮಹಿಳಾ ಪೊಲೀಸ್‌ ಪೇದೆಯ ಬಿಳಿ ಬಣ್ಣದ ಪ್ಯಾಂಟ್‌ನ್ನು ಬಟ್ಟೆಯಿಂದ ಸ್ವಚ್ಛಗೊಳಿಸುತ್ತಿರುವ ದೃಶ್ಯವಿದೆ.

 

ವ್ಯಕ್ತಿ ತನ್ನ ಪ್ಯಾಂಟ್‌ನ್ನು ಸ್ವಚ್ಛಗೊಳಿಸಿದ ಬಳಿಕ ಮಹಿಳಾ ಪೊಲೀಸ್ ಪೇದೆ ವ್ಯಕ್ತಿಯ ಕೆನ್ನೆಗೆ ಬಾರಿಸಿ ಹೊರಟು ಹೋಗುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಈ ಮಹಿಳಾ ಪೊಲೀಸ್ ಪೇದೆ ತನ್ನ ಮುಖಕ್ಕೆ ಸ್ಕಾರ್ಪ್‌ ಸುತ್ತಿಕೊಂಡಿದ್ದು, ಆಕೆಯ ಮುಖ ಈ ವಿಡಿಯೋದಲ್ಲಿ ಕಾಣಿಸಿಲ್ಲ. ರೇವಾದ ಸಿರ್ಮೌರ್‌ ಚೌಕ್‌ದಲ್ಲಿ ಈ ಘಟನೆ ನಡೆದಿದೆ. ಇನ್ನು ಹೀಗೆ ವ್ಯಕ್ತಿಯೊಂದಿಗೆ ತನ್ನ ಪ್ಯಾಂಟ್‌ ಕ್ಲೀನ್‌ ಮಾಡಿಸಿಕೊಂಡ ಮಹಿಳೆಯನ್ನು ಶಶಿಕಲಾ ಎಂದು ಗುರುತಿಸಲಾಗಿದ್ದು, ಆಕೆ ಹೋಮ್‌ ಗಾರ್ಡ್‌ ಇಲಾಖೆಯ ಕಾನ್ಸ್‌ಟೇಬಲ್‌ ಆಗಿದ್ದಾಳೆ. ಹಾಗೂ ಕಲೆಕ್ಟರ್‌ ಆಫೀಸಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಳು ಎಂದು ತಿಳಿದು ಬಂದಿದೆ. 

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಹೊತ್ತು ಸಾಗಿದ ಮಹಿಳಾ ಪೊಲೀಸ್, ಮೆಚ್ಚುಗೆಯ ಮಹಾಪೂರ!

ಇನ್ನು ಘಟನೆಯ ಬಗ್ಗೆ ನಮಗೆ ಯಾರೂ ದೂರು ನೀಡಿಲ್ಲ. ಒಂದು ವೇಳೆ ದೂರು ನೀಡಿದಲ್ಲಿ ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬಹುದು ಎಂದು ರೇವಾ ((Rewa)ದ ಅಡಿಷನಲ್‌ ಎಸ್ಪಿ ಶಿವಕುಮಾರ್ (Shiv Kumar) ಹೇಳಿದ್ದಾರೆ. 

ಮೂರು ವರ್ಷದಲ್ಲೇ ಮದುವೆಯಾದವಳು ಈಗ ಪೊಲೀಸ್ ಸಾಹಿಬ್!

ಈ ಹಿಂದೆ 10 ಲಕ್ಷ ಲಂಚ ಪಡೆದು ಕಳ್ಳರು ಪರಾರಿ ಆಗಲು ಬಿಟ್ಟ ಪ್ರಕರಣದಲ್ಲಿ ರಾಜಸ್ಥಾನ (Rajasthan)ದ ಲೇಡಿ ಇನ್ಸ್‌ಪೆಕ್ಟರ್ (inspector) ಸೀಮಾ ಜಾಖರ್(Seema Jkhar) ಸಖತ್‌ ಸದ್ದು ಮಾಡಿದ್ದರು. ಕಳ್ಳಸಾಗಾಣಿಕೆದಾರರೊಂದಿಗಿನ ಆಕೆಯ ಸಂಪರ್ಕ ಬಯಲಿಗೆ ಬಂದ ನಂತರ ಲೇಡಿ ಇನ್ಸ್‌ಪೆಕ್ಟರ್ ಸೀಮಾ ಜಾಖರ್ ರಾಜಸ್ಥಾನದಾದ್ಯಂತ ಸಾಕಷ್ಟು ಚರ್ಚೆಗೊಳಗಾಗಿದ್ದರು. ಮಹಿಳಾ ಎಸ್‌ಎಚ್‌ಒ ಸೀಮಾ ಜಾಖರ್ ವಾಟ್ಸ್‌ಆ್ಯಪ್ ಕರೆಯಲ್ಲಿ ಕಳ್ಳಸಾಗಣೆದಾರರೊಂದಿಗೆ ಸಂಪೂರ್ಣ ಡೀಲ್ ಮಾಡಿರುವುದು ಪೊಲೀಸ್ ಇಲಾಖೆಯ ತನಿಖೆಯಿಂದ ಬೆಳಕಿಗೆ ಬಂದಿತ್ತು. ಆರೋಪಿಗಳನ್ನು ಹಿಡಿಯಲು ಅಧಿಕಾರಿಗಳು ಅವರನ್ನು ಕಳುಹಿಸಿದ್ದರು, ಆದರೆ ಕ್ರಮ ಕೈಗೊಳ್ಳುವ ಬದಲು ಮೇಡಂ ಬಾರ್ಮರ್‌ನಲ್ಲಿ ಕುಳಿತಿರುವ ಕಳ್ಳಸಾಗಣೆದಾರರ ಕಿಂಗ್‌ಪಿನ್ ಅನ್ನು ಸಂಪರ್ಕಿಸಿ 10 ಲಕ್ಷ ರೂ.ಗೆ ಡೀಲ್ ಮಾಡಿದ್ದರು.

Latest Videos
Follow Us:
Download App:
  • android
  • ios