ದೇಗುಲ ನಿವೇಶನ ವಿಚಾರಕ್ಕೆ ಜೋಡಿ ಕೊಲೆ: ದೇವಸ್ಥಾನಕ್ಕಾಗಿ ಹೋರಾಡಿದವರಿಗೆ ಸಾವಿನ ಉಡುಗೊರೆ!

Tumakuru Crime News: ಗಣಪತಿ ದೇವಸ್ಥಾನ ಕಟ್ಟಿಸಲು ಹೋಗಿ ಕಿರಾತಕನೊಬ್ಬನಿಂದ ಜೀವವನ್ನೇ ಕಳೆದುಕೊಂಡ ಇಬ್ಬರು ಅಮಾಯಕರ ಕಥೆ ಮತ್ತು ಸದ್ಯ ಆ ಗ್ರಾಮದ ಸ್ಥಿತಿಯನ್ನ ತಿಳಿಸುವುದೆ ಇವತ್ತಿನ ಎಫ್.ಐ.ಆರ್

First Published Sep 24, 2022, 1:42 PM IST | Last Updated Sep 24, 2022, 1:42 PM IST

ತುಮಕೂರು (ಸೆ. 24): ಅವರು ದೇವರಿಗಾಗಿ ಹೋರಾಡಿದವರು, ನಮ್ಮ ಗ್ರಾಮಕ್ಕೆ ವಿಘ್ನ ವಿನಾಯಕನ ಪ್ರತಿಷ್ಠಾಪನೆ ಆಗಬೇಕು ಅಂತ ಕನಸು ಕಂಡವರು. ಆದ್ರೆ ಕನಸು ನನಸಾಗುವ ಮುಂಚೆನೇ ಶಿವನ ಪಾದ ಸೇರಿದ್ರು. ವಿನಾಯಕ ದೇವಸ್ಥಾನ ಕಟ್ಟಲು ಹೋದವರನ್ನ ಅವನೊಬ್ಬ ಕೊಂದು ಹಾಕಿದ್ದ. ಒಬ್ಬರಲ್ಲ ಇಬ್ಬರಲ್ಲ ಮೂವರ ಮೇಲೆ ಆತ ಚಾಕು ಹಾಕಿದ್ದ. ಇನ್ನೂ ಗ್ರಾಮಕ್ಕೆ ಒಳ್ಳೆದು ಮಾಡಲು ಹೋಗಿ ಹೆಣವಾದವರ ಪರ ಇಡೀ ಗ್ರಾಮವೇ ನಿಂತಿತ್ತು. ಪೊಲೀಸರ ವಿರುದ್ಧವೇ ರೊಚ್ಚಿಗೆದ್ದಿದ್ರು. ಅವರ ಸಾವಿಗೆ ನ್ಯಾಯ ಕೊಡಿಸಬೇಕು ಅಂತ ಹೋರಾಡಿದ್ರು. ಹೀಗೆ ಗಣಪತಿ ದೇವಸ್ಥಾನ ಕಟ್ಟಿಸಲು ಹೋಗಿ ಕಿರಾತಕನೊಬ್ಬನಿಂದ ಜೀವವನ್ನೇ ಕಳೆದುಕೊಂಡ ಇಬ್ಬರು ಅಮಾಯಕರ ಕಥೆ ಮತ್ತು ಸದ್ಯ ಆ ಗ್ರಾಮದ ಸ್ಥಿತಿಯನ್ನ ತಿಳಿಸುವುದೆ ಇವತ್ತಿನ ಎಫ್.ಐ.ಆರ್

ಕೋಟಿ ಮಾತನಾಡಿದರೂ, ಕೋಟಿ ಮುತ್ತ ನೀಡಿದರೂ.. ಪ್ರೀತಿಸಿದವನನ್ನೇ ಕೊಂದಳು!

Video Top Stories