ಕೋಟಿ ಮಾತನಾಡಿದರೂ, ಕೋಟಿ ಮುತ್ತ ನೀಡಿದರೂ.. ಪ್ರೀತಿಸಿದವನನ್ನೇ ಕೊಂದಳು!

ಅವರಿಬ್ಬರದು ಅಪ್ಪಟ ಪ್ರೇಮವಿವಾಹ. ಆದರೆ, ಮದುವೆಯಾಗಿ 13 ವರ್ಷವಾಯಿತಲ್ಲ. ಇಷ್ಟು ವರ್ಷಗಳ ಕಾಲ ಪ್ರೀತಿಸಿದ ವ್ಯಕ್ತಿಯೇ ಗಂಡನಾಗಿದ್ದು ಬೋರ್‌ ಹೊಡೆಸಿತ್ತು. ಹೊಸ ಲವರ್‌ಗಾಗಿ ತನ್ನ ಗಂಡನನ್ನೇ ಬಿಡಲು ರೆಡಿಯಾಗಿದ್ದ ಮಹಿಳೆ, ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಲೆ ಮಾಡಿದ ಘಟನೆ ಇದು.
 

First Published Sep 22, 2022, 7:31 PM IST | Last Updated Sep 23, 2022, 8:00 AM IST

ಬೆಂಗಳೂರು (ಸೆ. 22): ಅವರು ಪ್ರೀತಿಸಿ ಮದುವೆಯಾದವರು. 13 ವರ್ಷ ಸುಖವಾಗಿ ಸಂಸಾರ ಮಾಡಿದವರು. ಇವರ ಪ್ರೀತಿಗೆ ಸಾಕ್ಷಿಯಂಬಂತೆ ಇಬ್ಬರು ಗಂಡು ಮಕ್ಕಳು ಕೂಡ ಹುಟ್ಟಿದ್ದರು. ಆದರೆ ಅವತ್ತು 13 ವರ್ಷದ ಸಾಂಸರಿಕ ಜೀವನಕ್ಕೆ ಫುಲ್ ಸ್ಟಾಪ್ ಬಿದ್ದಿತ್ತು. ಹೆಂಡತಿ ಸೀದಾ ಠಾಣೆಗೆ ಬಂದು ನನ್ನ ಗಂಡ ಕತ್ತು ಕೊಯ್ದುಕೊಂಡುಬಿಟ್ಟ. ನಮ್ಮ ಎದುರಲ್ಲೇ ಆತ ಪ್ರಾಣ ಬಿಟ್ಟ ಅಂತ ಕಂಪ್ಲೆಂಟ್ ಕೊಟ್ಟಿದ್ದಳು.

ಇನ್ನೂ ಹೆಂಡತಿ ಕೊಟ್ಟ ದೂರಿನ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರಿಗೆ ಫುಲ್ ಶಾಕ್. ಗಂಡ ಸತ್ತು ಬಿದ್ದಿದ್ದ ದೃಶ್ಯ ನೋಡಿ ಪೊಲೀಸರಿಗೆ ಅನುಮಾನದ ವ್ಯಕ್ತವಾಗಿದೆ. ಹೆಂಡತಿ ಆತ್ಮಹತ್ಯೆ ಅಂತ ದೂರು ನೀಡಿದರೂ,  ಪೊಲೀಸರಿಗೆ ಅದೇನೋ ಅನುಮಾನ ಹೀಗಾಗಿ ಆ ಪ್ರಕರಣದ ತನಿಖೆಗೆ ಇಳಿದಾಗ ಗೊತ್ತಾಗಿದ್ದು ಅದು ಆತ್ಮಹತ್ಯೆ ಅಲ್ಲ ಕೊಲೆ ಅಂತ. ಶಶಿಕುಮಾರನ ಸಾವಿನ ಬಗ್ಗೆ ಅನುಮಾನ ಪಡುವ ಪೊಲೀಸರು ಆ ಕುಟುಂಬದ ಹಿನ್ನಲೆಯನ್ನು ಚೆಕ್ ಮಾಡ್ತಾರೆ. ಆಗ ಅವರಿಗೆ ಗೊತ್ತಾಗೋದು ಅವರದ್ದು ಲವ್ ಮ್ಯಾರೇಜ್ ಅಂತ.  ಇನ್ನೂ 13 ವರ್ಷ ಸುಖವಾಗಿ ಸಂಸಾರ ಮಾಡಿದ್ದ ಈ ಜೋಡಿಗೆ ಎರಡು ಮುದ್ದಾದ ಮಕ್ಕಳು ಕೂಡ ಆಗಿದ್ವು.. ಖುಷಿಖುಷಿಯಾಗಿದ್ದ ಕುಟುಂಬವದು. ಆದರೆ, ಪ್ರೀತಿಯ ಕುಟುಂಬದಲ್ಲಿ ಅವನೊಬ್ಬ ಎಂಟ್ರಿ ಆಗಿದ್ದ.

ಶಾಂತಂ ಪಾಪಂ ಧಾರಾವಾಹಿ ನೋಡಿ ಗಂಡನ ಹತ್ಯೆ!

ಧಾರವಾಹಿಯಲ್ಲಿ ವಿಲನ್ ಒಬ್ಬಳು ಕೇಸ್ನ ದಿಕ್ಕುಬದಲಿಸಲು ಮಾಡಿದ್ದ ಪ್ಲಾನ್ ಅನ್ನೇ ನಾಗಮ್ಮ ಅನುಸರಿಸಿದ್ಲು. ಗಂಡನ ಕಥೆಯನ್ನ ಪ್ರಿಯಕರನೊಂದಿಗೆ ಸೇರಿಕೊಂಡು ಮುಗಿಸಿ ನಂತರ ಪೊಲೀಸರೆದುರು ನಾಟಕವಾಡಿದ್ಲು. ಆದ್ರೆ ಧಾರವಾಹಿಯ ಕ್ಲೈಮ್ಯಾಕ್ಸ್ ಬೇರೆಯಾದ್ರೆ ರಿಯಲ್ ಲೈಫ್ನ ಕ್ಲೈಮ್ಯಾಕ್ಸ್ ಬೇರೆಯದ್ದೇ ಆಗಿತ್ತು.

Video Top Stories