Yadgir Crime News: ಮದುವೆಯಾಗಿ ಒಂದು ವರ್ಷಕ್ಕೆ ಅವಳು ಬೇಡವಾದಳು..ಇಡೀ ಕುಟುಂಬವನ್ನೇ ಕೊಂದು ಶವವನ್ನು ಎಸೆದರು!

ಯಾದಗಿರಿ ಜಿಲ್ಲೆಯ  ವಡಗೇರಾ ತಾಲೂಕಿನ ಜೋಳದಡಗಿ ಗ್ರಾಮದ ಜನ ಅಕ್ಷರಶಹ ಬೆಚ್ಚಿ ಬಿದ್ದಿದ್ರು. ಕಾರಣ ಅವರು ಜೀವಮಾನದಲ್ಲೇ ನೋಡಿರದ ದೃಶ್ಯವನ್ನ ನೋಡಿಬಿಟ್ಟಿದ್ರು. ಕಾರಣ ಅದೇ ಗ್ರಾಮದಲ್ಲಿ ಒಂದಲ್ಲ ಎರಡಲ್ಲ ಮೂರು ಹೆಣಗಳು ಬಿದ್ದಿದ್ವು.

Share this Video
  • FB
  • Linkdin
  • Whatsapp

ಅದು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ತ್ರಿಪಲ್ ಮರ್ಡರ್ (Triple Murder). ಒಂದೇ ಗ್ರಾಮದ ಒಂದೊಂದು ದಿಕ್ಕಿನಲ್ಲಿ ಒಂದೊಂದು ಹೆಣ (Murder) ಪತ್ತೆಯಾಗಿತ್ತು. ಇನ್ನೂ ಅವರೆಲ್ಲಾ ಒಂದೇ ಕುಟುಂಬದವರು. ಅಪ್ಪ, ಅಮ್ಮ ಮತ್ತು ಮಗಳು. ಮೂವರನ್ನೂ ಹಂತಕರು ಕೊಂದು ಒಂದೊಂದು ಕಡೆ ಹೆಣವನ್ನ ಬಿಸಾಡಿ ಹೋಗಿದ್ರು. ಇನ್ನೂ ತನಿಖೆ ಆರಂಭಿಸಿದ ಪೊಲೀಸರು(Police) ಕೆಲವೇ ನಿಮಿಷಗಳಲ್ಲಿ ಹಂತಕರ ಹೆಡೆಮುರಿ ಕಟ್ಟಿದ್ರು. ಹೀಗಿದ್ದ ಕುಟುಂಬದಲ್ಲಿ ಇವತ್ತು ಎಲ್ಲವೂ ಸರ್ವನಾಶವಾಗಿದೆ. ಅನ್ನಪೂರ್ಣಳ ಇಡೀ ಕುಟುಂಬ ಮಸಣ ಸೇರಿದ್ರೆ ನವೀನನ ಕುಟುಂಬ ಜೈಲು ಪಾಲಾಗಿದೆ. ಅವರಿಬ್ಬರೂ ರೀಲ್ಸ್‌ನಲ್ಲಿ(Reels) ಪರಿಚಯವಾಗಿ ನಂತರ ಲವ್ ಮಾಡಿ ಮದುವೆಯಾಗಿದ್ರು. ಒಂದು ಮಗು ಕೂಡ ಆಯ್ತು. ಆದ್ರೆ ಮಗು ಆದ ಬಳಿಕ ಅವನು ಬದಲಾಗೋಕೆ ಶುರು ಮಾಡಿದ್ದ. ಅವನ ಜೊತೆಗೆ ಅವನ ಕುಟುಂಬ ಕೂಡ ವರದಕ್ಷಿಣೆ ಕಿರುಕುಳ ಕೊಡೋಕೆ ಶುರು ಮಾಡಿದ್ರು. ಆಕೆ ಇವರ ಕಾಟ ತಾಳಲಾರದೆ ಗಂಡನ ಮನೆ ಬಿಟ್ಟು ತವರು ಮನೆ ಸೇರಿದ್ಲು. ಆದ್ರೆ ಎಷ್ಟು ದಿನ ಅಂತ ಮನೆಯಲ್ಲಿ ಮದುವೆಯಾದ ಮಗಳನ್ನ ಇಟ್ಟುಕೊಳ್ಳೋಕೆ ಸಾಧ್ಯ. ಮಗಳ ಹೆತ್ತವರು ರಾಜಿ ಪಂಚಾಯ್ತಿ ಮಾಡಲು ಗಂಡನ ಊರಿಗೆ ಬಂದೇ ಬಿಟ್ಟರು. ಅಷ್ಟೇ ಮೊದಲೇ ಹೊಂಚು ಹಾಕಿ ಕೂತಿದ್ದ ಆ ಕುಟುಂಬ ಮೂರು ಹೆಣಗಳನ್ನ ಹಾಕೇ ಬಿಟ್ಟಡರು.

ಇದನ್ನೂ ವೀಕ್ಷಿಸಿ: ಗಾಯಿತ್ರಿ ಸಿದ್ದೇಶ್ವರ್ ಸೋಲಿಗೆ ಲಗಾನ್ ಟೀಮ್ ನೇರ ಕಾರಣ: ರೇಣುಕಾಚಾರ್ಯ ವಿರುದ್ಧ ಸಿದ್ದೇಶ್ವರ್ ಟೀಮ್ ವಾಗ್ದಾಳಿ

Related Video