ರಾಜ್ಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ ‘ಹುಲಿ ಉಗುರು’: ದರ್ಶನ್, ವಿನಯ್ ಗುರೂಜಿಗೂ ಶುರುವಾಗುತ್ತಾ ಸಂಕಷ್ಟ..?

ತಾಯಿ ಕೊಟ್ಟ ಹುಲಿ ಉಗುರಿನಿಂದ ಜಗ್ಗೇಶ್‌ಗೆ ಕಂಟಕ..?
ಜಗ್ಗೇಶ್, ದರ್ಶನ್, ನಿಖಿಲ್, ರಾಕಲೈನ್‌ಗೂ ಢವಢವ
ಅರಣ್ಯಾಧಿಕಾರಿಗಳಿಗೆ ವಿವಿಧ ಸಂಘಟನೆಗಳಿಂದ ದೂರು
ನಟ ದರ್ಶನ್ ಹುಲಿ ಉಗುರು ಲಾಕೆಟ್ ಫೋಟೋ ವೈರಲ್
 

Share this Video
  • FB
  • Linkdin
  • Whatsapp

ವರ್ತೂರು ಸಂತೋಷ್ (Varthur Santhosh)ಅನ್ನೋ ರೈತ ಬಿಗ್ ಬಾಸ್(Bigg boss) ಮನೆಯಲ್ಲಿ ಅರೆಸ್ಟ್ ಆಗಿದ್ದೇ ಬಂತು.ಇವತ್ತು ರಾಜ್ಯದೆಲ್ಲೆಡೇ ಬರೀ ಹುಲಿ ಉಗುರುವಿನದ್ದೇ ಸುದ್ದಿ. ಸಂತೋಷ್ ಅರೆಸ್ಟ್ ನಂತರ ಇದೇ ರೀತಿ ಹುಲಿ ಉಗುರು ಪೆಂಡೆಂಟ್ ಧರಿಸಿದ್ದ ಸ್ಟಾರ್ ನಟರು, ಗುರೂಜಿಗಳಿಗೆ ಸಂಕಷ್ಟ ಶುರುವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಫೋಟೋಗಳ(Photos) ಮೂಲಕ ಸೆಲೆಬ್ರಿಟಿಗಳೂ ಈ ಕೇಸ್‌ನಲ್ಲಿ ತಗ್ಲಾಕಿಕೊಂಡರು. ಎಲ್ಲರ ಮನೆಯ ಬಾಗಲಿ ಬಡೆದಿದ್ದಾಯ್ತು. ಆದ್ರೆ ಇದೆಲ್ಲಾ ಆಗುವಷ್ಟರಲ್ಲಿ ಒಬ್ಬೊಬ್ಬರು ಒಂದೊಂದು ಸಬೂಬು ಹೇಳೋದಕ್ಕೆ ಶುರು ಮಾಡಿದ್ರು. ಒಬ್ಬರು ನನಗೆ ಗೆಳಯ ಕೊಟ್ಟಿದ್ದು ಅಂದ್ರೆ ಮತ್ತೊಬ್ಬರು ಅದು ಡೂಪ್ಲಿಕೇಟ್ ಅಂದುಬಿಟ್ಟರು. ದರ್ಶನ್‌ರಿಂದ (Darshan)ಹಿಡಿದು ಧನಂಜಯ ಗುರೂಜಿವರೆಗೆ ಎಲ್ಲರ ಮನೆ ಮೇಲೂ ದಾಳಿ ಮಾಡಿದ ಅರಣ್ಯ ಇಲಾಖೆ ಎಲ್ಲರಿಗೂ ನೋಟೀಸ್ ಕೊಟ್ಟು ಬಂದಿದೆ. ಸದ್ಯ ಹೊರಗೆ ಬಂದಿರೋದು 6 ಹೆಸರುಗಳು ಮಾತ್ರ. ಆದ್ರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಸರುಗಳು ಬಂದ್ರೂ ಅಚ್ಚರಿ ಇಲ್ಲ. 

ಇದನ್ನೂ ವೀಕ್ಷಿಸಿ: ಆರಂಭವಾಗಿದ್ದು ಹೇಗೆ ಗೊತ್ತಾ ಹುಲಿ ಆಟ..? ಏನು ಹೇಳುತ್ತೆ ವನ್ಯಜೀವಿ ರಕ್ಷಣಾ ಅಧಿನಿಯಮ..?

Related Video