Dowry: ಕಲ್ಯಾಣಮಂಟಪದಲ್ಲೇ ಸರ್ಕಾರಿ ನೌಕರನ ಹೈಡ್ರಾಮಾ! ಅರಿಶಿಣ ಶಾಸ್ತ್ರದ ವೇಳೆ ವರದಕ್ಷಿಣೆಗೆ ಬೇಡಿಕೆಯಿಟ್ಟ ವರ !

ಅರಿಶಿನ ಶಾಸ್ತ್ರ ಮಂಟಪದಿಂದ ಎಸ್ಕೇಪ್ ಆಗಲು ವರನ ಯತ್ನ
ಹಳದಿ ಕಾರ್ಯದಲ್ಲಿ ಪಾಲ್ಗೊಳ್ಳಲ್ಲ ಎಂದು ನಾಟಕವಾಡಿದ ಸಚಿನ್
ಮದುವೆಗೆ ನಿರಾಕರಿಸಿದ  ವರನಿಗೆ ಹುಡುಗಿ ಮನೆಯವರಿಂದ ಗೂಸಾ

First Published Jan 2, 2024, 11:58 AM IST | Last Updated Jan 2, 2024, 11:58 AM IST

ಬೆಳಗಾವಿ: ಮದುವೆ ದಿನವೇ ಕಲ್ಯಾಣಮಂಟಪದಲ್ಲೇ ಸರ್ಕಾರಿ ನೌಕರ ಹೈಡ್ರಾಮಾ ಮಾಡಿರುವ ಘಟನೆ ಬೆಳಗಾವಿಯಲ್ಲಿ(Belagavi) ನಡೆದಿದೆ.ಅರಿಶಿಣ ಶಾಸ್ತ್ರದ ವೇಳೆ ವರದಕ್ಷಿಣೆಗೆ(Dowry) ವರ ಬೇಡಿಕೆ ಇಟ್ಟಿದ್ದಾನೆ. 200 ಗ್ರಾಂ ಚಿನ್ನಾಭರಣ, 10 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾನೆ. ಬೆಳಗಾವಿ ಡಿಸಿ ಕಚೇರಿಯಲ್ಲಿ SDA ಆಗಿರುವ ಸಚಿನ್ ಪಾಟೀಲ್. ವರನ ಈ ಡಿಮ್ಯಾಂಡ್‌ಗೆ ವಧುವಿನ ಸಂಬಂಧಿಕರು ತಬ್ಬಿಬ್ಬಾಗಿದ್ದಾರೆ. ನಾವು ಬಡವರು ಹಣ, ಚಿನ್ನ ಎಲ್ಲಿಂದ ಕೊಡೋದು ಎಂದು ಪ್ರಶ್ನೆ ಮಾಡಿದ್ದಾರೆ. ಬಳಿಕ ಅರಿಶಿನ ಶಾಸ್ತ್ರದಿಂದ ವರ(Groom) ಎಸ್ಕೇಪ್‌ ಆಗಲು ಯತ್ನಿಸಿದ್ದಾನೆ. ಬಳಿಕ ಆತನನ್ನು ರೂಮ್‌ನಲ್ಲೇ ಲಾಕ್‌ ಮಾಡಿ, ಪೊಲೀಸರಿಗೆ ಒಪ್ಪಿಸಲಾಗಿದೆ. 25 ಸಾವಿರ ವರದಕ್ಷಿಣೆ, 50 ಗ್ರಾಂ‌ ಚಿನ್ನ ಕೊಡುವುದಾಗಿ ಮಾತುಕತೆ ಮಾಡಲಾಗಿತ್ತು. ಮದುವೆ ತಾವೇ ಮಾಡಿಕೊಡುವುದಾಗಿ ಒಪ್ಪಿದ್ದ ಹುಡುಗಿ(Bride) ಪೋಷಕರು. ಮಾತುಕತೆಗೆ ಉಭಯ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದರು. ನಿಶ್ಚಿತಾರ್ಥ ಬಳಿಕ ಯುವತಿ ಜೊತೆ ಯುವಕ ದೈಹಿಕ ಸಂಬಂಧ ಬೆಳೆಸಿದ್ದ ಎಂದು ತಿಳಿದುಬಂದಿದೆ. ನಾಲ್ಕೈದು ಸಲ ಯುವತಿ ಜೊತೆ ದೈಹಿಕ ಸಂಪರ್ಕ ಸಾಧಿಸಿದ್ದ ಎನ್ನಲಾಗ್ತಿದೆ. ಸಚಿನ್ ಪಾಟೀಲನನ್ನು ವಶಕ್ಕೆ ಪಡೆದು  ಪೊಲೀಸರು ವಿಚಾರಣೆ ನಡೆಸಿದ್ದಾರೆ. ಸಚಿನ್ ಪಾಟೀಲ್ ವಿರುದ್ಧ ಖಾನಾಪುರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಐಪಿಸಿ ಸೆಕ್ಷನ್ 303 (ಕೊಲೆ ಬೆದರಿಕೆ), ಐಪಿಸಿ ಸೆಕ್ಷನ್ 376 (ಅತ್ಯಾಚಾರ), ಐಪಿಸಿ ಸೆಕ್ಷನ್ 420 (ವಂಚನೆ) ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ವೀಕ್ಷಿಸಿ:  Belagavi: ಒಂದು ಹುಡುಗಿಗಾಗಿ ಇಬ್ಬರು ಯುವಕ ಮಧ್ಯೆ ಗಲಾಟೆ: ಬುದ್ಧಿ ಹೇಳಿದ ಗ್ರಾಮದ ಮುಖ್ಯಸ್ಥರ ಮನೆ ಧ್ವಂಸ !