Wife Murder By Husband: ತುಂಡುಡುಗೆ ಧರಿಸಿದ್ದಕ್ಕೆ ಪತ್ನಿಯನ್ನೇ ಕೊಂದ ಗಂಡ: ಪ್ರೀತಿಸಿ ಕೈ ಹಿಡಿದವಳ ಕತ್ತು ಸೀಳಿದ ಪತಿರಾಯ !

ತುಂಡುಡುಗೆ ಧರಿಸುತ್ತಾಳೆಂದು ಪತ್ನಿ ಕೊಂದ ಪತಿ 
ಪತ್ನಿಯ ಕತ್ತು ಸೀಳಿ ಬರ್ಬರವಾಗಿ ಕೊಲೆಗೈದ ಪತಿ
ಜೀವನ್ ಎಂಬಾತನಿಂದ ಜ್ಯೋತಿಯ ಬರ್ಬರ ಕೊಲೆ

Share this Video
  • FB
  • Linkdin
  • Whatsapp

ಪತ್ನಿ ತುಂಡುಡುಗೆ ಧರಿಸುತ್ತಾಳೆ ಎಂದು ಪತಿ ಆಕೆಯನ್ನು ಕೊಂದಿರುವ ಘಟನೆ ಹಾಸನ(Hassan) ಜಿಲ್ಲೆಯ ಅರಸೀಕೆರೆಯ ರಾಂಪುರದಲ್ಲಿ ನಡೆದಿದೆ.ಧಾರವಾಡ ಮೂಲದ ಜ್ಯೋತಿ (22) ಕೊಲೆಯಾದ(Murder) ಯುವತಿ. ಜೀವನ್ ಹಾಗೂ ಜ್ಯೋತಿ ಪ್ರೀತಿಸಿ ಮದುವೆಯಾಗಿದ್ದರು. ಜ್ಯೋತಿ ಹೆಚ್ಚು ಮಾಡ್ರನ್ ಡ್ರೆಸ್(Modern dress) ಧರಿಸುತ್ತಿದ್ದರು. ಪತ್ನಿಯ ತುಂಡುಡುಗೆ ಮೋಹಕ್ಕೆ ಪದೇ ಪದೆ ಪತಿ ಜಗಳವಾಡುತ್ತಿದ್ದ. ಶನಿವಾರ ಸಂಜೆ ಮಾಡ್ರನ್ ಡ್ರೆಸ್ ಹಾಕಿಕೊಂಡು ಜ್ಯೋತಿ ಹೊರ ಹೋಗುತ್ತಿದ್ದಳು. ಇದನ್ನು ಪತಿ ಜೀವನ್ ವಿರೋಧಿಸಿದ್ದ. ಬೈಕ್‌ನಲ್ಲಿ ತಾನೇ ಡ್ರಾಪ್ ಕೊಡುವುದಾಗಿ ಹೇಳಿ, ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಕೊಲೆ ಮಾಡಿದ್ದಾನೆ.ಚಾಕುವಿನಿಂದ ಕುತ್ತಿಗೆ ಕೊಯ್ದು ಬರ್ಬರವಾಗಿ ಕೊಲೆ ಮಾಡಲಾಗಿದೆ. ಕೊಲೆ ಮಾಡಿ ಪತಿ ಪರಾರಿಯಾಗಿದ್ದು, ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ವೀಕ್ಷಿಸಿ:  Siddaramaiah VS Pratap Simha: ನನ್ನ ತಮ್ಮನ ಮೂಲಕ ನನ್ನ ಮುಗಿಸಲು ಪ್ರಯತ್ನ ಮಾಡ್ತಿದ್ದೀರಾ ?: ಪ್ರತಾಪ್ ಸಿಂಹ

Related Video