ಹುಬ್ಬಳ್ಳಿಯಲ್ಲಿ ಹೆಚ್ಚಾದ ಕಳ್ಳರ‌ ಕಾಟ: ಒಂದೇ ರಾತ್ರಿ ಮೂರು ಮನೆ ದೋಚಿದ ಖದೀಮರು

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಒಂದೇ ರಾತ್ರಿ ಮೂರು ಮನೆ ದೋಚಿ ಖದೀಮರು ಪರಾರಿಯಾಗಿದ್ದಾರೆ.
 

Share this Video
  • FB
  • Linkdin
  • Whatsapp

ಹುಬ್ಬಳ್ಳಿಯಲ್ಲಿ ಕಳ್ಳರ‌ ಕಾಟ ಹೆಚ್ಚಾಗಿದ್ದು, ಬೀಗ ಹಾಕಿದ ಮನೆಗಳನ್ನು ಖದೀಮರು ಟಾರ್ಗೆಟ್‌ ಮಾಡಿ ಕನ್ನ ಹಾಕುತ್ತಾರೆ. ಮಂಕಿ ಕ್ಯಾಪ್‌ ಧರಿಸಿ ಗ್ಯಾಸ್ ಕಟರ್‌ ಹಿಡಿದು ದರೋಡೆ ಮಾಡುತ್ತಾರೆ. ಒಂದೇ ರಾತ್ರಿ ಮೂರು ಮನೆ ದೋಚಿದ್ದಾರೆ ಖದೀಮರು. ಎರಡು ತಿಂಗಳಲ್ಲಿ 20ಕ್ಕೂ ಹೆಚ್ಚು ಮನೆಯಲ್ಲಿ ಕಳ್ಳತನವಾಗಿದ್ದು, ಪ್ರಲ್ಹಾದ್ ಜೋಶಿಯವರು ವಾಸ ಇರುವ ಬಡಾವಣೆಯ ಮೂರು ಮನೆಗಳಲ್ಲಿ ಕಳ್ಳತನ ಆಗಿದೆ. ಶಾರದಾ ಮಜಲಿಕರ್‌ ಎನ್ನುವವರ ಮನೆಯಲ್ಲಿ ಚಿನ್ನಾಭರಣ, ಒಂದುವರೆ ಲಕ್ಷ ರೂಪಾಯಿ ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಕಳ್ಳರ ಚಲನವಲನಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕೇಶವಾಪುರ, ಅಶೋಕ್‌ ನಗರ ಪೋಲಿಸ್‌ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ.

ಸ್ಯಾಂಟ್ರೋ ರವಿ ಬೆನ್ನು ಬಿದ್ದ ಖಾಕಿ ಪಡೆ: ರಾಜಕಾರಣಿಗಳ ಮೇಲೆ ನಿಗಾ

Related Video