ಮೆಡಿಕಲ್‌ ಶಾಪ್‌ನಲ್ಲಿ ಸಿಕ್ಕಿ ಬಿದ್ದ ಕಳ್ಳ: ಸತ್ತ ಹಾಗೆ ಹೈಡ್ರಾಮಾ ಮಾಡಿದ ಐನಾತಿ

ಬೆಂಗಳೂರಿನಲ್ಲಿ ಕಳ್ಳತನ ಮಾಡಿ ಸಿಕ್ಕಿ ಬಿದ್ದು ಸಿರಪ್ ಕುಡಿದು ಸತ್ತಂತೆ ಬಿದ್ದಿದ್ದ, ಕಳ್ಳನ ಹೈಡ್ರಾಮಾ ಬಯಲಾಗಿದೆ. 
 

Share this Video
  • FB
  • Linkdin
  • Whatsapp

ಬೆಂಗಳೂರು( ನ.19):ಯಶವಂತಪುರ ಮೆಡಿಕಲ್ ಶಾಪ್‌ನಲ್ಲಿ ಕಳ್ಳತನ ಮಾಡುವಾಗ ಅಶೋಕ್ ಅಲಿಯಾಸ್ ಪಿಂಟು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಮೆಡಿಕಲ್ ಶಾಪ್‌ನಲ್ಲೇ ಈತನನ್ನ ಜನ ಲಾಕ್ ಮಾಡಿದ್ರು. ಈ ವೇಳೆ ತಪ್ಪಿಸಿಕೊಳ್ಳಲು ಆಸಾಮಿ ಖತರ್ನಾಕ್ ಪ್ಲಾನ್ ಮಾಡಿದ್ದ. ಮೆಡಿಕಲ್‌ನಲ್ಲಿರೋ ಸಿರಪ್ ಬಾಟಲ್ ತೆಗೆದುಕೊಂಡು ವಿಷ ಕುಡಿತೀನಿ ಅಂತಾ ಬೆದರಿಕೆ ಹಾಕಿದ್ದಾನೆ. ಜನ ಕೇಳದಿದ್ದಾಗ ಸಿರಪ್ ಕುಡಿದು ಮೂರ್ಚೆ ಬಿದ್ದಂತೆ ನಾಟಕವಾಡಿದ್ದಾನೆ. ಪೊಲೀಸರು ಬಂದು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿದಾಗ ಐನಾತಿಯ ಹೈಡ್ರಾಮ್ ಬಯಲಾಗಿದೆ.

Sexual harassment : 7 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿಗೆ 5ವರ್ಷ ಜೈಲು

Related Video