3 ವರ್ಷದ ಮಗುವಿನ ಎದುರೇ ಬಾಯ್​ಫ್ರೆಂಡ್​​​ ಜೊತೆ ಸೇರಿ ಗಂಡನನ್ನೇ ಮುಗಿಸಿಬಿಟ್ಟಳು ಪಾಪಿ ಪತ್ನಿ!

ಹೆಣ್ಣು ಸಂಸಾರದ ಕಣ್ಣು ಎನ್ನುವ ಮಾತಿದೆ. ಆದರೆ ಇಲ್ಲೊಬ್ಬಳು ತನ್ನ ಬಾಯ್‌ಫ್ರೆಂಡ್ ಜತೆಗೂಡಿ ಮೂರು ವರ್ಷದ ಮಗುವಿನ ಮುಂದೆಯೇ ತನ್ನ ಗಂಡನ ಕೊಲೆ ಮಾಡಿ ನಾಟಕವಾಡಿ ಸಿಕ್ಕಿಬಿದ್ದಿದ್ದಾಳೆ. ಹಾವೇರಿಯಲ್ಲಿ ನಡೆದ ಈ ಇಂಟ್ರೆಸ್ಟಿಂಗ್ ಕೊಲೆ ಪ್ರಕರಣ ಇಲ್ಲಿದೆ ನೋಡಿ

Share this Video
  • FB
  • Linkdin
  • Whatsapp

ಹಾವೇರಿ: ಅದು ಸಣ್ಣ ಕುಟುಂಬ. ಗಂಡ ಹೆಂಡತಿ ಮತ್ತು ಪುಟ್ಟ ಮಗು. ಗಂಡ ಗಾರೆ ಕೆಲಸ ಮಾಡ್ತಿದ್ರೆ ಹೆಂಡರಿ ಮಗುವನ್ನು ನೋಡಿಕೊಂಡು ಮನೆಯಲ್ಲೇ ಇದ್ದಳು. ಆದ್ರೆ ಆವತ್ತು ಕೆಲಸಕ್ಕೆ ಹೊರಟಿದ್ದ ಗಂಡ ಸ್ನಾನ ಮಾಡಲು ಬಚ್ಚಲು ಮನೆಗೆ ಹೋದ. ಆದ್ರೆ ಕಾಲು ಜಾರಿ ಬಿದ್ದು ಮೃತಪಟ್ಟಿದ್ದ. ಆದ್ರೆ ಆಸ್ಪತ್ರೆಗೆ ಕರೆದೊಯ್ದಾಗ ಅಲ್ಲಿದ್ದ ಡಾಕ್ಟರ್​ಗೆ ಅದು ಆಕಸ್ಮಿಕ ಸಾವಲ್ಲ ಬದಲಿಗೆ ಮರ್ಡರ್​​ ಅನ್ನಿಸಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪೊಲೀಸರಿಗೆ ಕರೆ ಮಾಡಿದ್ರು. ಪೊಲೀಸರು ಬಂದು ಮೃತದೇಹವನ್ನ ಪೋಸ್ಟ್​​ ಮಾರ್ಟಮ್​ಗೆ ರವಾನಿಸಿದ್ರು. ಆದ್ರೆ ಪೋಸ್ಟ್​ ಮಾರ್ಟಮ್​ ರಿಪೋರ್ಟ್​ ಬರುವಷ್ರಲ್ಲೇ ಅದೇ ಮನೆಯಲ್ಲಿದ್ದ ಅವನದ್ದೇ 3 ವರ್ಷದ ಮಗು ಅಪ್ಪನನ್ನ ಹೊಡೆದು ಕೊಂದರು ಅಂತ ಹೇಳಿತ್ತು. ಹಾಗಾದ್ರೆ ಆ ಮಗು ಹೇಳಿದ್ದಂತೆ ಅದು ಕೊಲೆನಾ.? ಕೊಲೆ ಮಾಡಿದ್ದು ಯಾರು.? ಬಚ್ಚಲುಮನೆಯಲ್ಲಿ ಆದ ಒಂದು ಸಾವಿನ ರಹಸ್ಯವೇ ಬಿಚ್ಚಿಡ್ತೀವಿ ನೋಡಿ. 

Related Video