ಕ್ಷಮೆ ಇರಲಿ ಅಮ್ಮಂದಿರೆ... ಬದಲಾದ ಬೆಂಗಳೂರು ಸರಗಳ್ಳನ ಬದುಕಿನ ಕತೆ!
ಸುವರ್ಣ ನ್ಯೂಸ್ ಕಚೇರಿಗೆ ಬಂತೊಂದು ಪತ್ರ/ ಬೆಳಗ್ಗೆ 11.30 ರವರೆಗೆ ಈ ಸುದ್ದಿ ಪ್ರಸಾರ ಮಾಡಲಾಗುತ್ತದೆ ಎಂಬ ಕಲ್ಪನೆ ವಾಹಿನಿಗೆ ಇರಲಿಲ್ಲ/ ಈ ಸುದ್ದಿ ಗೋಲ್ಡನ್ ಎಕ್ಸ್‌ಕ್ಲೂಸೀವ್
ಬೆಂಗಳೂರು (ಸೆ.18) ಸುವರ್ಣ ನ್ಯೂಸ್ ನ ನಿರೂಪಕ ಜಯಪ್ರಕಾಶ ಶೆಟ್ಟಿ ಅವರ ವಿಳಾಸಕ್ಕೆ ಬಂದ ಪತ್ರವೊಂದು ಇಡೀ ದಿನದ ಸುದ್ಧಿಯ ಘಟನಾವಳಿಗಳನ್ನೆ ಬದಲಾಯಿಸಿಬಿಟ್ಟಿತು.
ಒಂದು ಮಾಧ್ಯಮದ ವಿಶ್ವಾಸಾರ್ಹತೆಗೆ ಇದಕ್ಕಿಂತ ದೊಡ್ಡ ಪ್ರಶಸ್ತಿ ಬೇಕಾ?
ಪತ್ರವನ್ನು ತೆರೆದು ನೋಡಿದಾಗ ಅಚ್ಚರಿ ಕಾದಿತ್ತು. ಒಂದು ಪತ್ರ ಸುವರ್ಣ ನ್ಯೂಸ್‌ಗೆ , ಒಂದು ಪತ್ರ ಬೆಂಗಳೂರು ಪೊಲೀಸರರಿಗೆ ಇನ್ನೊಂದು ಪತ್ರ ಕುಟುಂಬವೊಂದಕ್ಕೆ.. ಹೌದು ಅನಿವಾರ್ಯ ಕಾರಣಕ್ಕೆ ಸರಕಳ್ಳತನ ಮಾಡಿದ್ದ ವ್ಯಕ್ತಿ ಅದನ್ನು ಸುವರ್ಣ ನ್ಯೂಸ್ ಮೂಲಕ ಹಿಂದಕ್ಕೆ ನೀಡಿದ ಕತೆ.. ಕ್ಷಮಿಸಿಬಿಡಿ ಅಮ್ಮಂದಿರಾ!