ಬೆಂಗಳೂರು (ಸೆ.18): ಮಾಧ್ಯಮವೊಂದೂ ಸರಿಯಾದ ದಾರಿಯಲ್ಲಿ ನಡೆಯುತ್ತಿದೆ ಎನ್ನಲು ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಗಿಟ್ಟಿಸುವುದರಿಂದ ನಿರ್ಧರಿಸುವುದು ಅಸಾಧ್ಯ. ಬೇರೆ ಬೇರೆ ಪ್ರಶಸ್ತಿ ಪುರಸ್ಕಾರಗಳನ್ನು ಮುಡಿಗೇರಿಸಿಕೊಂಡಾಗಲೂ ಆ ಮಾಧ್ಯಮ ಸಂಸ್ಥೆ ಶ್ರೇಷ್ಠ ಎನಿಸಿಕೊಳ್ಳುವುದು ಸುಲಭವಲ್ಲ. ಆದರೆ, ಯಾವಾಗ ಸಮಾಜದ ಕಟ್ಟ ಕಡೆಯ ವ್ಯಕ್ತಿಯೊಂದಿಗೆ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗುತ್ತೋ ಆಗ ಆ ಮಾಧ್ಯಮದ ವಿಶ್ವಾಸರ್ಹತೆಗೆ ಗೌರವ ಸಿಕ್ಕಂತಾಗುತ್ತದೆ. 

ಶ್ರೀ  ಸಾಮಾನ್ಯನ ದುಃಖ-ದುಮ್ಮಾನಗಳಿಗೆ ಸದಾ ತುಡಿಯುವ ಏಷ್ಯಾನೆಟ್ ಸಮೂಹ ಮಾಧ್ಯಮದ ಸುವರ್ಣ ನ್ಯೂಸ್ ಈಗಾಗಲೇ ಇಂಥ ಸಾಕಷ್ಟು ಪ್ರಶಸ್ತಿ ಪುನಸ್ಕಾರಗಳನ್ನು ಪಡೆದು, ತನ್ನ ನೇರ, ದಿಟ್ಟ, ನಿರಂತರ ಸುದ್ದಿಗೆ ಮನೆ ಮಾತಾಗಿದೆ. ಆದರೆ, ಇದೀಗ ಬಹುಶಃ ಮಾಧ್ಯಮ ಇತಿಹಾಸದಲ್ಲಿಯೇ ಎಂದೂ ನಡೆದಿರದ ಘಟನೆ, ಸುವರ್ಣ ನ್ಯೂಸ್‌ನೊಂದಿಗೆ ನಡೆದಿದ್ದು, ಸಮಾಜ, ಪೊಲೀಸ್ ಇಲಾಖೆಗೇ ಆಶ್ಚರ್ಯವನ್ನುಂಟು ಮಾಡಿದೆ. ಹಿಂದೆಂದೂ ನಡೆಯದ ಅಚ್ಚರಿಯ ಬೆಳವಣಿಗೆಗೆ ನಿಮ್ಮ ಪ್ರೀತಿಯ ಸುವರ್ಣ ನ್ಯೂಸ್ ಸಾಕ್ಷಿಯಾಗಿದ್ದು, ಬಿಗ್ ತ್ರೀ ನಿರೂಪಕ ಜಯಪ್ರಕಾಶ್ ಶೆಟ್ಟಿಯವರಿಗೆ ಅನಾಮಧೇಯ ತಂದು ಕೊಟ್ಟ ಕವರ್‌‌ವೊಂದು ಇದುವರೆಗೆ ಸುವರ್ಣ ನ್ಯೂಸ್ ಗಳಿಸಿದ ವಿಶ್ವಾಸಕ್ಕೆ ಮಗದೊಮ್ಮೆ ಸಾಕ್ಷಿ ಒದಗಿಸಿದೆ.

"

ಏನಿದೆ ಕವರ್‌ನಲ್ಲಿ...?
ಸರಗಳ್ಳನ್ನೊಬ್ಬ ಕದ್ದ ಬಂಗಾರದ ಮಾಂಗಲ್ಯ ಸೂತ್ರ! ಹೌದು. ನೀವು ನಂಬಲೇ ಬೇಕು ಇದನ್ನು. ಕಳೆದ ಸೆ.10ರಂದು ಈ ಕಳ್ಳತನ ನಡೆದಿದೆ. ಮನುಷ್ಯ ಪ್ರಾಮಾಣಿಕ. ಕೊರೋನಾ ವೈರಸ್ ಕಾಟದಿಂದ ಕೆಲಸ ಕಳೆದುಕೊಂಡು ಕಷ್ಟದಲ್ಲಿದ್ದಾನೆ. ಏನು ಮಾಡುವುದೆಂದು ತೋಚದೇ ಸರಗಳ್ಳತನಕ್ಕೆ ಮುಂದಾಗಿದ್ದಾನೆ. ಆತ್ಮಸಾಕ್ಷಿ ಒಪ್ಪಿಲ್ಲ, ತಾನು ಮಾಡಿದ್ದು ತಪ್ಪೆಂದು ಗೊತ್ತಾಗಿದೆ. ಕದ್ದ ಸರವನ್ನು ಹಿಂದಿರುಗಿಸಬೇಕಾಗಿದೆ. ಆದರೆ, ಹೇಗೆಂದು ಗೊತ್ತಾಗಿಲ್ಲ. ಪೊಲೀಸರಿಗೆ ಕೊಟ್ಟರೆ ಜೈಲಿಗೆ ಹೋಗುವ ಭಯ, ಆ ತಾಯಿಗೆ ನೇರವಾಗಿ ಕಳುಹಿಸಬಹುದಿತ್ತು. ಸೂಕ್ತ ವಿಳಾಸ ಗೊತ್ತಿಲ್ಲ. ಆದರೆ, ಮಾಡಿದ ತಪ್ಪಿಗೆ ಪಶ್ಚತ್ತಾಪ ಪಟ್ಟಿದ್ದಾನೆ. ಅದಕ್ಕೊಂದು ನೆಮ್ಮದಿ ದಕ್ಕಬೇಕೆಂಬ ಉದ್ದೇಶದಿಂದಲೇ ಮಾಧ್ಯಮದ ಮೂಲಕ ಈ ಕೆಲಸ ಮಾಡಲು ಮುಂದಾಗಿರಬಹುದು. ಅದಕ್ಕೆ ಸರ ಕದ್ದ ತಾಯಿಗೆ, ಪೊಲೀಸರಿಗೆ ಹಾಗೂ ಸುವರ್ಣ ನ್ಯೂಸ್‌ನ ಕರೆಂಟ್ ಅಫೇರ್ಸ್ ಎಡಿಟರ್, ಬಿಗ್ ತ್ರೀ ನಿರೂಪಕ ಜಯಪ್ರಕಾಶ್ ಶೆಟ್ಟಿಗೆ ಪತ್ರ ಬರೆದು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾನೆ. 

ಅಷ್ಟಕ್ಕೂ ಸುವರ್ಣ ನ್ಯೂಸನ್ನೇ ಆರಿಸಿಕೊಂಡಿದ್ದೇಕೆ? 
ಕರ್ನಾಟಕದಲ್ಲಿ ನಂಬರ್ 1 ಸುದ್ದಿ ವಾಹಿನಿಗಳಿವೆ. ಲಕ್ಷಾಂತರ ಓದುಗರು ಇರೋ ಕನ್ನಡ ಪತ್ರಿಕಾ ಕಚೇರಿಗಳಿವೆ. ಆದರೆ, ಕಳನ್ನೊಬ್ಬ ವಿಶ್ವಾಸದಿಂದ ಸುವರ್ಣ ನ್ಯೂಸ್‌ಗೇ ಏಕೆ ಚಿನ್ನದ ಸರ ತಂದು ಕೊಟ್ಟಿದ್ದಾನೆಂಬುವುದು ನಿಜಕ್ಕೂ ಯಾರಿಗಾದರೂ ಅಚ್ಚರಿ ಮೂಡಿಸುತ್ತೆ. ಆದರೆ, ಉತ್ತರ ಸಿಂಪಲ್. ಈಗಾಗಲೇ ಹಲವು ನೊಂದ ಹೃದಯಗಳಿಗೆ ನೆಮ್ಮದಿ ತಂದು ಕೊಡುವಂಥ ಅನೇಕ ಕಾರ್ಯಕ್ರಮಗಳಿಗೆ ನಮ್ಮ ಸುವರ್ಣ ನ್ಯೂಸ್ ವೇದಿಕೆಯಾಗಿದೆ. ಜನರ ಕಷ್ಟ ಕಾರ್ಪಣ್ಯಗಳಿಗೆ ಮನೆಯವರಂತೆ ಸ್ಪಂದಿಸಿದೆ. 

ಇಂಥ ಕಾರ್ಯಕ್ಕೆ ಉತ್ತಮ ಉದಾಹರಣೆ ಎಂದರೆ, ಕೊಡಗಿನ ಪ್ರವಾಹ ಹಾಗೂ ಉತ್ತರ ಕರ್ನಾಟಕದ ನೆರೆ. ಸುವರ್ಣ ನ್ಯೂಸ್ ನೀಡಿದ್ದ ಒಂದೇ ಒಂದು ಕರೆಗೆ ಲಕ್ಷಾಂತರ ಮಂದಿ ಸ್ಪಂದಿಸಿ, ನೆರವಿನ ಹಸ್ತ ಚಾಚಿದ್ದರು. ಎಲ್ಲಿಯೂ ದುಡ್ಡು ಪಡೆದು, ಸಂತ್ರಸ್ತರಿಗೆ ತಲುಪಿಸುವ ಕೆಲಸ ಮಾಡಲಿಲ್ಲ. ಬದಲಾಗಿ ಜನರಿಗೆ ಆ ಕ್ಷಣಕ್ಕೆ ಅಗತ್ಯವಾದ ವಸ್ತುಗಳನ್ನು ಪೂರೈಸಲು ಮುಂದಾಗಿತ್ತು. ಸುಖಾ ಸುಮ್ಮನೆ ವಸ್ತುಗಳನ್ನು ತರಿಸಿಕೊಂಡು ಹಾಳು ಮಾಡಲಿಲ್ಲ ಅಥವಾ ಯಾರ ಕೈ ಮೇಲೂ ಇಟ್ಟು, ಬೆಚ್ಚಗೆ ಕೂರಲಿಲ್ಲ.

ಬದಲಾಗಿ ಮಳೆಯಿಂದ ಜರ್ಜರಿತರಾದ ಜನರಿಗೆ ತಲುಪಿಸುವ ಕೆಲಸವನ್ನು ಖುದ್ದು ಸುವರ್ಣ ನ್ಯೂಸ್ ಸಿಬ್ಬಂದಿ ಮಾಡಿದರು. ಉದಾರಿಗಳು ನೀಡಿದ ಲಾರಿಗಳಲ್ಲಿ ಕಛೇರಿಗೆ ಜನರು ಪ್ರೀತಿ, ವಿಶ್ವಾಸದಿಂದ ಕಳುಹಿಸಿದ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಪ್ರವಾಹ ಹಾಗೂ ನೆರ ಪೀಡಿತ ಜನರಿಗೆ ತಲುಪಿಸಿ, ತನ್ನ ಕರ್ತವ್ಯ ಪ್ರಜ್ಞೆ ಮೆರೆದಿತ್ತು. ಜನರ ವಿಶ್ವಾಸ ಗಳಿಸುವಲ್ಲಿಯೂ ಯಶಸ್ವಿಯಾಗಿ, ಕರುನಾಡಲ್ಲಿ ಮನೆ ಮಾತಾಗಿತ್ತು. ಜನರ ನಂಬಿಕೆಯನ್ನು ಹೆಚ್ಚಿಸುವಂತೆ, ಜವಾಬ್ದಾರಿಯಿಂದ ನಡೆದು ಕೊಂಡಿದೆ. 

ಇನ್ನು ಬಿಗ್ ತ್ರೀ ಎಂಬ ಕಾರ್ಯಕ್ರಮದ ಮೂಲಕ ನೊಂದವರ ಅದೆಷ್ಟು ಜೀವನದಲ್ಲಿ ಬೆಳಕು ಮೂಡಿಸುವ ಕೆಲಸ ಮಾಡಿದ್ಯೋ? ಲೆಕ್ಕ ಇಟ್ಟವರು ಯಾರು? ಒಟ್ಟಿನಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ನೋವಿಗೆ ಸ್ಪಂದಿಸುವ, ಅದಕ್ಕೆ ಮಾಧ್ಯಮ ಸಂಸ್ಥೆಯೊಂದು ತೆಗೆದುಕೊಳ್ಳಬಹುದಾದ ಜವಾಬ್ದಾರಿ ತೆಗೆದುಕೊಳ್ಳಲು ನಮ್ಮ ಚಾನೆಲ್ ಯಾವತ್ತೂ ಹಿಂದು ಮುಂದು ನೋಡುವುದಿಲ್ಲ. ಇದೇ ಕಾರಣದಿಂದ ಸರಗಳ್ಳನಿಗೂ ಮಾಂಗಲ್ಯ ಸೂತ್ರ ಸೇರಬೇಕಾದವರಿಗೆ ಸೇರಿಯೇ ಸೇರುತ್ತೆ ಎಂಬ ವಿಶ್ವಾಸ ಮೂಡಿದ್ದು, ನಮ್ಮ ಚಾನೆಲ್‌ಗೇ ಕಳುಹಿಸಿದ್ದು. 

ಸರಗಳ್ಳ ಬರೆದ ಪತ್ರಗಳಲ್ಲಿ ಏನಿದೆ? 
ನಾನು ಜೀವನದಲ್ಲಿ ಯಾವತ್ತೂ ತಪ್ಪು ಮಾಡಿಲ್ಲ, ಒಮ್ಮೆ ಕೆಟ್ಟ ಕೆಲಸ ಮಾಡಿದ್ದೇನೆ. ತಪ್ಪು ತಿದ್ದಿಕೊಂಡು ಬದುಕಲು ಅವಕಾಶ ಕೊಡಿ. ನನ್ನ ತಾಯಿ, ಮಕ್ಕಳು ಬೀದಿ ಪಾಲಾಗುವಂತೆ ಮಾಡಬೇಡಿ. ತಪ್ಪಾಯ್ತು ಎಂದು ಪೊಲೀಸರಿಗೆ ಬರೆದ ಪತ್ರದಲ್ಲಿ ಹೇಳಿದ್ದಾನೆ ಸರ ಕದ್ದ ಸಂಭಾವಿತ ವ್ಯಕ್ತಿ. 

ಅಪರಾಧವೆಸಗಿದ್ದೇನೆ. ಆದರೆ, ಅದಕ್ಕೊಂದು ಕಾರಣವಿತ್ತು. ನಿಮಗೆ, ನಿಮ್ಮವರಿಗೆ ನೋಯಿಸಿದ್ದಕ್ಕೆ ಇರಲಿ ಕ್ಷಮೆ, ಎಂದಿ ಸರದ ಒಡತಿಯರಿಗೆ ಕ್ಷಮಾಪಣೆ ಕೇಳಿದ್ದಾನೆ. 

'ನಾನು ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ಬಂದ ಸಂಬಳದಲ್ಲಿ ಜೀವನ ನಡೆಯುತ್ತಿತ್ತು. ಆದರೆ, ಕೊರೊನಾ ಬಂದ ನಂತರ ನನ್ನ ಕೆಲಸ ಕಳೆದುಕೊಂಡೆ. ಎರಡ್ಮೂರು ತಿಂಗಳು ಹೇಗೋ ಇದ್ದ ಹಣದಲ್ಲಿ ನನ್ನ ತಾಯಿಯನ್ನು ನೋಡಿಕೊಂಡು, ನನ್ನ ಮೂವರು ಹೆಣ್ಣು ಮಕ್ಕಳನ್ನು ನೋಡಿಕೊಂಡು ಜೀವನ ಸಾಗಿಸುತ್ತಿದ್ದೆ. ಆದರೆ, 3 ತಿಂಗಳು ಕಳೆದ ನಂತರ ಕಷ್ಟದ ಮೇಲೆ ಕಷ್ಟ, ಒತ್ತಡದ ಮೇಲೆ ಒತ್ತಡ, ಬರೆಯ ಮೇಲೆ ಬರೆ. ಏನು ಮಾಡೋದೆಂದು ದಿಕ್ಕು ತೋಚದೇ ಕಳ್ಳತನ ಮಾಡಿದೆ. ಆದರೆ, ತಪ್ಪಿಗೆ ಪಶ್ಚತ್ತಾಪ ಪಡುತ್ತಿದ್ದೇನೆ...' ಎಂದು ಸುವರ್ಣ ನ್ಯೂಸ್‌ನ ಜಯಪ್ರಕಾಶ್ ಶೆಟ್ಟಿಯವರಿಗೆ ಪತ್ರ ಬರೆದು, ಕದ್ದಿರುವ ಎರಡು  ಸರಗಳನ್ನು ಜೊತೆಗೆ ಇಟ್ಟಿದ್ದಾನೆ. 

ಮಾಡಿದ್ದು ಅಪರಾಧವೇ. ಆದರೆ, ತಪ್ಪು ಅರಿವಾಗಿದೆ. ಇದೀಗ ಈ ಕಳ್ಳನಿಗೆ ಶಿಕ್ಷೆ ಕೊಡಬೇಕೋ, ಬೇಡವೋ? ವೀಕ್ಷಕರ ಮತಗಳೇ ನಿರ್ಧರಿಸಲಿ...

ನಿಮ್ಮ ಅಭಿಪ್ರಾಯ ಇಲ್ಲಿ ವ್ಯಕ್ತಪಡಿಸಿ...
 ಅಥವಾ 

ತಪ್ಪು ಮಾಡಿದ್ದು ಹೌದು, ಆದರೆ, ಮನುಷ್ಯ ಒಪ್ಪಿಕೊಂಡಿದ್ದಾನೆ. ಈ ವ್ಯಕ್ತಿಗೆ ಶಿಕ್ಷೆ ಆಗಬೇಕಾ? #ChainSnatch #Poll #suvarnaexclusive ಸುದ್ದಿಗಾಗಿ https://bit.ly/33UICnx ಕ್ಲಿಕ್ಕಿಸಿ..

Posted by Suvarna News 24X7 on Friday, September 18, 2020