Teenage love: 16ರ ಹುಡುಗಿ 20 ವರ್ಷದ ಹುಡುಗ, ಹದಿಹರೆಯ ಪ್ರೀತಿಯ ದುರಂತ ಕೊನೆ

ಪಿಯುಸಿ(PUC) ಓದುತ್ತಿದ್ದ ಹುಡುಗಿ ಹಾಗೂ ಆಗಷ್ಟೇ ಸಂಪಾದನೆ ಆರಂಭಿಸಿದ್ದ ಹುಡುಗನ ಮಧ್ಯೆ ಪ್ರೀತಿ(Love) ಶುರುವಾಗಿತ್ತು. 16 ವರ್ಷದ ಹುಡುಗಿ ಹಾಗೂ 20 ವರ್ಷದ ಹುಡುಗನ ಪ್ರೀತಿ ಯಾವಾಗ ಶುರುವಾಗಿತ್ತೋ ಗೊತ್ತಿಲ್ಲ. ಆದರೆ ಜೋಡಿಯ ಪ್ರೀತಿ ಮಾತ್ರ ಭಯಾನಕವಾಗಿ ಅಂತ್ಯವಾಗಿದೆ.

Share this Video
  • FB
  • Linkdin
  • Whatsapp

ಪಿಯುಸಿ(PUC) ಓದುತ್ತಿದ್ದ ಹುಡುಗಿ ಹಾಗೂ ಆಗಷ್ಟೇ ಸಂಪಾದನೆ ಆರಂಭಿಸಿದ್ದ ಹುಡುಗನ ಮಧ್ಯೆ ಪ್ರೀತಿ(Love) ಶುರುವಾಗಿತ್ತು. 16 ವರ್ಷದ ಹುಡುಗಿ ಹಾಗೂ 20 ವರ್ಷದ ಹುಡುಗನ ಪ್ರೀತಿ ಯಾವಾಗ ಶುರುವಾಗಿತ್ತೋ ಗೊತ್ತಿಲ್ಲ. ಆದರೆ ಜೋಡಿಯ ಪ್ರೀತಿ ಮಾತ್ರ ಭಯಾನಕವಾಗಿ ಅಂತ್ಯವಾಗಿದೆ. ಇನ್ನೂ ಪಿಯುಸಿಯಲ್ಲಿ ಕಲಿಯುತ್ತಿದ್ದ ಹುಡುಗಿ ಟಿಕ್‌ಟಾಕ್‌ನಲ್ಲಿ ಬ್ಯುಸಿಯಾಗಿದ್ದಳು. ಹಾಗೆಯೇ ಹುಡುಗನೂ ಅಷ್ಟೇ. ಮೊಬೈಲ್‌ನ ಎಪ್ಲಿಕೇಷನ್‌ಗಳನ್ನು ಬಳಸಿಕೊಂಡು ರೀಲ್ಸ್, ಟಿಕ್‌ಟಾಕ್ ಮಾಡುತ್ತಿರುತ್ತಾರೆ ಯುವ ಜನರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Suicide: ರೈಲಿಗೆ ತಲೆಕೊಟ್ಟು ವಿದ್ಯಾರ್ಥಿ ಆತ್ಮಹತ್ಯೆ

ಆಕೆಯೂ ಕಾಲೇಜು ಓದುತ್ತಾ ವಿಡಿಯೋಸ್‌ಗಳನ್ನು ಮಾಡುತ್ತಾ ಇದ್ದಳು. ರಾಜಾನುಕುಂಟೆಯ ಹನಿಯೂರು ಎನ್ನುವ ಊರು. ಬೆಂಗಳೂರಿನ ಸಮೀಪವೇ ಹಳ್ಳಿಯ ಸೊಗಡಿರೋ ಊರು ಅದು. ಮನೋಜ್ ಈ ಟ್ರಾಜಿಡಿ ಲವ್‌ಸ್ಟೋರಿಯ ದುರಂತ ನಾಯಕ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾ, ಊರಲ್ಲಿ ಒಳ್ಳೆಯ ಹುಡುಗ ಎಂದೇ ಅನಿಸಿಕೊಂಡಿದ್ದ. ಅಣ್ಣನ ಬರ್ತ್‌ಡೇಗೆ ಕೇಕ್‌ ಕಟ್ ಮಾಡಲು ಸಿದ್ಧತೆಗಳನ್ನು ಮಾಡಿದ್ದ. ಸಂಜೆ ಬಂದು ಮನೆಯ ರೂಮಿನೊಳಗೆ ತೆರಳಿದ್ದ. ಸ್ವಲ್ಪ ಹೊತ್ತಲ್ಲಿ ಕೋಣೆಯ ಒಳಗೆ ಬಂದು ಮನೆಯವರು ನೋಡಿದರೆ ಮನೋಜ್ ನೇಣಿಗೆ ಶರಣಾಗಿದ್ದ.

Related Video