ಸ್ವೆಟರ್ ಸ್ಕಾಮ್.. ಮಾನನಷ್ಟ ಮೊಕದ್ದಮೆ.. ಜಗ್ಗೇಶ್ VS ರಘು

* ನಟ ಕೋಮಲ್ ಮೇಲೆ ಸ್ವೆಟರ್ ಹಗರಣದ ಆರೋಪ
* ಮಕ್ಕಳಿಗೆ ವಿತರಿಸುವ ಸ್ವೇಟರ್ ವಿಚಾರದಲ್ಲಿ ಭ್ರಷ್ಟಾಚಾರವಾಗಿದೆ
* ರೀಲ್ ನಲ್ಲಿ ಹೀರೋ ರಿಯಲ್ ನಲ್ಲಿ ವಿಲನ್ ಆಗಿಬಿಟ್ಟರಾ?
*ಆರೋಪ ಮಾಡಿದ್ದ ರಘು ವಿರುದ್ಧ ನವರಸನಾಯಕ ಜಗ್ಗೇಶ್ ಸಮರ

Share this Video
  • FB
  • Linkdin
  • Whatsapp

ಬೆಂಗಳೂರು( ಆ. 26) ಶಾಲಾ ಮಕ್ಕಳಿಗೆ ಸ್ವೆಟರ್ ಹಂಚಿಕೆ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ನಟ ಕೋಮಲ್ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ದಲಿತ ಸಂಘರ್ಷ ಸಮಿತಿ ರಘು ಗಂಭೀರ ಆರೋಪ ಮಾಡಿದ್ದಾರೆ.

ಕೋಮಲ್ ಮಸ್ತ್ ಕಮಾಲ್.. ಸ್ವೆಟರ್ ಹಗರಣ ಒಂದೆರಡು ರೂಪಾಯಿದ್ದಲ್ಲ!

ಆದರೆ ಇದಕ್ಕೆ ತಿರುಗೇಟು ನೀಡಿರುವ ನವರಸ ನಾಯಕ ಜಗ್ಗೇಶ್ ಟ್ವಿಟರ್ ನಲ್ಲಿ ಅಬ್ಬರಿಸಿದ್ದಾರೆ. ಮಾನನಷ್ಟ ಮೊಕದ್ದಮೆಯ ಎಚ್ಚರಿಕೆಯನ್ನು ನೀಡಿದ್ದಾರೆ. ಅಷ್ಟಕ್ಕೂ ಸ್ವೆಟರ್ ಪ್ರಕರಣದಲ್ಲಿ ಕೋಮಲ್ ಕುಮಾರ್ ಹೆಸರು ಬರಲು ಕಾರಣವೇನು? ನಾಯಕ ನಟ ದೋಖಾ ಮಾಡಿದ್ರಾ? ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮವಾಗಿದೆಯಾ? ಸ್ವೆಟರ್ ಹಗರಣದ ಮುಂದುವರಿದ ಭಾಗ ಇಲ್ಲಿದೆ.

Related Video