ಗಂಡ-ಹೆಂಡತಿ & ಬಾಯ್​​ಫ್ರೆಂಡ್​​: ಗಂಡನನ್ನ ಕೊಲ್ಲಲು ಹೆಂಡತಿ ಸ್ಕೆಚ್, ಕತ್ತು ಹಿಸುಕಲು ಬಂದ ಗೆಳೆಯ!​

ಸಿದ್ದಪ್ಪ ಈಸ್​​ ಡೆಡ್. ಭೀರಪ್ಪನ ಕತ್ತು ಹಿಸುಕಿ ಎಸ್ಕೇಪ್​ ಆಗಿದ್ದ ಸಿದ್ದಪ್ಪ ನನ್ನದೇನೂ ತಪ್ಪಿಲ್ಲ ಅಂತ ವಿಡಿಯೋ ಮಾಡಿದ್ದ. ಆದ್ರೆ ಸೀನ್​ ಕಟ್​ ಮಾಡಿದ್ರೆ ಇವತ್ತು ಆತ ಹೆಣವಾಗಿ ಸಿಕ್ಕಿದ್ದಾನೆ.. ಆತ ಆತ್ಮಹತ್ಯೆ ಮಾಡಿಕೊಂಡನೋ ಅಥವಾ ಮರ್ಡರ್​ ಮಾಡಲಾಯ್ತಾ..?

Share this Video
  • FB
  • Linkdin
  • Whatsapp

ನಾವು ಮೊನ್ನೆಯಷ್ಟೇ ಒಂದು ಕಥೆ ಹೇಳಿದ್ವಿ... ಪ್ರಿಯಕರನ ಜೊತೆ ಸೇರಿ ಹೆಂಡತಿಯೊಬ್ಬಳು, ಗಂಡನನ್ನೇ ಮುಗಿಸೋದಕ್ಕೆ ಹೊರಟಿದ್ದಳು ಅಂತ. ಆದ್ರೆ ಆ ಗಂಡನ ಆಯಸ್ಸು ಇನ್ನೂ ಮುಗಿದಿರಲಿಲ್ಲ. ಪಕ್ಕದ ಮನೆಯವರಿಂದ ಅವನ ಪ್ರಾಣ ಉಳಿಯಿತು. ಆವತ್ತು ಹೆಂಡತಿ ಅರೆಸ್ಟ್​ ಆದ್ರೆ ಆಕೆಯ ಪ್ರೀಯಕರ ಅಪ್​ಸ್ಕಾಂಡಿಂಗ್​​ ಆಗಿದ್ದ. ಆದ್ರೆ ನಿಗೂಢ ಸ್ಥಳದಲ್ಲಿ ಕೂತು ಒಂದು ವಿಡಿಯೋ ಮಾಡಿದ್ದ.. ಆದ್ರೆ ಇವತ್ತು ಆ ಲವ್ವರ್​ ಸಿಕ್ಕಿದ್ದಾನೆ. ಬಟ್​ ಹೆಣವಾಗಿ.. ತನ್ನ ಗೆಳತಿ ಜೊತೆ ಸೇರಿ ಆಕೆಯ ಗಂಡನನ್ನ ಮುಗಿಸಲು ಹೊರಟವನು ಇವತ್ತು ತಾನೇ ಹೆಣವಾಗಿದ್ದಾನೆ.. ಅಷ್ಟಕ್ಕೂ ಕೊಲ್ಲಲು ಹೋದವನೇ ಹೆಣವಾಗಿದ್ದೇಕೆ..?

ಅಷ್ಟಕ್ಕೂ ಏನಿದು ಫ್ಯಾಮಿಲಿ ಸ್ಟೋರಿ ಅನ್ನೋದನ್ನ ತಿಳಿದುಕೊಳ್ಳೋದೇ ಇವತ್ತಿನ ಎಫ್​​ಐಆರ್​. ಸಿದ್ದಪ್ಪ ಈಸ್​​ ಡೆಡ್. ಭೀರಪ್ಪನ ಕತ್ತು ಹಿಸುಕಿ ಎಸ್ಕೇಪ್​ ಆಗಿದ್ದ ಸಿದ್ದಪ್ಪ ನನ್ನದೇನೂ ತಪ್ಪಿಲ್ಲ ಅಂತ ವಿಡಿಯೋ ಮಾಡಿದ್ದ. ಆದ್ರೆ ಸೀನ್​ ಕಟ್​ ಮಾಡಿದ್ರೆ ಇವತ್ತು ಆತ ಹೆಣವಾಗಿ ಸಿಕ್ಕಿದ್ದಾನೆ.. ಆತ ಆತ್ಮಹತ್ಯೆ ಮಾಡಿಕೊಂಡನೋ ಅಥವಾ ಮರ್ಡರ್​ ಮಾಡಲಾಯ್ತಾ..? ಅಷ್ಟಕ್ಕೂ ಈತನಿಗೂ ಆ ಸುನಂದಳಿಗೂ ಏನ್​ ಸಂಬಂದ.. ಇಬ್ಬರೂ ಸೇರಿ ಭೀರಪ್ಪನನ್ನ ಕೊಲ್ಲೋದಕ್ಕೆ ಪ್ಲಾನ್​ ಮಾಡಿದ್ದೇಕೆ..? ಭೀರಪ್ಪನ ಕತ್ತು ಹಿಸುಕುವಾಗ ಸಿದ್ದಪ್ಪ ಮತ್ತು ಸುನಂದ ಒಟ್ಟಿಗೇ ಇದ್ರು.

ಆದರೆ ಮರು ದಿನ ಪೊಲೀಸ್​ ಕಂಪ್ಲೆಂಟ್​​ ಆಗ್ತಿದ್ದಂತೆ ಸಿದ್ದಪ್ಪ. ಎಲ್ಲಾ ಸುನಂದಾಳದ್ದೇ ಕೆಲಸ ಅಂದಿದ್ದ. ಅಷ್ಟೇ ಅಲ್ಲ ಆತನ ಲವ್​ ಸ್ಟೋರಿ ಶುರುವಾಗಿದ್ರಿಂದ ಹಿಡಿದು ಸುನಂದ ಮಾಡಿದ ಮಸಲತ್ತಿನವರೆಗೆ ಎಲ್ಲವನ್ನೂ ವಿಡಿಯೋ ಮಾಡಿ ವೈರಲ್​ ಮಾಡಿದ್ದ.. ಆದ್ರೆ ಆ ವಿಡಿಯೋ ಮಾಡಿದ ಕೆಲವೇ ನಿಮಿಷಗಳಲ್ಲಿ ಸಿದ್ದಪ್ಪ ನೇಣಿಗೆ ಶರಣಾಗಿಬಿಟ್ಟ. ಪರಸ್ತ್ರೀ ಮೋಹಕ್ಕೆ ಬಿದ್ದ ಸಿದ್ದಪ್ಪ ಕೊಲೆ ಮಾಡಲು ಹೋಗಿ ಇವತ್ತು ಆತನೇ ಹೆಣವಾಗಿ ಹೋಗಿದ್ದಾನೆ. ಇನ್ನೂ ಸುನಂದ ಗಂಡನನ್ನ ಮುಗಿಸಲು ಹೋಗಿ ಜೈಲು ಸೇರಿದ್ದಾಳೆ. ಇತ್ತ ಸಾವಿನ ಮನೆಯ ಕದ ತಟ್ಟಿ ಬಂದ ಭೀರಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದಕ್ಕೆ ಆಲ್ವಾ ಹೇಳೋದು ಮಾಡಬಾರದು ಮಾಡಿದ್ರೆ ಆಗಬಾರದು ಆಗುತ್ತೆ ಅಂತ. ಇದು ಇವತ್ತಿನ ಎಫ್​ಐಆರ್​.

Related Video