Asianet Suvarna News Asianet Suvarna News

ಇಬ್ಬರು ಹೆಂಡ್ತಿಯರು ಮನೆಯಲ್ಲಿದ್ರೂ ಮೂರನೆಯವಳಿಗೆ ಆಸೆ ಪಟ್ಟ, ಯುವ ಕೈ ನಾಯಕನ ಕಥೆ

ಇಬ್ಬರು ಹೆಂಡತಿಯರು ಮನೆಯಲ್ಲಿದ್ರೂ ಮೂರನೆಯವಳಿಗೆ ಆಸೇ ಪಟ್ಟು ತನ್ನಷ್ಟಕ್ಕೆ ತಾನೇ ಗುಂಡಿ ತೋಡಿಕೊಂಡಿದ್ದ. ಹೀಗೆ ಎರಡು ಮದುವೆಯಾಗಿ ಪರಸ್ತ್ರಿಯ ಮೇಲೆ ಕಣ್ಣು ಹಾಕಿ ಅದೇ ಕಾರಣಕ್ಕೆ ಮಣ್ಣಾಗಿ ಹೋದ ಯೂತ್ ಕಾಂಗ್ರೆಸ್ ಕಾರ್ಯದರ್ಶಿಯ ಕಥೆಯೇ ಇವತ್ತಿನ ಎಫ್.ಐ.ಆರ್.............. 

ಕೋಲಾರ, (ಮೇ.31): ಅವನು ಜಿಲ್ಲಾ ಯೂತ್ ಕಾಂಗ್ರೆಸ್ನಲ್ಲಿ ಕಾರ್ಯದರ್ಶಿಗಿ, ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದವನು, ಆದ್ರೆ ಈ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತ ಅವತ್ತು ನಡುರಸ್ತೆಯಲ್ಲಿ ಬರ್ಬರವಾಗಿ ಕೊಲೆಯಾಗಿಹೋದ. ಆದ್ರೆ ಅದು ರಾಜಕೀಯ ವೈಶಮ್ಯದ ಕೊಲೆಯಾಗಿರೋದಿಲ್ಲ. ಬದಲಿಗೆ ಆತನೇ ಮಾಡಿಕೊಂಡಿದ್ದ ಒಂದು ತಪ್ಪು ಅವನ ಅಂತ್ಯಕ್ಕೆ ಕಾರಣವಾಗಿದೆ.

ಪ್ರೀತಿಸಿ ಕೈಕೊಟ್ಟ ಹುಡುಗಿ, ಪ್ರೇಯಸಿಗೆ ಖರ್ಚು ಮಾಡಿದ ಲೆಕ್ಕ ಬರೆದಿಟ್ಟು ಪ್ರಿಯಕರ ಆತ್ಮಹತ್ಯೆ

 ಅವನಿಗಿದ್ದ ಅದೊಂದು ಶೋಕಿ ಆತನನ್ನು ಅರ್ಧರಾತ್ರಿಯಲ್ಲಿ,ಮದ್ಯ ರೋಡಲ್ಲಿ ಬೀದಿಯ ಹೆಣವಾಗಿ ಹೋಗುವಂತೆ ಮಾಡಿತ್ತು, ಇಬ್ಬರು ಹೆಂಡತಿಯರು ಮನೆಯಲ್ಲಿದ್ರೂ ಮೂರನೆಯವಳಿಗೆ ಆಸೇ ಪಟ್ಟು ತನ್ನಷ್ಟಕ್ಕೆ ತಾನೇ ಗುಂಡಿ ತೋಡಿಕೊಂಡಿದ್ದ. ಹೀಗೆ ಎರಡು ಮದುವೆಯಾಗಿ ಪರಸ್ತ್ರಿಯ ಮೇಲೆ ಕಣ್ಣು ಹಾಕಿ ಅದೇ ಕಾರಣಕ್ಕೆ ಮಣ್ಣಾಗಿ ಹೋದ ಯೂತ್ ಕಾಂಗ್ರೆಸ್ ಕಾರ್ಯದರ್ಶಿ.  ಹಾಗಾದ್ರೆ ಚರಣ್ ತಾಯಿ ಹೇಳುವಂತೆ ಚರಣ್ನನ್ನ ಮುಗಿಸಿದ್ದ ಆತನನ್ನ ಮನೆಯಿಂದ ಕರೆದುಕೊಂಡು ಹೋದ ಸ್ನೇಹಿತರ..? ತನಿಖೆ ಶುರು ಮಾಡಿದ ಪೊಲೀಸರು ಹೇಳಿದ್ದೇನು..? ಅಸಲಿಗೆ ಚರಣ್ನನ್ನ ಕೊಲ್ಲುವ ಕಾರಣವಾದ್ರೂ ಏನಿತ್ತು..?

Video Top Stories