
ಗಂಡ ಕೆಲಸಕ್ಕೆ ಹೋದಾಗ ಗೆಳೆಯ ಮನೆಗೆ ಬರ್ತಿದ್ದ: ರೊಚ್ಚಿಗೆದ್ದ ಗಂಡ ಇಬ್ಬರನ್ನೂ ಮುಗಿಸೋ ಪ್ಲಾನ್ ಮಾಡಿದ್ದ!
ಅವರಿಬ್ಬರು ಮದುವೆಯಾಗಿ ಎರಡುವರೆ ವರ್ಷವಾಗಿದೆ ಅಷ್ಟೇ.. ಒಂದು ಮುದ್ದಾದ ಹೆಣ್ಣುಮಗು ಕೂಡ ಇದೆ.. ಆದ್ರೆ ವರ್ಷದ ಹಿಂದೆ ಗಂಡ ಟಾರ್ಚರ್ ಕೊಡ್ತಾನೆ ಅಂತ ಹೆಂಡತಿ ಗಂಡ ಮತ್ತು ಮಗುವನ್ನ ಬಿಟ್ಟು ತವರು ಮನೆ ಸೇರಿದ್ಲು.
ಅವರಿಬ್ಬರು ಮದುವೆಯಾಗಿ ಎರಡುವರೆ ವರ್ಷವಾಗಿದೆ ಅಷ್ಟೇ.. ಒಂದು ಮುದ್ದಾದ ಹೆಣ್ಣುಮಗು ಕೂಡ ಇದೆ.. ಆದ್ರೆ ವರ್ಷದ ಹಿಂದೆ ಗಂಡ ಟಾರ್ಚರ್ ಕೊಡ್ತಾನೆ ಅಂತ ಹೆಂಡತಿ ಗಂಡ ಮತ್ತು ಮಗುವನ್ನ ಬಿಟ್ಟು ತವರು ಮನೆ ಸೇರಿದ್ಲು. ಗಂಡ ಕೆಲಸವನ್ನೂ ಮಾಡಿಕೊಂಡು ಮಗುವನ್ನೂ ನೋಡಿಕೊಳ್ತಿದ್ದ.. ಆದ್ರೆ ಮೊನ್ನೆ ಇದ್ದಕ್ಕಿದ್ದಂತೆ ಆತ ಮಚ್ಚು ಹಿಡಿದು ಹೆಂಡತಿ ಮನೆ ಎದುರು ಬಂದು ನಿಂತಿದ್ದ.. ಇವತ್ತು ಏನೇ ಆಗಲಿ ಹೆಂಡತಿಯನ್ನ ಕತ್ತರಿಸಬೇಕು ಅಂತ ಅಂದುಕೊಂಡಿದ್ದ.. ಆದ್ರೆ ಅಷ್ಟರಲ್ಲೇ ಪೊಲೀಸರು ಸ್ಪಾಟ್ಗೆ ಬಂದು ಆತನನ್ನ ಅರೆಸ್ಟ್ ಮಾಡಿದ್ರು.. ಬಟ್ ಆತ ಹೆಂಡತಿಯನ್ನ ಮುಗಿಸಲು ಬರುವ ಮೊದಲೇ ಒಂದು ಹೆಣ ಹಾಕಿ ಬಂದಿದ್ದ..
ಅಷ್ಟಕ್ಕೂ ಆತ ಕೊಂದಿದ್ದು ಯಾರನ್ನ..? ಹೆಂಡತಿಯನ್ನೇ ಮುಗಿಸೋ ನಿರ್ಧಾರ ಮಾಡಿದ್ದೇಕೆ..? ಒಂದು ಡೆಡ್ಲಿ ಮರ್ಡರ್ ಹಿಂದಿನ ಕಹನಿಯೇ ಇವತ್ತಿನ ಎಫ್ಐಆರ್. ಅಷ್ಟೇ ಅಲ್ಲಿಗೆ ಮಹಾಂತೇಶನ ಕಥೆ ಮುಗಿಯುತ್ತೆ... ಆದ್ರೆ ಇಷ್ಟಕ್ಕೇ ಬಸವರಾಜನ ದ್ವೇಷದ ಕಿಚ್ಚು ಹಾರೋದಿಲ್ಲ.. ಆತನ ತಲೆಗೆ ಮತ್ತೊಂದು ಮರ್ಡರ್ ಮಾಡೊ ಯೋಚನೆ ಬಂದುಬಿಡುತ್ತೆ. ಅದು ಯಾರದ್ದು ಗೊತ್ತಾ..? ತಾನು ತಾಳಿ ಕಟ್ಟಿದ ಹೆಂಡತಿಯದ್ದು.. ಹಾಗಾದ್ರೆ ಅವಳ ಕಥೆಯನ್ನೂ ಬಸವರಾಜ ಮುಗಿಸಿಬಿಟ್ಟನಾ..? ಮಹಾಂತೇಶ ಮರ್ಡರ್ ಆದ ಮೇಲೆ ಅಲ್ಲಿ ಏನೇನಾಯ್ತು..? ಪೊಲೀಸರ ತನಿಖೆ ಹೇಗಿತ್ತು..? ಊರಿನವರ ಮಾತು ಕೇಳಿಕೊಂಡು ಮಹಾಂತಶನ ವಿರುದ್ಧ ಹಾಕಿದ್ದ ಕೇಸನ್ನ ಬಸವರಾಜ ವಾಪಸ್ ತಗೆದುಕೊಂಡಿದ್ದ..
ಆದ್ರೆ ನಂತರ ಹೆಂಡತಿ ದೂರವಾಗ್ತಾಳೆ.. ಮತ್ತೆ ಮಹಾಂತೇಶನ ಸಹವಾಸ ಮಾಡ್ತಾಳೆ.. ಇದು ಬಸವರಾಜನ ಪಿತ್ತ ನೆತ್ತಿಗೇರುತ್ತೆ.. ಮಹಾಂತೇಶನಿಗೆ ಮುಹೂರ್ತ ಇಟ್ಟೇಬಿಡ್ತಾನೆ.. ಪಕ್ಕಾ ಪ್ಲಾನ್ ಮಾಡಿ ಅವನನ್ನ ಎತ್ತೇಬಿಡ್ತಾನೆ.. ಆದರೆ ಬಳಿಕ ಹೆಂಡತಿಯನ್ನೂ ಮುಗಿಸಿಬಿಡೋ ತೀರ್ಮಾನ ಮಾಡಿ ಆಕೆಯ ಮನೆ ಬಳಿ ಹೋಗ್ತಾನೆ.. ಆದ್ರೆ ಇನ್ನೇನು ಹೆಂಡತಿಯ ಕಥೆ ಮುಗಿಸಬೇಕು ಅಷ್ಟರಲ್ಲೇ ಪೊಲೀಸರು ಅವನ ಎದುರು ಹೋಗಿ ನಿಲ್ತಾರೆ. ಮಹಾಂತೇಶ ತಪ್ಪು ಮಾಡಿರಬಹುದು, ಆದರೆ ಕೊಲೆ ಮಾಡುವ ಹಂತಕ್ಕೆ ಬಸವರಾಜ್ ಹೋಗಬಾರದಿತ್ತು.. ಅನೈತಿಕ ಸಂಬಂಧದ ಜ್ವಾಲೆ ಇದೀಗ ಎರಡು ಕುಟುಂಬಗಳನ್ನೇ ಬಲಿ ಪಡೆದಿವೆ.