ಮಿಡ್‌ನೈಟ್ ಆಪರೇಷನ್: ಬೆಂಗಳೂರಿನ ಈ ಗ್ಯಾಂಗ್ ಕೈಗೆ ಸಿಕ್ರೆ ನಿಮ್ಮ ಕಥೆ ಅಷ್ಟೇ!

ಜನರನ್ನು ಬುಟ್ಟಿಗೆ ಹಾಕಿಕೊಂಡು ಮೋಸ ಮಾಡುವ ದೊಡ್ಡ ಜಾಲ ಸಿಲಿಕಾನ್ ಸಿಟಿ ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ ಅವ್ಯಾಹತವಾಗಿ ಕಾರ್ಯನಿರ್ವಹಿಸುತ್ತಿದೆ.
 

First Published Apr 9, 2022, 4:22 PM IST | Last Updated Apr 9, 2022, 4:22 PM IST

ಬೆಂಗಳೂರು (ಏ.9): ಇದು ಕರ್ನಾಟಕದ (Karnataka) ಮೋಸ್ಟ್ ಡೇಂಜರಸ್ ಟೀಮ್. ನೀವು ಯಾರೂ ಊಹೆ ಮಾಡಿಕೊಳ್ಳಲು ಸಾಧ್ಯವಾಗದ ನಟೋರಿಯಸ್ ತಂಡ ಇದು. ಅಂಥ ತಂಡವೊಂದು ನಮ್ಮ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಆಕ್ಟೀವ್ ಆಗಿದೆ. ಈ ತಂಡದ ವಿರುದ್ಧ ಎಷ್ಟೇ ಜನ, ಏನೇ ಹೇಳಿದ್ರೂ ಅವರಿಗೆ ಕರುಣೆ ಮಾನವೀಯತೆ ಅನ್ನೋದೇ ಇಲ್ಲ. ಅಂಥದ್ದೊಂದು ತಂಡದ ವಿರುದ್ಧ ಕವರ್ ಸ್ಟೋರಿ (Cover Story) ತಂಡದ ರಹಸ್ಯ ಕಾರ್ಯಾಚರಣೆ.

ಬೆಂಗೂರಿನ ಹೃದಯ ಎನಿಸಿಕೊಂಡಿರುವ ಮೆಜೆಸ್ಟಿಕ್ ನಲ್ಲಿ (Mejestic ) ಆಕ್ಟೀವ್ ಆಗಿರುವ ಈ ತಂಡದ ಹಿನ್ನಲೆ ಏನು? ಬೆಂಗಳೂರಿಗೆ ಬರುವ ಹಲವರು ಈ ತಂಡವನ್ನು ಗಮನಿಸಿಯೇ ಇರುತ್ತಾರೆ. ಕತ್ತಲಾಗುತ್ತಿದ್ದಂತೆ ಮೇಕಪ್ ಮಾಡಿಕೊಂಡು ತಮ್ಮ ಕೆಲಸಕ್ಕೆ ಇಳಿಯುತ್ತಾರೆ. ಇದರಲ್ಲೇ ಇನ್ನೂ ಕೆಲವರೀಗ ದರೋಡೆ (Robbery) ಮಾಡುವ ಪ್ರವೃತ್ತಿಗೂ ಇಳಿದಿದ್ದಾರೆ. ಕೆಲವರು ತುತ್ತು ಊಟಕ್ಕೆ ಲೈಂಗಿಕ ವೃತ್ತಿ ಮಾಡಿಕೊಂಡು ಜೀವನ ಸಾಗಿಸುತ್ತಿರುವವರು. ಆದರೆ, ಇತ್ತೀಚಿನ ಬೆಳವಣಿಗೆಯಲ್ಲಿ ಹೆಚ್ಚಿನವರು ಲೈಂಗಿಕ ಕಾರ್ಯಕರ್ತೆಯರ ವೇಷದಲ್ಲಿ ದರೋಡೆಗೆ ಇಳಿಯುವ ಅಭ್ಯಾಸ ಆರಂಭಿಸಿದ್ದಾರೆ.

Cover Story: ಹಿಜಾಬ್‌ನಿಂದ ಶುರುವಾದ ವಿವಾದ ವ್ಯಾಪಾರಕ್ಕೆ ಶಿಫ್ಟ್, ಮುಂದುವರೆದ ವ್ಯಾಪಾರ ಬಹಿಷ್ಕಾರ

ಮೆಜೆಸ್ಟಿಕ್ ಸುತ್ತಮುತ್ತಲಿನ ಕೆಲ ಲಾಡ್ಜ್ ಗಳೂ ಕೂಡ ಇದೇ ದಂಧೆಯಲ್ಲಿ ತೊಡಗಿವೆ. ಗ್ರಾಹಕರನ್ನು ಕರೆತಂದ ಬಳಿಕ ಇಂಥದ್ದೇ ರೂಮ್ ಕೊಡಬೇಕು ಅನ್ನೋದು ಫಿಕ್ಸ್ ಆಗಿರುತ್ತದೆ. ಅದಕ್ಕೆ ಯಾವ ದಾಖಲೆಗಳನ್ನೂ ಕೂಡ ಕೇಳಲ್ಲ. ಜನರ ಕಣ್ತೆರಸುವ ಸುದ್ದಿಯ ಫುಲ್ ಡೀಟೇಲ್.