Cover Story: ಹಿಜಾಬ್‌ನಿಂದ ಶುರುವಾದ ವಿವಾದ ವ್ಯಾಪಾರಕ್ಕೆ ಶಿಫ್ಟ್, ಮುಂದುವರೆದ ವ್ಯಾಪಾರ ಬಹಿಷ್ಕಾರ

ದೇವಸ್ಥಾನದ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕುತ್ತಿರುವ ಪ್ರಸಂಗ ಕರಾವಳಿ, ಮಲೆನಾಡು, ಹಳೇ ಮೈಸೂರು ಜಿಲ್ಲೆಗಳ ಬಳಿಕ ಇದೀಗ ಉತ್ತರ ಕರ್ನಾಟಕಕ್ಕೂ ಹಬ್ಬಿದೆ. ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳಿಗೂ ವ್ಯಾಪಿಸತೊಡಗಿದೆ. 

Share this Video
  • FB
  • Linkdin
  • Whatsapp

ದೇವಸ್ಥಾನದ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕುತ್ತಿರುವ ಪ್ರಸಂಗ ಕರಾವಳಿ, ಮಲೆನಾಡು, ಹಳೇ ಮೈಸೂರು ಜಿಲ್ಲೆಗಳ ಬಳಿಕ ಇದೀಗ ಉತ್ತರ ಕರ್ನಾಟಕಕ್ಕೂ ಹಬ್ಬಿದೆ. ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳಿಗೂ ವ್ಯಾಪಿಸತೊಡಗಿದೆ. ಕರಾವಳಿಯ ಜಾತ್ರೆಗಳಲ್ಲಿ ಮುಸ್ಲಿಂಮರಿಗೆ ವ್ಯಾಪಾರಕ್ಕೆ ಅವಕಾಶ ಕೊಡದೇ ಇರುವುದು ವಿವಾದವಾಗಿತ್ತು. ಶಿವಮೊಗ್ಗ ತಾಲೂಕಿನ ಮಲವಗೊಪ್ಪ ಗ್ರಾಮದಲ್ಲಿ ಮಾ.25ರಂದು ನಡೆದ ಚನ್ನಬಸವೇಶ್ವರಸ್ವಾಮಿ ರಥೋತ್ಸವದಲ್ಲೂ ಹಾಗೂ ಮಾರಿಕಾಂಬಾ ರಥೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳು ಮಳಿಗೆ ಹಾಕುವುದಕ್ಕೆ ವಿರೋಧ ವ್ಯಕ್ತವಾಗಿದೆ. 

 ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಉಡುಪಿ ಜಿಲ್ಲೆಯ ಕೊಲ್ಲೂರು ರಥೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡದಂತೆ ವಿಶ್ವ ಹಿಂದೂ ಪರಿಷತ್‌ ಮನವಿ ಮಾಡಿತು. ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಭಾಗವಹಿಸದಂತೆ ಕೊಲ್ಲೂರು ಗ್ರಾಮ ಪಂಚಾಯ್ತಿ ಮುಸ್ಲಿಂರನ್ನು ಮನವೊಲಿಸಿತ್ತು. ಆದ್ದರಿಂದ ಮುಸ್ಲಿಂ ವ್ಯಾಪಾರಿಗಳ್ಯಾರೂ ಭಾಗವಹಿಸಿರಲಿಲ್ಲ. ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ತೀರ್ಪು ವಿರೋಧಿಸಿ ಮುಸ್ಲಿಂ ಸಂಘಟನೆಗಳು ಪ್ರತಿಭಟಿಸಿದ ಹಿನ್ನಲೆಯಲ್ಲಿ, ಈ ರೀತಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಧಿಸಲಾಗುತ್ತಿದೆ. ಈ ಬಗ್ಗೆ ಕವರ್ ಸ್ಟೋರಿ ಕಾರ್ಯಾಚರಣೆಯನ್ನೂ ನಡೆಸಿದೆ. 

Related Video