Asianet Suvarna News Asianet Suvarna News

ಡಾನ್‌ ಆಗಿ ಮೆರೆದ್ರೂ, ವಿಧಿಯಾಟಕ್ಕೆ ಶರಣಾದ ಬೆಂಗಳೂರು ಭೂಗತ ಲೋಕದ ಚಕ್ರೆ!

ಕ್ರಿಸ್ಟೋಫರ್ ಚಕ್ರವರ್ತಿ ಅಲಿಯಾಸ್ ಚಕ್ರೆ. ಬೆಂಗಳೂರು ಭೂಗತ ಲೋಕದಲ್ಲಾದ ಬದಲಾವಣೆಗಳನ್ನ ಕಣ್ಣಾರೆ ಕಂಡು ಇಲ್ಲಿವರೆಗೆ ಬದುಕಿದ್ದ ಕೆಲವೇ ಕೆಲವರಲ್ಲಿ ಒಬ್ಬ. ರಾಮಚಂದ್ರಪುರ ಅನ್ನೋ ಸಾಮಾನ್ಯ ಏರಿಯಾದಲ್ಲಿ ಹುಟ್ಟಿ ಬೆಳೆದ ಚಕ್ರೆಯ ಬದುಕಿನಲ್ಲೆದ್ದ ಬಿರುಗಾಳಿ ಆತನನ್ನ ನೇರವಾಗಿ ಸೆಂಟ್ರಲ್ ಜೈಲಿನ ಬ್ಯಾರೆಕಿನೊಳಗೆ ತಂದು ಕೆಡವಿತ್ತು.

ಬೆಂಗಳೂರು (ಸೆ.27): ಬೆಂಗಳೂರು ಭೂಗತ ಲೋಕ ಅಂದಾಕ್ಷಣ ನಮ್ಮ ನೆನಪಿಗೆ ಬರೋದು ಡಾನ್ ಜೈರಾಜ್, ಕೊತ್ವಾಲ್ ರಾಮಚಂದ್ರ, ಡೆಡ್ಲಿ ಸೋಮ ಹೀಗೆ ಹತ್ತಾರು ಹೆಸರುಗಳು. ಇವರೆಲ್ಲಾ ತಮ್ಮದೇ ಸ್ಟೈಲ್ನಲ್ಲಿ ಬೆಂಗಳೂರು ಅಂಡರ್ವರ್ಲ್ಡ್ ಆಳಿ ಅಷ್ಟೇ ಬೇಗ ಮರೆಯಾಗಿ ಹೋದವರು. ಆದರೆ, ಇವರಂತೆಯೇ ಬೆಂಗಳೂರು ಪಾತಕ ಲೋಕದಲ್ಲಿ ತನ್ನದೇ ಹವಾ ಕ್ರಿಯೇಟ್ ಮಾಡಿಕೊಂಡು  ಚಕ್ರವರ್ತಿಯಂತೆ ಮೆರೆಯಲು ಹೋರಟ್ಟಿದ್ದ ಅವನೊಬ್ಬ ಹೇಗೋ ಜೀವ ಉಳಿಸಿಕೊಂಡು ಇವತ್ತಿನವರೆಗೆ ಬದುಕಿದ್ದ. ಆದ್ರೆ ಇವತ್ತು ವಿಧಿಯಾಟದ ಮುಂದೆ ಶರಣಾಗಿಬಿಟ್ಟ. ಆತನೇ ಕ್ರಿಸ್ಟೋಫರ್ ಚಕ್ರವರ್ತಿ ಅಲಿಯಾಸ್ ಚಕ್ರೆ. ಈ ಚಕ್ರೆ ಸದ್ಯ ಪೊಲಿಟಿಷನ್... ಆದ್ರೆ ಅದಕ್ಕೂ ಮೊದಲು ಭೂಗತ ಲೋಕದ ಚಕ್ರವರ್ತಿ. 

ಸದ್ಯ ಕ್ರಿಸ್ಟೋಫರ್ ಚಕ್ರವರ್ತಿಯು ತನ್ನವರಿಗೆ ಗುಡ್ಬೈ ಹೇಳಿ ಹೊರಟು ಹೋಗಿದ್ದಾನೆ. ಆದರೆ ಜನ ಚಕ್ರೆಯ ರಾಜಕೀಯ ಜೀವನಕ್ಕಿಂತ ಹೆಚ್ಚು ಕುತೂಲದಿಂದ ಕೇಳೋದು ಆತನ ಅಂಡರ್ವರ್ಲ್ಡ್ ಜನಿರ್ಯಯನ್ನ. ಆತ ಬೆಂಗಳೂರು ಭೂಗತ ಲೋಕದಲ್ಲಿ ಬೆಳೆದ ರೀತಿ ನಿಜಕ್ಕೂ ರೋಚಕ. ಅಷ್ಟಕ್ಕೂ ಬೆಂಗಳೂರು ಅಂಡರ್ವರ್ಲ್ಡ್ ಅನ್ನೋದು ಗಾರ್ಡನ್ ಸಿಟಿಯಲ್ಲಿ ಪೀಕ್ನಲ್ಲಿದ್ದಾಗ ಈ ಪಾತಕ ಲೋಕಕ್ಕೆ ಚಕ್ರೆ ಹೇಗೆ ಎಂಟ್ರಿ ಕೊಟ್ಟ. ಆತನಿಗೆ ಈ ಭೂಗತ ಲೋಕದ ನಂಟು ಬೆಳದಿದ್ದೇಗೆ..? ಅನ್ನೋದರ ಮಾಹಿತಿ ನಿಜಕ್ಕೂ ರೋಚಕ.

ಪ್ರೇಮ ಗೀಮ ಜಾನೇದೋ ಅಂದ್ರೆ ಮೋಸವೋ...ನಗ್ನಚಿತ್ರಗಳಿಗೆ ನಾಶವಾಯ್ತು ಪ್ರೀತಿ..!

ಅವನು ಸೈನಿಕನ ಮಗ. ಲಾಯರ್ ಆಗುವ ಕನಸು ಕಂಡವನು. ಆದ್ರೆ ಈತನಿಗೆ ಇಂಡಿಯನ್ ಲಾ ಬುಕ್ಗಿಂತ ಬೆಂಗಳೂರು ಅಂಡರ್ವರ್ಲ್ಡ್ ಹೆಚ್ಚು ಆಕರ್ಷಕವಾಗಿ ಕಂಡಿತ್ತು. ಶಾಲೆಗೆ ಹೋಗುವ ಸಮಯದಲ್ಲೇ ಕೆಟ್ಟ ಸಹವಾಸಕ್ಕೆ ಬಿದ್ದು ಪೋಲಿ ಅಲೆಯೋದಕ್ಕೆ ಶುರು ಮಾಡಿದ್ದ ಚಕ್ರೆ. ಚಿಕ್ಕವಯಸ್ಸಿನಲ್ಲೇ ಭೂಗತ ಲೋಕಕ್ಕೆ ಎಂಟ್ರಿ ಕೊಡಲು ಹಪಹಪಸುತ್ತಿದ್ದ. 
 

Video Top Stories