ಪ್ರೇಮ ಗೀಮ ಜಾನೇದೋ ಅಂದ್ರೆ ಮೋಸವೋ...ನಗ್ನಚಿತ್ರಗಳಿಗೆ ನಾಶವಾಯ್ತು ಪ್ರೀತಿ..!

ಖಾಸಗಿ ಕ್ಷಣದ ಫೋಟೋಗಳು ಹಾಗೂ ವಿಡಿಯೋಗಳನ್ನು ಸೋಷಿಯಲ್‌ ಮೀಡಿಯಾಗಳಿಗೆ ಹಾಕಿದ್ದಕ್ಕೆ ಆರ್ಕಿಟೆಕ್ಟ್‌ ಆಗಿದ್ದ ಹುಡುಗಿಯೊಬ್ಬಳು, ವೈದ್ಯನಾಗಿದ್ದ ಪ್ರಿಯತಮನನ್ನು ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. ಅಚ್ಚರಿಯ ವಿಚಾರವೆಂದರೆ, ಮದುವೆಗೆ ಕೇವಲ ಮೂರು ತಿಂಗಳು ಇರುವಾಗಲೇ ಈ ಘಟನೆ ನಡೆದಿದೆ.
 

Share this Video
  • FB
  • Linkdin
  • Whatsapp

ಬೆಂಗಳೂರು (ಸೆ.23): ಅವನು ಡಾಕ್ಟರ್... ದೂರದ ಉಕ್ರೇನ್‌ನಲ್ಲಿ ಎಂ.ಬಿ.ಬಿಎಸ್ ಮಾಡಿ ತನ್ನ ಹುಟ್ಟೂರು ಚೆನ್ನೈನಲ್ಲಿ ಡಾಕ್ಟರ್ ಆಗಿದ್ದ. ಇದೇ ಡಾಕ್ಟರ್‌ಗೆ ಬೆಂಗಳೂರಿನ ಸುಂದರಿಯೊಬ್ಬಳ ಪರಿಚಯವಾಗುತ್ತೆ. ಪರಿಚಯ ಸ್ನೇಹವಾಗಿ ನಂತರ ಅದು ಪ್ರೀತಿಗೆ ತಿರುಗುತ್ತೆ. ಇಬ್ಬರೂ ತಮ್ಮ ಪೋಷಕರನ್ನ ಒಪ್ಪಿಸಿ ಮದುವೆಗೂ ಸಿದ್ಧರಾಗ್ತಾರೆ. ಇನ್ನೇನು ಮದುವೆಯಾಗಲು ಮೂರು ತಿಂಗಳಷ್ಟೇ ಬಾಕಿ ಇದ್ದಿದ್ದು. ಅಷ್ಟರಲ್ಲೇ ಮಧುಮಗ ಸಾವನ್ನಪ್ಪಿಬಿಡ್ತಾನೆ. ಹಸೆಮಣೆ ಏರಬೇಕಿದ್ದವನು, ಸ್ಮಶಾನ ಸೇರಿಕೊಳ್ತಾನೆ. ಆದ್ರೆ ಅವನ ಸಾವು ಸಹಜವಾಗಿರೋದಿಲ್ಲ. ಅವನನ್ನ ಕೊಂದು ಮುಗಿಸಲಾಗಿರುತ್ತೆ. ಹಾಗಾದ್ರೆ ಆ ವೈದ್ಯನನ್ನ ಕೊಂದವರು ಯಾರು? 

ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ವಿಕಾಸ್ ಮತ್ತು ಪ್ರತಿಭಾ ಡೀಪ್ ಲವ್ನಲ್ಲಿ ಬಿದ್ದುಬಿಡ್ತಾರೆ. ಇಬ್ಬರ ನಡುವೆ ದೇಹ ಸಂಬಂಧ ಕೂಡ ಬೆಳೆದಿರುತ್ತೆ. ಇನ್ನೂ ಇವರಿಬ್ಬರೂ ರಿಲೇಷನ್ಶಿಪ್ನಲ್ಲಿ ಸೀರಿಯಸ್ ಆಗಿದ್ರಿಂದ ಮದುವೆ ಆಗಲು ನಿರ್ಧರಿಸಿ ತಮ್ಮ ತಮ್ಮ ಮನೆಯವರನ್ನ ಒಪ್ಪಿಸಿರುತ್ತಾರೆ. ಮದುವೆಗೆ ಇನ್ನೂ ಕೆಲವೇ ತಿಂಗಳುಗಳು ಬಾಕಿ ಇರುತ್ವೆ ಆದ್ರೆ ಇದೇ ಟೈಂನಲ್ಲಿ ವಿಕಾಸ್ ಒಂದು ಎಡವಟ್ಟು ಮಾಡಿಬಿಡ್ತಾನೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೋಟಿ ಮಾತನಾಡಿದರೂ, ಕೋಟಿ ಮುತ್ತ ನೀಡಿದರೂ.. ಪ್ರೀತಿಸಿದವನನ್ನೇ ಕೊಂದಳು!

ಯಾವಾಗ ಪ್ರತಿಭಾ ತನ್ನ ಸ್ನೇಹಿತರ ಬಳಿ ಹೋಗಿ ವಿಕಾಸ್ ಹೀಗೆ ಮಾಡಿಬಿಟ್ಟ ಅಂತ ಹೇಳ್ತಾಳೋ ಆಕೆಯ ಸ್ನೇಹಿತರು ವಿಕಾಸನಿಗೆ ಬುದ್ಧಿ ಕಲಿಸುವ ನಿರ್ಧಾರ ಮಾಡ್ತಾರೆ. ಆತ ಮಾಡಿರುವ ತಪ್ಪಿಗೆ ಪಾಠ ಕಲಿಸಬೇಕು ಅಂತ ಹೇಳಿ ಮಾರನೇ ದಿನ ವಿಕಾಸ್ನನ್ನ ಪ್ರತಿಭಾ ಮೂಲಕ ತಮ್ಮ ಮನೆಗೆ ಕರೆಸಿಕೊಳ್ತಾರೆ. ಚೆನ್ನಾಗಿ ಆತನಿಗೆ ಹಲ್ಲೆ ಮಾಡ್ತಾರೆ. ಆದ್ರೆ ಇವರು ಕೊಟ್ಟ ಏಟಿಗೆ ವಿಕಾಸನ ಪ್ರಾಣ ಪಕ್ಷಿಯೇ ಹಾರಿಹೋಗಿಬಿಡುತ್ತೆ.

Related Video